ಸಾಂದರ್ಭಿಕ ಚಿತ್ರ 
ದೇಶ

ಈ ಬಾರಿ 14 ವಿದೇಶಿ ನಗರಗಳಲ್ಲೂ NEET-UG ಪರೀಕ್ಷೆ ಬರೆಯಬಹುದು

ವೈದ್ಯಕೀಯ ಪ್ರವೇಶ ಪರೀಕ್ಷೆ NEET-UG ಅನ್ನು ಈ ಬಾರಿ 14 ವಿದೇಶಿ ನಗರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಮೇ 5 ರಂದು ಪರೀಕ್ಷೆ ನಡೆಸಲಾಗುವುದು.

ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ NEET-UG ಅನ್ನು ಈ ಬಾರಿ 14 ವಿದೇಶಿ ನಗರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಮೇ 5 ರಂದು ಪರೀಕ್ಷೆ ನಡೆಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಬುಧವಾರ ಪ್ರಕಟಿಸಿದೆ.

ನೀಟ್-ಯುಜಿ ಕುರಿತು ಈ ತಿಂಗಳ ಆರಂಭದಲ್ಲಿ ನೀಡಲಾದ ಬುಲೆಟಿನ್‌ನಲ್ಲಿ ಅಭ್ಯರ್ಥಿಗಳು ಭಾರತದ ಹೊರಗಿನ ಕೇಂದ್ರಗಳಲ್ಲೂ ಪರೀಕ್ಷೆ ಬರೆಯುವ ಬಗ್ಗೆ ಯಾವುದೇ ಉಲ್ಲೇಖ ಇರಲಿಲ್ಲ. ಈ ಸಂಬಂಧ ಅಭ್ಯರ್ಥಿಗಳಿಂದ ಮನವಿ ಸ್ವೀಕರಿಸಿದ ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಈ ಕ್ರಮ ಕೈಗೊಂಡಿದೆ.

"12 ದೇಶಗಳ 14 ವಿದೇಶಿ ನಗರಗಳಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ" ಎಂದು ಎನ್‌ಟಿಎ ಹಿರಿಯ ನಿರ್ದೇಶಕಿ(ಪರೀಕ್ಷೆಗಳು) ಸಾಧನಾ ಪರಾಶರ್ ಅವರು ತಿಳಿಸಿದ್ದಾರೆ.

ಪರೀಕ್ಷೆ ನಡೆಸುವ 14 ವಿದೇಶಿ ನಗರಗಳೆಂದರೆ ದುಬೈ, ಅಬುಧಾಬಿ ಮತ್ತು ಶಾರ್ಜಾ(ಯುಎಇ); ಕುವೈತ್‌ನಲ್ಲಿ ಕುವೈತ್ ನಗರ; ಥೈಲ್ಯಾಂಡ್ನಲ್ಲಿ ಬ್ಯಾಂಕಾಕ್; ಶ್ರೀಲಂಕಾದಲ್ಲಿ ಕೊಲಂಬೊ; ಕತಾರ್‌ನಲ್ಲಿ ದೋಹಾ; ನೇಪಾಳದ ಕಠ್ಮಂಡು; ಮಲೇಷಿಯಾದ ಕೌಲಾಲಂಪುರ್; ನೈಜೀರಿಯಾದಲ್ಲಿ ಲಾಗೋಸ್; ಬಹ್ರೇನ್‌ನಲ್ಲಿ ಮನಮಾ; ಓಮನ್‌ನಲ್ಲಿ ಮಸ್ಕತ್; ಸೌದಿ ಅರೇಬಿಯಾದಲ್ಲಿ ರಿಯಾದ್; ಮತ್ತು ಸಿಂಗಾಪುರ.

ಭಾರತದಾದ್ಯಂತ 554 ಕೇಂದ್ರಗಳಲ್ಲಿ ನೀಟ್-ಯುಜಿ ಪರೀಕ್ಷೆ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

SCROLL FOR NEXT