ಮತಗಟ್ಟೆ (ಸಾಂದರ್ಭಿಕ ಚಿತ್ರ) 
ದೇಶ

ದೇಶದಲ್ಲೇ ಮೊದಲು; ಜಾರ್ಖಂಡ್ ನಲ್ಲಿ ಮತದಾರರಿಗೆ ಲಾಂಜ್, ಟಿವಿ ವೀಕ್ಷಣೆ ವ್ಯವಸ್ಥೆ!

ಲೋಕಸಭಾ ಚುನಾವಣೆಗೆ ಮತಚಲಾವಣೆ ಮಾಡಲು, ದೇಶದಲ್ಲೇ ಮೊದಲ ಬಾರಿಗೆ ಜಾಖಂಡ್ ನ 29521 ಮತಗಟ್ಟೆಗಳನ್ನು ಮಾದರಿ ಮತಗಟ್ಟೆಗಳನ್ನಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ.

ಜಾರ್ಖಂಡ್: ಲೋಕಸಭಾ ಚುನಾವಣೆಗೆ ಮತಚಲಾವಣೆ ಮಾಡಲು, ದೇಶದಲ್ಲೇ ಮೊದಲ ಬಾರಿಗೆ ಜಾಖಂಡ್ ನ 29521 ಮತಗಟ್ಟೆಗಳನ್ನು ಮಾದರಿ ಮತಗಟ್ಟೆಗಳನ್ನಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಮತದಾರರಿಗೆ ಈ ಮತಗಟ್ಟೆಗಳಲ್ಲಿ ತಮ್ಮ ಸರತಿ ಬರುವವರೆಗೂ ಕಾಯುವುದಕ್ಕೆ ಆಸನಗಳನ್ನು ಹೊಂದಿರುವ ಲಾಂಜ್, ಟಿವಿ ವೀಕ್ಷಣೆ, ವೈದ್ಯಕೀಯ ಸೌಲಭ್ಯ ಇರಲಿದೆ.

ರಾಜ್ಯಾದ್ಯಂತ ಇರುವ 29521 ಮತಗಟ್ಟೆಗಳನ್ನು ಇದೇ ರೀತಿಯಲ್ಲಿ ಮಾದರಿ ಮತಗಟ್ಟೆಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಮುಖ್ಯ ಚುನಾವಣಾಧಿಕಾರಿ ಕೆ ರವಿ ಕುಮಾರ್ ಹೇಳಿದ್ದಾರೆ. ಎಲ್ಲಾ ಮತಗಟ್ಟೆಗಳನ್ನು ಸರತಿ ಸಾಲು ರಹಿತ ಮತಗಟ್ಟೆಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮತಗಟ್ಟೆಗಳಲ್ಲಿನ ಟಿವಿಯಲ್ಲಿ SVEEP ಸಮಿತಿಯ ಚಟುವಟಿಕೆಗಳನ್ನು ಪ್ರಸಾರ ಮಾಡಲಾಗುತ್ತದೆ. ಜೊತೆಗೆ ವೈದ್ಯಕೀಯ ಸೌಲಭ್ಯ ಹಾಗೂ ಮಕ್ಕಳಿಗೆ ಆಟದ ಸಾಮಾಗ್ರಿ ಕೂಡ ಇದರಲ್ಲಿ ಇರಲಿದೆ’ ಎಂದು ಸಿಇಒ ತಿಳಿಸಿದರು.

ಇದಲ್ಲದೆ, ಪ್ರತಿ ಜಿಲ್ಲೆಯ ಕೆಲವು ಮತಗಟ್ಟೆಗಳನ್ನು ಆ ನಿರ್ದಿಷ್ಟ ಪ್ರದೇಶದ ಸ್ಥಳೀಯ ಕಲೆ ಮತ್ತು ಸಂಸ್ಕೃತಿಯ ಆಧಾರದ ಮೇಲೆ ಥೀಮ್ ಆಧಾರಿತ ಮತಗಟ್ಟೆಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು, ಅದನ್ನು ಜಿಲ್ಲಾಡಳಿತ ನಿರ್ಧರಿಸುತ್ತದೆ ಎಂದು ಸಿಇಒ ಹೇಳಿದ್ದಾರೆ. ತ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT