ದೇಶ

MGNREGA ಅಡಿಯಲ್ಲಿನ ವೇತನ ಅಸಮರ್ಪಕ, ಏರುಗತಿಯಲ್ಲಿರುವ ವೆಚ್ಚಕ್ಕೆ ಅನುಗುಣವಾಗಿಲ್ಲ: ಸಂಸದೀಯ ಸಮಿತಿ

Srinivas Rao BV

ನವದೆಹಲಿ: ಗ್ರಾಮೀಣ ಉದ್ಯೋಗ ಖಾತ್ರಿ (MGNREGA) ಯೋಜನೆಯಡಿಯಲ್ಲಿ ನೀಡಲಾಗುತ್ತಿರುವ ದಿನದ ವೇತನ ಅಸಮರ್ಪಕವಾಗಿದ್ದು, ಹೆಚ್ಚುತ್ತಿರುವ ಜೀವನ ವೆಚ್ಚಕ್ಕೆ ಅನುಗುಣವಾಗಿಲ್ಲ ಎಂದು ಸಂಸದೀಯ ಸಮಿತಿಯೊಂದು ಗುರುವಾರ ಸರ್ಕಾರಕ್ಕೆ ತಿಳಿಸಿದೆ.

ಈ ಯೋಜನೆಯಡಿ ಕಾರ್ಮಿಕರ ಕೊರತೆಗೆ ಇದೇ ಕಾರಣವಿರಬಹುದು ಎಂದು ಸಂಸದೀಯ ಸಮಿತಿ ಹೇಳಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ನ ಸಂಸದೀಯ ಸ್ಥಾಯಿ ಸಮಿತಿ ಲೋಕಸಭೆಯಲ್ಲಿ ಈ ವರದಿಯನ್ನು ಮಂಡಿಸಿದ್ದು, ರಾಜ್ಯಗಳಾದ್ಯಂತ MGNREGA ವೇತನದಲ್ಲಿ ಹೆಚ್ಚಿನ ಶ್ರೇಣಿಯ ವ್ಯತ್ಯಾಸಗಳನ್ನು ಉಲ್ಲೇಖಿಸಿದೆ.

"ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ 221 ರೂ., ಅರುಣಾಚಲ ಪ್ರದೇಶದಲ್ಲಿ ರೂ. 224, ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ರೂ. 228 ರಿಂದ ಸಿಕ್ಕಿಂನ ಮೂರು ಗ್ರಾಮ ಪಂಚಾಯತ್‌ಗಳಲ್ಲಿ (ಗ್ನಾಥಂಗ್, ಲಾಚುಂಗ್ ಮತ್ತು ಲಾಚೆನ್) ರೂ. 354 ರವರೆಗೆ ವೇತನದ ಶ್ರೇಣಿಯು ಬದಲಾಗುತ್ತಿದೆ ಎಂದು ಸಮಿತಿ ಹೇಳಿದೆ. ನಿಕೋಬಾರ್‌ನಲ್ಲಿ ರೂ 328 ಮತ್ತು ಅಂಡಮಾನ್‌ನಲ್ಲಿ ರೂ 311 ವೇತನ ಶ್ರೇಣಿ ಇದೆ ಎಂದು ಅದು ಹೇಳಿದೆ.

"2008 ರಿಂದ ಕಾರ್ಮಿಕರ ಪ್ರಮಾಣವನ್ನು ಗಮನಿಸಿದಾಗ, ಸಮಿತಿ ವೇತನ ಅಸಮರ್ಪಕವಾಗಿದೆ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಕ್ಕೆ ಅನುಗುಣವಾಗಿಲ್ಲ ಎಂಬುದನ್ನು ಕಂಡುಕೊಂಡಿದೆ. ಈ ಹಂತದಲ್ಲಿ, ಕೃಷಿ ಕಾರ್ಮಿಕರು ಮತ್ತು ಕಲ್ಲು/ವಿವಿಧ ಕೆಲಸಗಳಲ್ಲಿ ತೊಡಗಿರುವ ಇತರ ಕಾರ್ಮಿಕರು MGNREGA ಅಡಿಯಲ್ಲಿ ಖಾತರಿಪಡಿಸಲಾಗಿರುವುದಕ್ಕಿಂತ ಹೆಚ್ಚಿನ ದೈನಂದಿನ ಕೂಲಿಯನ್ನು ಕೇಳುತ್ತಾರೆ ಎಂದು ಸಮಿತಿ ಹೇಳಿದೆ.

MGNREGA ಅಡಿಯಲ್ಲಿ ವೇತನ ದರಗಳ ಕೊರತೆ "ಬಹುಶಃ, ಕಾರ್ಮಿಕರ ಕೊರತೆಗೆ ಕಾರಣವಿರಬಹುದು ಎಂದು ಸಮಿತಿ ಹೇಳಿದೆ. ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ವೇತನವನ್ನು ದಿನಕ್ಕೆ 375 ರೂ.ಗಳಾಗಿರಬೇಕು ಎಂದು ಶಿಫಾರಸು ಮಾಡಿದ ಕನಿಷ್ಠ ವೇತನಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರದ ಸಮಿತಿಯಾದ ಅನೂಪ್ ಸತ್ಪತಿ ಸಮಿತಿಯ ವರದಿಯನ್ನು ಈ ಸ್ಥಾಯಿ ಸಮಿತಿ ಉಲ್ಲೇಖಿಸಿದೆ.

SCROLL FOR NEXT