ಲಡಾಖ್
ಲಡಾಖ್ 
ದೇಶ

ಕೇಂದ್ರದೊಂದಿಗೆ ಮಾತುಕತೆ ಬಳಿಕ ಪ್ರತಿಭಟನೆಯ ಎಚ್ಚರಿಕೆ ನೀಡಿದ ಲಡಾಖ್ ಪಕ್ಷಗಳು

Nagaraja AB

ಶ್ರೀನಗರ: ಮುಂದಿನ ಸಭೆಯಲ್ಲಿ ತಮ್ಮ ಎರಡು ಬೇಡಿಕೆಗಳಾದ ರಾಜ್ಯ ಸ್ಥಾನಮಾನ ಮತ್ತು ಲಡಾಖ್ ಗೆ 6ನೇ ಶೆಡ್ಯೂಲ್ ಸ್ಥಾನಮಾನ ನೀಡದಿದ್ದಲ್ಲಿ ಪ್ರತಿಭಟನೆಯನ್ನು ಮುಂದುವರೆಸಲಾಗುವುದು ಎಂದು ಇತ್ತೀಚಿಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಹಾಗೂ ಲಡಾಖ್ ಪಕ್ಷಗಳ ಪ್ರತಿನಿಧಿಗಳ ನಡುವೆ ನಡೆದ ಸಭೆಯ ನಂತರ ಎಲ್ ಎಬಿ ( ಲೇಹ್ ಅಪೆಕ್ಸ್ ಬಾಡಿ) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ನಾಯಕರು ಎಚ್ಚರಿಕೆ ನೀಡಿದ್ದಾರೆ.

ಫೆಬ್ರವರಿ 24 ರಂದು ನವದೆಹಲಿಯಲ್ಲಿ ನಡೆದ ಕೇಂದ್ರ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಯಾವುದೇ ಸಕಾರಾತ್ಮಕ ಬೆಳವಣಿಗೆಯಾಗಿಲ್ಲ ಎಂದು ಲಡಾಖ್‌ನ ನಾಯಕರೊಬ್ಬರು ಹೇಳಿದರು. ಕೆಡಿಎ ಮತ್ತು ಎಲ್ ಎಬಿಯ ಯ ಜಂಟಿ ಆರು ಸದಸ್ಯರ ನಿಯೋಗವು ಅಧಿಕಾರಿಗಳನ್ನು ಭೇಟಿ ಮಾಡಿದೆ.

“ಫೆಬ್ರವರಿ 19 ರಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೀಡಿದ್ದ ಭರವಸೆಯಂತೆ ಯಾವುದೇ ಕಾನೂನು ತಜ್ಞರು ಸಭೆಯಲ್ಲಿ ಹಾಜರಿರಲಿಲ್ಲ.ತಮ್ಮ ಬೇಡಿಕೆಯ ಬಗ್ಗೆ ಅಧಿಕಾರಿಗಳು ಯಾವುದೇ ಬದ್ಧತೆ ನೀಡಲಿಲ್ಲ ಎಂದು ನಾಯಕ ಹೇಳಿದರು. ಮುಂದಿನ ಕೆಲವು ದಿನಗಳಲ್ಲಿ ಮತ್ತೊಂದು ಸಭೆ ನಡೆಯಲಿದೆ. ತಮ್ಮ ಬೇಡಿಕೆಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಎಂದು ಎಲ್ ಎಬಿ ನಾಯಕ ಚೆರಿಂಗ್ ದೋರ್ಜೆ ಹೇಳಿದರು.

SCROLL FOR NEXT