ಅಮಿತ್ ಶಾ
ಅಮಿತ್ ಶಾ 
ದೇಶ

'2ಜಿ, 3ಜಿ ಮತ್ತು 4ಜಿ ಪಕ್ಷಗಳು': ಪ್ರತಿಪಕ್ಷಗಳಿಗೆ ಅಮಿತ್ ಶಾ ಗೇಲಿ!

Nagaraja AB

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯನ್ನು ಮಹಾಭಾರತ ಯುದ್ಧಕ್ಕೆ ಹೋಲಿಸಿರುವ ಗೃಹ ಸಚಿವ ಅಮಿತ್ ಶಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬಿಜೆಪಿಯನ್ನು ಮುನ್ನಡೆಸುತ್ತಿದ್ದರೆ ಕಾಂಗ್ರೆಸ್ ನೇತೃತ್ವದ “ ಇಂಡಿಯಾ ಮೈತ್ರಿಕೂಟ ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದಿಂದ ತುಂಬಿದೆ ಎಂದು ಟೀಕಿಸಿದರು. ಬಿಜೆಪಿ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, ಕುಟುಂಬ ರಾಜಕಾರಣ ಮತ್ತು ತುಷ್ಟೀಕರಣವನ್ನು ಗುರಿಯಾಗಿಸಿಕೊಂಡು ಇಂಡಿಯಾ ಮೈತ್ರಿಕೂಟದ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಮಹಾಭಾರತ ಯುದ್ಧದಲ್ಲಿ ಕೌರವರು ಮತ್ತು ಪಾಂಡವರು ಎಂಬ ಎರಡು ಪಾಳಯಗಳಿದ್ದಂತೆ ಇಂದು ಚುನಾವಣೆಗೂ ಮುನ್ನ ಎರಡು ಪಾಳೆಯಗಳಿವೆ. ಅದರಲ್ಲಿ ಒಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ, ಇನ್ನೊಂದು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಎಂದು ಹೇಳಿದರು.

ಇಂಡಿಯಾ ಮೈತ್ರಿಕೂಟ ಎಲ್ಲಾ ಕುಟುಂಬ ರಾಜಕಾರಣದ ಮೈತ್ರಿಯಾಗಿದ್ದು, ಇದು ಭ್ರಷ್ಟಾಚಾರ, ತುಷ್ಟೀಕರಣದ ರಾಜಕೀಯವನ್ನು ಪೋಷಿಸುತ್ತದೆ, ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ ರಾಷ್ಟ್ರದ ತತ್ವಗಳನ್ನು ಅನುಸರಿಸುವ ಪಕ್ಷಗಳ ಮೈತ್ರಿಯಾಗಿದೆ" ಈ ಬಾರಿಯ ಚುನಾವಣೆಯಲ್ಲಿ ಯಾವುದಕ್ಕೆ ಜನಾದೇಶ ನೀಡಬೇಕೆಂದು ದೇಶದ ಜನರು ನಿರ್ಧರಿಸಬೇಕು ಎಂದರು.

ವಿರೋಧ ಪಕ್ಷಗಳು 2G, 3G ಮತ್ತು 4G" ಪಕ್ಷಗಳಿಂದ ತುಂಬಿದೆ. ಕುಟುಂಬಗಳ ಎರಡು, ಮೂರು ಮತ್ತು ನಾಲ್ಕನೇ ತಲೆಮಾರು ಈ ಪಕ್ಷಗಳನ್ನು ಮುನ್ನಡೆಸುತ್ತಿವೆ. ಇಂಡಿಯಾ ಮೈತ್ರಿಕೂಟಗಳ ವಂಶಾಡಳಿತ, ಭ್ರಷ್ಟಾಚಾರ, ತುಷ್ಟೀಕರಣ ಮತ್ತು ಜಾತಿ ರಾಜಕಾರಣವನ್ನು ಕೊನೆಗಾಣಿಸುವ ಮೂಲಕ ಪ್ರಧಾನಿ ಮೋದಿ ಅಭಿವೃದ್ಧಿಯ ರಾಜಕಾರಣವನ್ನು ಕೇಂದ್ರದ ಹಂತದಲ್ಲಿ ತಂದಿದ್ದಾರೆ ಎಂದು ಹೇಳಿದರು.

SCROLL FOR NEXT