ದೇಶ

ಸಂಸತ್ ಭದ್ರತಾ ಉಲ್ಲಂಘನೆ: ಮನೋರಂಜನ್ ಪ್ರಕರಣದ ಮಾಸ್ಟರ್ ಮೈಂಡ್- ನಾರ್ಕೋ ಪರೀಕ್ಷೆಯಲ್ಲಿ ಬಹಿರಂಗ

Srinivas Rao BV

ನವದೆಹಲಿ: ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ಬಂಧಿತನಾಗಿರುವ ಮನೋರಂಜನ್, ಪ್ರಕರಣದ ಮಾಸ್ಟರ್ ಮೈಂಡ್ ಎಂಬುದು ಪಾಲಿಗ್ರಾಫ್, ನಾರ್ಕೊ-ವಿಶ್ಲೇಷಣೆ ಮತ್ತು ಮೆದುಳಿನ ಮ್ಯಾಪಿಂಗ್ ಪರೀಕ್ಷೆಗಳಲ್ಲಿ ಬಹಿರಂಗವಾಗಿದೆ. 

ಡಿಸೆಂಬರ್ 13ರಂದು ನಡೆದ ಘಟನೆಯ ಹಿಂದಿನ ಮಾಸ್ಟರ್ ಮೈಂಡ್ ಲಲಿತ್ ಝಾ ಎಂದು ಪೊಲೀಸರು ಈ ಹಿಂದೆ ಹೇಳಿದ್ದರು.

ಎಲ್ಲಾ ಆರು ಆರೋಪಿಗಳಾದ ಸಾಗರ್ ಶರ್ಮಾ, ಮನೋರಂಜನ್ ಡಿ, ಅಮೋಲ್ ಶಿಂಧೆ, ನೀಲಂ ಆಜಾದ್, ಲಲಿತ್ ಝಾ ಮತ್ತು ಮಹೇಶ್ ಕುಮಾವತ್ ಅವರನ್ನು ಶನಿವಾರ ಪಟಿಯಾಲ ಹೌಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ನೀಲಂ ಹೊರತುಪಡಿಸಿ ಉಳಿದ 5  ಆರೋಪಿಗಳನ್ನು ಡಿಸೆಂಬರ್ 8 ರಂದು ಪಾಲಿಗ್ರಾಫ್ ಪರೀಕ್ಷೆಗಾಗಿ ಗುಜರಾತ್‌ಗೆ ಕರೆದೊಯ್ಯಲಾಗಿತ್ತು. ನ್ಯಾಯಾಲಯದ ಮುಂದೆ ಪರೀಕ್ಷೆಗೆ ಒಳಗಾಗಲು ನೀಲಂ ಒಪ್ಪಿಗೆ ನೀಡಿರಲಿಲ್ಲ. ಇದುವರೆಗಿನ ತನಿಖೆಗಳು ಮತ್ತು ವಿಚಾರಣೆಗಳಿಂದ ಆರೋಪಿಗಳು ಸರ್ಕಾರಕ್ಕೆ ಸಂದೇಶ ಕಳುಹಿಸಲು ಯೋಜಿಸಿದ್ದರು ಎಂದು ತಿಳಿದುಬಂದಿದೆ.

SCROLL FOR NEXT