ಐಎನ್ ಎಲ್ ಡಿ ಹರಿಯಾಣ ಮುಖ್ಯಸ್ಥ ರಾಥೀ
ಐಎನ್ ಎಲ್ ಡಿ ಹರಿಯಾಣ ಮುಖ್ಯಸ್ಥ ರಾಥೀ 
ದೇಶ

ಐಎನ್‌ಎಲ್‌ಡಿ ಹರಿಯಾಣ ಮುಖ್ಯಸ್ಥನ ಹತ್ಯೆ: ಸಿಸಿಟಿವಿ ಫೂಟೇಜ್ ನಿಂದ ಆರೋಪಿಗಳ ಪತ್ತೆ, ಏಳು ಪ್ರಕರಣ ದಾಖಲು

Nagaraja AB

ಚಂಡೀಗಢ: ಹರಿಯಾಣದ ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ) ಅಧ್ಯಕ್ಷ ಮತ್ತು ಎರಡು ಬಾರಿ ಶಾಸಕರಾಗಿದ್ದ ನಫೆ ಸಿಂಗ್ ರಾಥೀ ಮತ್ತು ಅವರ ಸಹಚರರನ್ನು ಬಹದ್ದೂರ್‌ಗಢದಲ್ಲಿ ಹಾಡಹಾಗಲೇ ಗುಂಡಿಕ್ಕಿ ಹತ್ಯೆ ಮಾಡಿದ ಕೆಲವೇ ಗಂಟೆಗಳ ನಂತರ, ಪೊಲೀಸರು ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಪರಾಧಕ್ಕೆ ಸ್ವಲ್ಪ ಮೊದಲು ಹುಂಡೈ ಐ10 ಕಾರಿನಲ್ಲಿ ದಾಳಿಕೋರರ ಚಲನವಲನ ತೋರಿಸುವ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಬಹದ್ದೂರ್‌ಗಢದ ಮಾಜಿ ಶಾಸಕ ನರೇಶ್ ಕೌಶಿಕ್, ರಮೇಶ್ ರಾಠಿ, ಸತೀಶ್ ರಾಠಿ ಮತ್ತು ರಾಹುಲ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಆರೋಪಿಗಳನ್ನು ಬಂಧಿಸುವವರೆಗೆ ಮತ್ತು ಕುಟುಂಬಕ್ಕೆ ಭದ್ರತೆ ಒದಗಿಸುವವರೆಗೆ ತಮ್ಮ ತಂದೆಯ ಅಂತ್ಯಕ್ರಿಯೆ ಮಾಡುವುದಿಲ್ಲ ಎಂದು ಐಎನ್‌ಎಲ್‌ಡಿ ಮುಖ್ಯಸ್ಥರ ಪುತ್ರ ಜಿತೇಂದ್ರ ರಾಥೀ ಹೇಳಿದ್ದಾರೆ. ಈ ಕೃತ್ಯದ ಹಿಂದೆ ಸ್ಥಳೀಯ ರಾಜಕಾರಣಿಗಳ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ. ರಾಥೀ ಅವರ ಕಾರು ಚಾಲಕ ಮತ್ತು ಅವರ ಸೋದರಳಿಯ ರಾಕೇಶ್ ಹೇಳಿಕೆ ಮೇರೆಗೆ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಬಂಧಿಸಲು ಇಬ್ಬರು ಉಪ ಪೊಲೀಸ್ ವರಿಷ್ಠಾಧಿಕಾರಿಗಳ (ಡಿಎಸ್‌ಪಿ) ನೇತೃತ್ವದಲ್ಲಿ ಐದು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಾಹಿ ಗ್ರಾಮದ ಬಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಇದರಲ್ಲಿ ದುಷ್ಕರ್ಮಿಗಳು ರಾಥೀ ಅವರ ಕಾರಿನ ಹಿಂದೆ ಕಾರನ್ನು ನಿಲ್ಲಿಸಿರುವುದು ಕಂಡುಬಂದಿದೆ ಮತ್ತು ಅಪರಾಧದ ನಂತರ ಅವರು ಅದೇ ಕಾರಿನಲ್ಲಿ ಓಡಿಹೋಗುತ್ತಿರುವುದು ಕಂಡುಬಂದಿದೆ. ದಾಳಿಕೋರರು ಬರಾಹಿ ಲೆವೆಲ್-ಕ್ರಾಸಿಂಗ್ ಬಳಿ ಕಾರನ್ನು ಅಡ್ಡಗಟ್ಟಿ ಸಮೀಪದಿಂದ ಮನಬಂದಂತೆ ಗುಂಡಿನ ದಾಳಿ ನಡೆಸಿದಾಗ ನಫೆ ಸಿಂಗ್ ರಾಥೀ ಅವರು ತಮ್ಮ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದರು ಎನ್ನಲಾಗಿದೆ.

SCROLL FOR NEXT