ಸಾಂದರ್ಭಿಕ ಚಿತ್ರ 
ದೇಶ

ಹೀಗೆ ಮುಂದುವರಿದರೆ ಹರಿದ ಜೀನ್ಸ್‌, ಪೈಜಾಮ ಧರಿಸಲೂ ಅನುಮತಿ ಕೇಳಬಹುದು: ವಕೀಲನಿಗೆ ಗುವಾಹಟಿ ಹೈಕೋರ್ಟ್‌ ಚಾಟಿ

ಜೀನ್ಸ್‌ ಪ್ಯಾಂಟ್ ಧರಿಸಿ ಕೋರ್ಟ್ ಗೆ ಆಗಮಿಸಿದ್ದ ವಕೀಲರೊಬ್ಬರನ್ನು ತರಾಟೆಗೆ ತೆಗೆದುಕೊಂಡಿರುವ ಗುವಾಹಟಿ  ಹೈಕೋರ್ಟ್ ಹೀಗೆ ಬಿಟ್ಟರೆ ಹರಿದ ಜೀನ್ಸ್‌, ಪೈಜಾಮ ಧರಿಸಲೂ ಅನುಮತಿ ಕೇಳಬಹುದು ಕಿಡಿಕಾರಿದೆ.

ಗುವಾಹಟಿ: ಜೀನ್ಸ್‌ ಪ್ಯಾಂಟ್ ಧರಿಸಿ ಕೋರ್ಟ್ ಗೆ ಆಗಮಿಸಿದ್ದ ವಕೀಲರೊಬ್ಬರನ್ನು ತರಾಟೆಗೆ ತೆಗೆದುಕೊಂಡಿರುವ ಗುವಾಹಟಿ  ಹೈಕೋರ್ಟ್ ಹೀಗೆ ಬಿಟ್ಟರೆ ಹರಿದ ಜೀನ್ಸ್‌, ಪೈಜಾಮ ಧರಿಸಲೂ ಅನುಮತಿ ಕೇಳಬಹುದು ಕಿಡಿಕಾರಿದೆ.

ಜೀನ್ಸ್ ಧರಿಸಿ ನ್ಯಾಯಾಲಯಕ್ಕೆ ಹಾಜರಾದ ವಕೀಲರನ್ನು ನ್ಯಾಯಾಲಯದ ಆವರಣದಿಂದ ಹೊರಗೆ ಕಳಿಸುವಂತೆ ಕಳೆದ ವರ್ಷ ಹೊರಡಿಸಿದ್ದ ಆದೇಶ (ಬಿಜೋನ್ ಕುಮಾರ್ ಮಹಾಜನ್ ಮತ್ತು ಅಸ್ಸಾಂ ಸರ್ಕಾರ ನಡುವಣ ಪ್ರಕರಣ)ದಲ್ಲಿ ಯಾವುದೇ ಮಾರ್ಪಾಡುಗಳನ್ನು ಮಾಡಲು ಗುವಾಹಟಿ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿದ್ದು, ಜೀನ್ಸ್‌ ಧರಿಸಿ ನ್ಯಾಯಾಲಯಕ್ಕೆ ಹಾಜರಾಗದಂತೆ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಆದೇಶಿಸಿದ್ದರೂ ಗುವಾಹಟಿ ಹೈಕೋರ್ಟ್ ನಿಯಮಗಳ ಅಡಿಯಲ್ಲಿ ಆ ಬಗ್ಗೆ ಸ್ಪಷ್ಟತೆ ಇಲ್ಲ ಎಂಬ ಆಧಾರದಲ್ಲಿ ಈ ಹಿಂದೆ ನೀಡಲಾಗಿದ್ದ ಆದೇಶ ಮಾರ್ಪಡಿಸುವಂತೆ ಕೋರಿದ್ದ ವಕೀಲ ಬಿಜನ್‌ ಕುಮಾರ್‌ ಮಹಾಜನ್‌ ಅವರನ್ನು ನ್ಯಾಯಮೂರ್ತಿ ಕಲ್ಯಾಣ್ ರಾಯ್ ಸುರಾನಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಆದೇಶ ಮಾರ್ಪಡಿಸಲು ಮನವಿ ಸಲ್ಲಿಸುವ ಮೂಲಕ ಮಹಾಜನ್‌ ಅವರು ಸಮಸ್ಯೆಯನ್ನು ಹೆಚ್ಚಿಸುತ್ತಿದ್ದಾರೆ. ಇದು ನಿರೀಕ್ಷೆಗೂ ಮಿಗಿಲಾದ ಸಮಸ್ಯೆ ಸೃಷ್ಟಿಸಬಹುದು. ನ್ಯಾಯಾಲಯದಲ್ಲಿ ಜೀನ್ಸ್‌ ಧರಿಸಲು ಅವಕಾಶ ನೀಡಿದರೆ ಗುವಾಹಟಿ ಹೈಕೋರ್ಟ್‌ನಲ್ಲಿ ನಿರ್ದಿಷ್ಟ ನಿಯಮಗಳಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರು ಮುಂದೆ ಹರಿದ ಜೀನ್ಸ್‌ (ಟೋರ್ನ್‌ ಜೀನ್ಸ್), ಮಸುಕು ಜೀನ್ಸ್‌ (ಫೇಡೆಡ್‌ ಜೀನ್ಸ್), ಫ್ಯಾಷನ್‌ ಎಂದು ಪರಿಗಣಿಸಲಾಗುವ ಮುದ್ರಿತ ಪ್ಯಾಚ್‌ ಇರುವ ಜೀನ್ಸ್‌, ಇಲ್ಲವೇ ಕಪ್ಪು ಟ್ರ್ಯಾಕ್‌ ಪ್ಯಾಂಟ್‌ ಅಥವಾ ಕಪ್ಪು ಪೈಜಾಮಾದಲ್ಲಿ ಕಾಣಿಸಿಕೊಳ್ಳಲು ಅನುಮತಿಸಬಾರದೇಕೆ ಎಂದು ಕೇಳಬಹುದು" ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

2023ರ ಜನವರಿಯಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯೊಂದರ ವಿಚಾರಣೆ ವೇಳೆ, ವಕೀಲ ಜೀನ್ಸ್ ಧರಿಸಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆಗ ಏಕಸದಸ್ಯ ಪೀಠ ಅವರನ್ನು ಹೈಕೋರ್ಟ್ ಆವರಣದಿಂದ ಹೊರಗೆ ಕರೆದೊಯ್ಯುವಂತೆ ಪೊಲೀಸರಿಗೆ ಆದೇಶಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT