ದೇಶ

ಸಂಜಯ್ ಸಿಂಗ್ ಸೇರಿ ಮೂವರು ಎಎಪಿ ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ

Lingaraj Badiger

ನವದೆಹಲಿ: ಆಮ್ ಆದ್ಮಿ ಪಕ್ಷ(ಎಎಪಿ)ದ ಅಭ್ಯರ್ಥಿಗಳಾದ ಸಂಜಯ್ ಸಿಂಗ್, ಸ್ವಾತಿ ಮಲಿವಾಲ್ ಮತ್ತು ಎನ್‌ಡಿ ಗುಪ್ತಾ ಅವರು ಶುಕ್ರವಾರ ರಾಜ್ಯಸಭಾ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂವರು ಅಭ್ಯರ್ಥಿಗಳು ಜನವರಿ 8 ರಂದು ರಾಷ್ಟ್ರ ರಾಜಧಾನಿಯಲ್ಲಿ ರಾಜ್ಯಸಭೆ ಚುನಾವಣೆಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದರು.

ಆಮ್ ಆದ್ಮಿ ಪಕ್ಷ, ಸಂಜಯ್ ಸಿಂಗ್ ಮತ್ತು ಎನ್‌ಡಿ ಗುಪ್ತಾ ಅವರನ್ನು ಎರಡನೇ ಅವಧಿಗೆ ಆಯ್ಕೆ ಮಾಡಿದ್ದು, ದೆಹಲಿ ಮಹಿಳಾ ಆಯೋಗದ(ಡಿಸಿಡಬ್ಲ್ಯೂ) ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರನ್ನು ಮೊದಲ ಬಾರಿಗೆ ರಾಜ್ಯಸಭೆಗೆ ಕಳುಹಿಸಿದೆ.

ಸುಶೀಲ್ ಗುಪ್ತಾ ಬದಲಿಗೆ ಸ್ವಾತಿ ಮಲಿವಾಲ್ ಆಯ್ಕೆಯಾಗಿದ್ದಾರೆ. ಎಎಪಿ ರಾಜ್ಯಸಭಾ ಅಭ್ಯರ್ಥಿಗಳಾದ ಸಂಜಯ್ ಸಿಂಗ್, ಸ್ವಾತಿ ಮಲಿವಾಲ್ ಮತ್ತು ಎನ್‌ಡಿ ಗುಪ್ತಾ ಅವರು ಅವಿರೋಧವಾಗಿ ಆಯ್ಕೆಯಾದ ನಂತರ ಚುನಾವಣಾಧಿಕಾರಿ ಆಶಿಶ್ ಕುಂದ್ರಾ ಅವರಿಂದ ಪ್ರಮಾಣಪತ್ರ ಪಡೆದರು.

ರಾಜ್ಯಸಭಾ ಸಂಸದರಾಗಿ ಆಯ್ಕೆಯಾದ ನಂತರ ಮಾತನಾಡಿದ ಸ್ವಾತಿ ಮಲಿವಾಲ್ ಅವರು, ತಮ್ಮ ಕರ್ತವ್ಯವನ್ನು ನಿಜವಾದ ಭಕ್ತಿ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸುವುದಾಗಿ ತಿಳಿಸಿದ್ದಾರೆ.

SCROLL FOR NEXT