ಶಾಸಕ ಅಜಿತ್ ಮೈತಿ ಮೇಲೆ ಹಲ್ಲೆ 
ದೇಶ

ಪಶ್ಚಿಮ ಬಂಗಾಳ: ಸಂದೇಶಖಾಲಿ ಗ್ರಾಮಸ್ಥರಿಂದ ಟಿಎಂಸಿ ಶಾಸಕ ಅಜಿತ್ ಮೈತಿ ಮೇಲೆ ಹಲ್ಲೆ

ಪಶ್ಚಿಮ ಬಂಗಾಳದ ಹಿಂಸಾಚಾರ ಪೀಡಿತ ಸಂದೇಶಖಾಲಿಯಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಅಜಿತ್ ಮೈತಿ ಅವರ ಮೇಲೆ ಶುಕ್ರವಾರ ಪ್ರತಿಭಟನಾಕಾರರು ಮಾಧ್ಯಮ ಸಿಬ್ಬಂದಿಯ ಸಮ್ಮುಖದಲ್ಲಿ ದೈಹಿಕ ಹಲ್ಲೆ.

ಕೋಲ್ಕತಾ: ಪಶ್ಚಿಮ ಬಂಗಾಳದ ಹಿಂಸಾಚಾರ ಪೀಡಿತ ಸಂದೇಶಖಾಲಿಯಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಅಜಿತ್ ಮೈತಿ ಅವರ ಮೇಲೆ ಶುಕ್ರವಾರ ಪ್ರತಿಭಟನಾಕಾರರು ಮಾಧ್ಯಮ ಸಿಬ್ಬಂದಿಯ ಸಮ್ಮುಖದಲ್ಲಿ ದೈಹಿಕ ಹಲ್ಲೆ ನಡೆಸಿದರು.

ಮೈತಿ ಅವರು ಪಶ್ಚಿಮ ಮೇದಿನಿಪುರದ ಪಿಂಗ್ಲಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.

ಸಂದೇಶಖಾಲಿಯ ಬೆರ್ಮಜೂರ್ ಪ್ರದೇಶದಲ್ಲಿ ಪ್ರತಿಭಟನೆ ಮುಂದುವರೆದಿದ್ದು, ಗ್ರಾಮಸ್ಥರು ಇಂದು ಬೇಲಿಯನ್ನು ಭೇದಿಸಿ ಮೈತಿ ಅವರ ಮನೆಗೆ ನುಗ್ಗಿ ಚಪ್ಪಲಿಯಿಂದ ಥಳಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಕೋಪಗೊಂಡ ಗ್ರಾಮಸ್ಥರು ಶುಕ್ರವಾರ ಪೊಲೀಸರೊಂದಿಗೆ ಘರ್ಷಣೆ ಸಹ ನಡೆಸಿದರು.

ಬೆರ್ಮಜೂರಿನ ಗ್ರಾಮಸ್ಥರು ಪೊಲೀಸ್ ವಾಹನಗಳನ್ನು ಆ ಪ್ರದೇಶದಲ್ಲಿ ಹಾದು ಹೋಗದಂತೆ ತಡೆಯಲು ಪ್ರಯತ್ನಿಸಿದರು.

"ನಾವು ಅವರನ್ನು ಆರಂಭದಲ್ಲಿ ತಡೆಯಲಿಲ್ಲ. ಆದರೆ ಯಾವುದೇ ಆರೋಪವಿಲ್ಲದೆ ನಮ್ಮ ಹುಡುಗರನ್ನು ಏಕೆ ಬಂಧಿಸುತ್ತಿದ್ದಾರೆ ಎಂಬುದರ ಕುರಿತು ನಾವು ಅವರೊಂದಿಗೆ ಮಾತನಾಡಲು ಬಯಸಿದ್ದೆವು. ನಮ್ಮ ಮನವಿಗೆ ಸ್ಪಂದಿಸಲಿಲ್ಲ. ಪೊಲೀಸ್ ವಾಹನವು ಮಹಿಳೆಯ ಕಾಲುಗಳ ಮೇಲೆ ಹಾದುಹೋಯಿತು. ನಾವು ಅವರೊಂದಿಗೆ ಮಾತನಾಡಲು ಬಯಸುತ್ತೇವೆ" ಎಂದು ಮಹಿಳೆಯೊಬ್ಬರು ಹೇಳಿದರು ಎಂದು ಪ್ರತಿಭಟನಾಕಾರರು ಎಎನ್‌ಐಗೆ ತಿಳಿಸಿದ್ದಾರೆ.

"ಈ ದೇಶದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಇದೆಯೇ? ಪೊಲೀಸರು ಬಾಲಕಿಯ ಮೇಲೆ ವಾಹನ ಓಡಿಸಲು ಯತ್ನಿಸಿದರು" ಎಂದು ಮತ್ತೊಬ್ಬ ಪ್ರತಿಭಟನಾಕಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಶೇಖ್ ಷಹಜಹಾನ್, ಸಿರಾಜುದ್ದೀನ್ ಅವರು ನಮ್ಮ ಎಲ್ಲಾ ಜಮೀನುಗಳನ್ನು ವಶಪಡಿಸಿಕೊಂಡಿದ್ದಾರೆ. ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಪೊಲೀಸರು ಪ್ರತಿಭಟನಾಕಾರರನ್ನು ಬಲವಂತವಾಗಿ ಓಡಿಸಿದರು. ಈ ಪ್ರಕ್ರಿಯೆಯಲ್ಲಿ ಪ್ರತಿಭಟನಾಕಾರರಲ್ಲಿ ಒಬ್ಬರು ಕಾಲು ಮುರಿದುಕೊಂಡರು" ಎಂದು ಇನ್ನೊಬ್ಬ ಪ್ರತಿಭಟನಾಕಾರರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

9 ದಿನಗಳಿಂದ ಉಪವಾಸ: ದೇವೇಂದ್ರ ಮಹ್ತೊ ಆಸ್ಪತ್ರೆಗೆ ದಾಖಲು; ಪೊಲೀಸರ ಲಾಠಿಚಾರ್ಚ್ ಖಂಡಿಸಿ ನಾಳೆ ಬಂದ್ ಗೆ BJP ಕರೆ!

ಶಾರುಖ್ ನಟನೆಯ 'ಕಭಿ ಅಲ್ವಿದಾ ನಾ ಕೆಹನಾ' ಚಿತ್ರ ಅಕ್ರಮ ಸಂಬಂಧ ಬೆಂಬಲಿಸಿಲ್ಲ: ಕರಣ್ ಜೋಹರ್ ಪೋಸ್ಟ್ ವೈರಲ್!

ಖಾತೆ ಹಂಚಿಕೆ ಕಸರತ್ತು: ವರಿಷ್ಠರಿಗೆ ಪಟ್ಟಿ ನೀಡಿ ಬೆಂಗಳೂರಿಗೆ CM ಡಿ.ಕೆ ಶಿವಕುಮಾರ್ ವಾಪಸ್; ಹೇಳಿದ್ದೇನು?

ನಾವು ಹಿಂಸಾಚಾರನ ಬೆಂಬಲಿಸಲ್ಲ; ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಸರಿಯಲ್ಲ: ಜಾರ್ಖಂಡ್ ನಡೆ ಖಂಡಿಸಿದ ರಾಹುಲ್!

ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಕನಿಷ್ಠ 47 ಮಂದಿ ಸಾವು, ಡಜನ್ಗಟ್ಟಲೆ ಕಟ್ಟಡಗಳು ಕುಸಿತ!