ಸಿಖ್‌ ಪ್ರತ್ಯೇಕತಾವಾದಿ ಗುರುಪತ್‌ವಂತ್‌ ಸಿಂಗ್‌ ಪನ್ನುನ್
ಸಿಖ್‌ ಪ್ರತ್ಯೇಕತಾವಾದಿ ಗುರುಪತ್‌ವಂತ್‌ ಸಿಂಗ್‌ ಪನ್ನುನ್ TNIE
ದೇಶ

ಭಾರತ- ಇಂಗ್ಲೆಂಡ್ ಟೆಸ್ಟ್ ಅಡ್ಡಿ ಪಡಿಸುವ ಬೆದರಿಕೆ: ಖಲಿಸ್ಥಾನಿ ಪ್ರತ್ಯೇಕತಾವಾದಿ ಪನ್ನುನ್ ವಿರುದ್ಧ FIR

Srinivas Rao BV

ರಾಂಚಿ: ಫೆ.23 ರಿಂದ 27 ವರೆಗೆ ಜೆಎಸ್ ಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂ ನಲ್ಲಿ ಭಾರತ- ಇಂಗ್ಲೆಂಡ್ ಟೆಸ್ಟ್ ಪಂದ್ಯ ನಡೆಯಲಿದೆ. ಎಸ್ಐ ಮದನ್ ಕುಮಾರ್ ಮಹ್ತೋ ಅವರು ದಾಖಲಿಸಿರುವ ಎಫ್ಐಆರ್ ಪ್ರಕಾರ, ಪನ್ನೂನ್ ಭಾರತೀಯರಲ್ಲಿ ಭಯವನ್ನು ಹುಟ್ಟುಹಾಕಲು ಮತ್ತು ಸರ್ಕಾರದ ವಿರುದ್ಧ ಬುಡಕಟ್ಟು ಸಮುದಾಯಗಳಲ್ಲಿ ದ್ವೇಷವನ್ನು ಹುಟ್ಟುಹಾಕಲು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಯತ್ನಗಳನ್ನು ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ಪನ್ನುನ್ ಯುಟ್ಯೂಬ್‌ನಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದ್ದು, ನಿಷೇಧಿತ ರಾಜಕೀಯ ಸಂಘಟನೆ ಮತ್ತು ಉಗ್ರಗಾಮಿ ಸಂಘಟನೆಯಾದ ಸಿಪಿಐ (ಮಾವೋವಾದಿ)ಗೆ ರಾಂಚಿಯಲ್ಲಿ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯಕ್ಕೆ ಅಡ್ಡಿಪಡಿಸಲು ಮತ್ತು ತಡೆಯಲು ಒತ್ತಾಯಿಸಿದ್ದಾನೆ ಎಂದು ಎಫ್‌ಐಆರ್ ನಲ್ಲಿ ಆರೋಪಿಸಲಾಗಿದೆ.

ಇದಲ್ಲದೆ, ಟೆಸ್ಟ್ ಪಂದ್ಯ ನಿಗದಿಯಾಗಿರುವ ರಾಂಚಿಯ ಜೆಎಸ್‌ಸಿಎ ಕ್ರೀಡಾಂಗಣವನ್ನು ಬುಡಕಟ್ಟು ಜನಾಂಗದವರ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಪನ್ನುನ್ ತಮ್ಮ ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ ಎಂದು ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

“ಬುಡಕಟ್ಟು ಜನಾಂಗದವರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಕ್ರೀಡಾಂಗಣವನ್ನು ನಿರ್ಮಿಸುವುದು ಬುಡಕಟ್ಟು ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ. ಆದ್ದರಿಂದ ಈ ಕ್ರೀಡಾಂಗಣದಲ್ಲಿ ಯಾವುದೇ ರೀತಿಯ ಪಂದ್ಯಗಳನ್ನು ನಡೆಸಬಾರದು ಎಂದು ಪನ್ನುನ್ ತನ್ನ ವೀಡಿಯೊದಲ್ಲಿ ಹೇಳಿದ್ದಾನೆ.

ಎರಡು ರಾಷ್ಟ್ರಗಳ ನಡುವೆ ಶಾಂತಿ ಕದಡಲು ಪನ್ನುನ್ ಪ್ರಯತ್ನಿಸಿದ್ದಾನೆ ಮತ್ತು ಆತ ವೀಡಿಯೊ ಜನರಲ್ಲಿ ಭೀತಿಯನ್ನು ಉಂಟುಮಾಡಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದ್ದು ಇದು ಬಿಸಿಸಿಐ ಮತ್ತು ಭಾರತಕ್ಕೆ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು ಎಂಬ ಅಂಶವನ್ನೂ ಉಲ್ಲೇಖಿಸಲಾಗಿದೆ.

SCROLL FOR NEXT