ಟಿಎಂಸಿ ನಾಯಕನ ವಿರುದ್ಧ ಮಹಿಳೆಯರ ಪ್ರತಿಭಟನೆ 
ದೇಶ

ಟಿಎಂಸಿಗೆ ಮತ ಹಾಕದಿದ್ದಕ್ಕೆ ಆದಿವಾಸಿಗಳಿಗೆ ಚಿತ್ರಹಿಂಸೆ: ಎನ್‌ಸಿಎಸ್‌ಟಿಯ ಸಂದೇಶಖಾಲಿ ತನಿಖಾ ತಂಡ

ಟಿಎಂಸಿಗೆ ಮತ ಹಾಕದಿದ್ದಕ್ಕಾಗಿ ಆದಿವಾಸಿಗಳಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ(ಎನ್‌ಸಿಎಸ್‌ಟಿ) ಹೇಳಿದೆ.

ನವದೆಹಲಿ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಭೂಹಗರಣ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಟಿಎಂಸಿ ನಾಯಕ ಶೇಖ್ ಷಹಜಹಾನ್ ಮತ್ತು ಅವರ ಸಹಚರರು ಬಡ ಬುಡಕಟ್ಟು ಕುಟುಂಬಗಳಿಂದ ಎಂಎನ್‌ಆರ್‌ಇಜಿಎ ವೇತನವನ್ನು ಬಲವಂತವಾಗಿ ತೆಗೆದುಕೊಳ್ಳುತ್ತಾರೆ ಮತ್ತು ಟಿಎಂಸಿಗೆ ಮತ ಹಾಕದಿದ್ದಕ್ಕಾಗಿ ಆದಿವಾಸಿಗಳಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ(ಎನ್‌ಸಿಎಸ್‌ಟಿ) ಹೇಳಿದೆ.

ಪಶ್ಚಿಮ ಬಂಗಾಳ ಪೊಲೀಸರು ಷಹಜಹಾನ್ ಮತ್ತು ಅವರ ಸಹಚರರನ್ನು "ರಕ್ಷಿಸಿದ್ದಾರೆ" ಎಂದು ಎನ್‌ಸಿಎಸ್‌ಟಿ ಉಪಾಧ್ಯಕ್ಷ ಅನಂತ ನಾಯಕ್ ನೇತೃತ್ವದ ಮೂರು ಸದಸ್ಯರ ತನಿಖಾ ತಂಡಕ್ಕೆ ದೂರುದಾರರು ತಿಳಿಸಿದ್ದಾರೆ.

ತನಿಖಾ ತಂಡ ದೆಹಲಿಗೆ ಮರಳಿದ್ದು, ವರದಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದು, ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಎನ್‌ಸಿಎಸ್‌ಟಿ ಹೇಳಿದೆ.

ಷಹಜಹಾನ್ ಮತ್ತು ಅವರ ಸಹಚರರು ಬುಡಕಟ್ಟು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಮತ್ತು ಭೂಕಬಳಿಕೆಗೆ ಸಂಬಂಧಿಸಿದಂತೆ 50ಕ್ಕೂ ಹೆಚ್ಚು ದೂರುಗಳನ್ನು ಸಮಿತಿ ಸ್ವೀಕರಿಸಿದೆ ಎಂದು ನಾಯಕ್ ಅವರು ಪಿಟಿಐಗೆ ತಿಳಿಸಿದ್ದಾರೆ.

ದೂರು ನೀಡಿದವರಲ್ಲಿ ಹೆಚ್ಚಿನವರು ಹಿಂದೂಗಳಾಗಿದ್ದು, ಆರೋಪಿಗಳು ಮತ್ತು ಅವರ ಸಹಚರರು ಚುನಾವಣೆಯಲ್ಲಿ ಇತರ ಪಕ್ಷಗಳಿಗೆ ಮತ ಹಾಕಿದ ಜನರನ್ನು ಹಿಂಸಿಸಿದ್ದಾರೆ ಎಂದು ತನಿಖಾ ತಂಡಕ್ಕೆ ತಿಳಿಸಿರುವುದಾಗಿ ಎನ್‌ಸಿಎಸ್‌ಟಿ ಉಪಾಧ್ಯಕ್ಷರು ಹೇಳಿದ್ದಾರೆ.

ಷಹಜಹಾನ್ ಮತ್ತು ಅವರ ಸಹಚರರು ಸ್ಥಳೀಯ ಮಹಿಳೆಯರಿಗೆ ತಡರಾತ್ರಿ ಸಭೆಗಳಿಗೆ ಬರುವಂತೆ ಸೂಚಿಸುತ್ತಾರೆ. ಒಂದು ವೇಳೆ ಅವರು ಬರದಿದ್ದರೆ ಅಥವಾ ಹೇಳಿದಂತೆ ಕೇಳದಿದ್ದರೆ ಅವರ ಕುಟುಂಬ ಸದಸ್ಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬುದು ಸಮಿತಿಗೆ ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ.

ಕೋಲ್ಕತ್ತಾದಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಸುಂದರ್‌ಬನ್ಸ್‌ನ ಗಡಿಯಲ್ಲಿರುವ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿ ಪ್ರದೇಶ ಟಿಎಂಸಿ ನಾಯಕ ಷಹಜಹಾನ್ ವಿರುದ್ಧ ಕಳೆದ ಒಂದು ತಿಂಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT