ಸುಪ್ರೀಂಕೋರ್ಟ್ PTI
ದೇಶ

ಚುನಾವಣಾ ಬಾಂಡ್ ಗಳಿಗೆ ಸುಪ್ರೀಂ ಕೋರ್ಟ್ ನಿಷೇಧ!

ಚುನಾವಣಾ ಬಾಂಡ್ ಗಳು ಮಾಹಿತಿ ಹಕ್ಕನ್ನು ಉಲ್ಲಂಘನೆ ಮಾಡುತ್ತವೆ ಎಂದು ಸುಪ್ರೀಂಮ್ ಕೋರ್ಟ್ ಹೇಳಿದ್ದು, ಇಬಿಎಸ್ (Electoral Bond Scheme) ನ್ನು ನಿಷೇಧಿಸಿದೆ.

ನವದೆಹಲಿ: ಚುನಾವಣಾ ಬಾಂಡ್ ಗಳು ಮಾಹಿತಿ ಹಕ್ಕನ್ನು ಉಲ್ಲಂಘನೆ ಮಾಡುತ್ತವೆ ಎಂದು ಸುಪ್ರೀಂಮ್ ಕೋರ್ಟ್ ಹೇಳಿದ್ದು, ಇಬಿಎಸ್ (Electoral Bond Scheme) ನ್ನು ನಿಷೇಧಿಸಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ನೇತೃತ್ವದ ಪೀಠ ಚುನಾವಣಾ ಬಾಂಡ್ ಗಳನ್ನು ಅಸಾಂವಿಧಾನಿಕ ಎಂದು ಹೇಳಿದ್ದು, ಬ್ಯಾಂಕ್ ಗಳು ಚುನಾವಣಾ ಬಾಂಡ್ ಗಳನ್ನು ನೀಡುವುದನ್ನು ನಿಲ್ಲಿಸಲಿ ಎಂದು ಮಹತ್ವದ ತೀರ್ಪು ಪ್ರಕಟಿಸಿದೆ.

2019 ರಿಂದ ಎಷ್ಟು ದೇಣಿಗೆ ಬಂದಿದೆ, ಎಷ್ಟು ಹಣವನ್ನು ರಾಜಕೀಯ ಪಕ್ಷಗಳು ಬಳಸಿಕೊಂಡಿದೆ ಎಂದು ಮಾಹಿತಿ ನೀಡಲು ಇದೇ ವೇಳೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.

ಕಪ್ಪು ಹಣಕ್ಕೆ ಕಡಿವಾಣ ಹಾಕಲು ಚುನಾವಣಾ ಬಾಂಡ್ ಯೋಜನೆ ಒಂದೇ ದಾರಿಯಲ್ಲ ಅದಕ್ಕೆ ಪರ್ಯಾಯ ಮಾರ್ಗಗಳಿವೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಸುಪ್ರೀಂ ಕೋರ್ಟ್ ಹೇಳಿದೆ. 15 ದಿನಗಳ ಸಿಂಧುತ್ವ ಇರುವ ಚುನಾವಣಾ ಬಾಂಡ್ ಗಳನ್ನು ರಾಜಕೀಯ ಪಕ್ಷಗಳು ನಗದು ರೂಪಕ್ಕೆ ಪರಿವರ್ತನೆಗೊಳಿಸದೇ ಇದ್ದಲ್ಲಿ ಅದನ್ನು ಖರೀದಿಸಿರುವವರಿಗೆ ವಾಪಸ್ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಬ್ಯಾಂಕ್ ಗಳು ಬಾಂಡ್ ಗಳನ್ನು ವಾಪಸ್ ಪಡೆದು ಖರೀದಿದಾರರಿಗೆ ಹಣವನ್ನು ವಾಪಸ್ ನೀಡಬೇಕಿದೆ.

ಕೇವಲ ಬೆಂಬಲಕ್ಕಾಗಿ ರಾಜಕೀಯ ಪಕ್ಷಗಳಿಗೆ ಆರ್ಥಿಕ ಬೆಂಬಲವನ್ನು ನೀಡಲಾಗುತ್ತದೆ. ಅಥವಾ ಪರಸ್ಪರ ಲಾಭಕ್ಕಾಗಿ ಈ ರೀತಿಯ ಕೊಡುಗೆಗಳನ್ನು ನೀಡುವ ಸಾಧ್ಯತೆ
ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ ಆದೇಶದ ಇನ್ನಿತರ ಮುಖ್ಯಾಂಶಗಳು

  • ಮಾ.06 ರ ವೇಳೆಗೆ ಎಸ್ ಬಿಐ (SBI) ಚುನಾವಣಾ ಆಯೋಗಕ್ಕೆ (Election Commission ) ಚುನಾವಣಾ ಬಾಂಡ್ (electoral bonds ) ಗಳ ಕುರಿತು ಮಾಹಿತಿಯನ್ನು ಸಲ್ಲಿಸಬೇಕು

  • ರಾಜಕೀಯ ಪಕ್ಷಗಳು ನಗದಾಗಿ ಪರಿವರ್ತಿಸಿಕೊಂಡ ಪ್ರತಿಯೊಂದು ಚುನಾವಣಾ ಬಾಂಡ್ ಗಳ ಕುರಿತು ಎಸ್ ಬಿಐ ನಗದಿನ ದಿನಾಂಕ, ಮುಖಬೆಲೆ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಬಹಿರಂಗಗಿಳಿಸಬೇಕು

  • ಚುನಾವಣಾ ಆಯೋಗ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾರ್ಚ್ 13 ರೊಳಗೆ SBI ಹಂಚಿಕೊಂಡ ಮಾಹಿತಿಯನ್ನು ಪ್ರಕಟಿಸಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಒಬ್ಬ ಅಲ್ಲ.. ಭಾರತದ ಮೇಲೆ ದಾಳಿಗೆ ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧ': ಪಾಕ್ ಮೂಲದ ಉಗ್ರ Masood Azhar ಆಡಿಯೋ ವೈರಲ್!

Pak ಸಚಿವನಿಗೆ ಮುಖಭಂಗ: ನೆತನ್ಯಾಹು ವಿರುದ್ಧ ಮಾತಾಡ್ತಿದ್ದಂತೆ ಶೋ ನಿಲ್ಲಿಸಿ ಆಸಿಫ್‌ನನ್ನು ಹೊರಕಹಿಸಿದ ಆ್ಯಂಕರ್, Video!

'ಅಪ್ಪ-ಅಮ್ಮನ ಪ್ರಜ್ಞೆ ತಪ್ಪಿಸಿ ಕಟ್ಟಿಹಾಕಿ ಕಳ್ಳತನ': ಮನೆಗೆಲಸದವರ ಮೇಲೆ ಮಾಜಿ ಐಎಎಸ್ ಅಧಿಕಾರಿ Puja Khedkar ಆರೋಪ!

1st ODI: ಮಿಚೆಲ್ ಸ್ಫೋಟಕ ಭರ್ಜರಿ ಬ್ಯಾಟಿಂಗ್, ಭಾರತಕ್ಕೆ ಗೆಲ್ಲಲು ಬೃಹತ್ ಗುರಿ ನೀಡಿದ ಕಿವೀಸ್

ಕೇರಳದಲ್ಲಿ ಕಾನೂನು ಸುವ್ಯವಸ್ಥೆಗೆ ಬೆದರಿಕೆ: SDPI, ಜಮಾತ್, ಸಂಘಟನೆಗಳ ಪಾತ್ರ ಪ್ರಶ್ನಿಸಿದ ಅಮಿತ್ ಶಾ!

SCROLL FOR NEXT