ದೇಶ

ಮುಂಬೈ ಕ್ರೈಂ ಬ್ರಾಂಚ್ ನಿಂದ 12 ಕೋಟಿ ರೂ. ಮೌಲ್ಯದ ನಿಷೇಧಿತ ಗುಟ್ಖಾ, ಪಾನ್ ಮಸಾಲ ಜಪ್ತಿ; 7 ಮಂದಿ ಬಂಧನ

Lingaraj Badiger

ಮುಂಬೈ: ಮಹಾರಾಷ್ಟ್ರದ ಪಾಲ್ಘರ್‌ನ ಕಾಸಾ ಪ್ರದೇಶದಲ್ಲಿ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು 12 ಕೋಟಿ ರೂಪಾಯಿ ಮೌಲ್ಯದ ನಿಷೇಧಿತ ಗುಟ್ಕಾ ಮತ್ತು ಪಾನ್ ಮಸಾಲ ವಶಪಡಿಸಿಕೊಂಡಿದ್ದಾರೆ ಮತ್ತು ಈ ಸಂಬಂಧ ಏಳು ಜನರನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

"ನಾವು ಪಾಲ್ಘರ್‌ನ ಕಾಸಾ ಪ್ರದೇಶದಿಂದ 12 ಕೋಟಿ ರೂಪಾಯಿ ಮೌಲ್ಯದ ನಿಷೇಧಿತ ಗುಟ್ಕಾ ಮತ್ತು ಪಾನ್ ಮಸಾಲಾಗಳನ್ನು ಜಪ್ತಿ ಮಾಡಿದ್ದೇವೆ ಮತ್ತು ಈ ಸಂಬಂಧ ಏಳು ಜನರನ್ನು ಬಂಧಿಸಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಅಧಿಕಾರಿಯೊಬ್ಬರು ಎಎನ್‌ಐಗೆ ತಿಳಿಸಿದ್ದಾರೆ.

ಬಂಧಿತರನ್ನು ಇಬ್ರಾಹಿಂ ಇನಾಮದಾರ್, ಸಂತೋಷ್ ಕುಮಾರ್ ಸಿಂಗ್, ಕಮಿಲ್ ಖಾನ್, ಹೀರಾ ಲಾಲ್ ಮಂಡಲ್, ನಾಸಿರ್ ಯಲ್ಗಾರ್, ಜಮೀರ್ ಸಯಾದ್ ಮತ್ತು ಸಂಜಯ್ ಖೈರತ್ ಎಂದು ಗುರುತಿಸಲಾಗಿದೆ.

ಆರೋಪಿಗಳ ಪೈಕಿ ಮೂವರನ್ನು ಈ ಹಿಂದೆ ಬಂಧಿಸಲಾಗಿತ್ತು. ಅವರನ್ನು ವಿಚಾರಣೆ ನಡೆಸಿದಾಗ ಇತರ ಆರೋಪಿಗಳು ನಿಷೇಧಿತ ಗುಟ್ಕಾ ಮತ್ತು ಪಾನ್ ಮಸಾಲವನ್ನು ಪಾಲ್ಘರ್‌ಗೆ ಸರಬರಾಜು ಮಾಡಲು ಹೊರಟಿರುವುದು ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ.

ಏತನ್ಮಧ್ಯೆ, ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

SCROLL FOR NEXT