ದೇಶ

ಗುಜರಾತ್: ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ, 68 ರಾಷ್ಟ್ರಗಳು ಭಾಗಿ

Nagaraja AB

ಗಾಂಧಿನಗರ: ಗುಜರಾತಿನಲ್ಲಿ ಇಂದಿನಿಂದ ಆರಂಭವಾದ ಏಳು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಭಾನುವಾರ ಚಾಲನೆ ನೀಡಿದರು. ಇದರಲ್ಲಿ 68 ರಾಷ್ಟ್ರಗಳು ಸೇರಿದಂತೆ ವಿವಿಧ ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. 

ಕಾರ್ಯಕ್ರಮದಲ್ಲಿ ಮಾತನಾಡಿದ ಪಟೇಲ್, ಪ್ರಧಾನಿ ನರೇಂದ್ರ ಮೋದಿಯವರ ಪ್ರಗತಿಪರ ಸಿದ್ಧಾಂತ ಮತ್ತು ದೂರದೃಷ್ಟಿಯ ನಾಯಕತ್ವದಿಂದಾಗಿ ಕೈಗಾರಿಕಾ ಮತ್ತು ವ್ಯವಾಹರ ಅಭಿವೃದ್ಧಿಯೊಂದಿಗೆ ಭಾರತದ ಆರ್ಥಿಕತೆಯು ಹೊಸ ಎತ್ತರವನ್ನು ತಲುಪುತ್ತಿದೆ. ನವರಾತ್ರಿ ಹಬ್ಬವಾಗಲಿ ಅಥವಾ ಅಂತರಾಷ್ಟ್ರೀಯ ಗಾಳಿಪಟ ಉತ್ಸವವಾಗಲಿ ಗುಜರಾತ್ ಯಾವಾಗಲೂ ತನ್ನ ಸಂಸ್ಕೃತಿ ಮತ್ತು ಶಕ್ತಿಯನ್ನು ಜನರು ಅನುಭವಿಸುವಂತೆ ಮಾಡಿದೆ ಎಂದು ಅವರು ಹೇಳಿದರು.

ಇಂತಹ ಹಬ್ಬಗಳು ರಾಜ್ಯದ ಆರ್ಥಿಕತೆಯನ್ನು ಬಲಪಡಿಸುತ್ತದೆ. ಅಷ್ಟೇ ಅಲ್ಲ, ಉದ್ಯಮಿಗಳ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ ಮತ್ತು ಇತರ ಪೂರಕ ಉದ್ಯೋಗಾವಕಾಶಗಳು ಸಹ ಹೆಚ್ಚುತ್ತವೆ. ಗಾಳಿಪಟ ಉತ್ಸವವು ವಿಶ್ವಾದ್ಯಂತ ಜನಪ್ರಿಯತೆಯನ್ನು ಗಳಿಸಿದ್ದು,  ಪ್ರತಿ ವರ್ಷವೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಪಂಚದಾದ್ಯಂತ ಮತ್ತು ದೇಶದಿಂದ ಗಾಳಿಪಟ ಹಾರಾಟಗಾರರು ಗುಜರಾತ್‌ಗೆ ಆಗಮಿಸುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದರು. 

SCROLL FOR NEXT