ದೇಶ

Army Day: ನಮ್ಮ ಸೈನಿಕರು ಶಕ್ತಿ, ಸ್ಥಿರತೆಯ ಆಧಾರ ಸ್ತಂಭಗಳಾಗಿದ್ದಾರೆ; ಪ್ರಧಾನಿ ನರೇಂದ್ರ ಮೋದಿ

Ramyashree GN

ನವದೆಹಲಿ: ಇಂದು ದೇಶದಾದ್ಯಂತ ಸೇನಾ ದಿನವನ್ನು ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು, ಸೈನಿಕರ ಅಚಲ ಬದ್ಧತೆ ಮತ್ತು ತ್ಯಾಗವನ್ನು ಶ್ಲಾಘಿಸಿದರು. ದೇಶದ ಸೇನಾ ಸಿಬ್ಬಂದಿ ಶಕ್ತಿ ಮತ್ತು ಸ್ಥರತೆಯ ಆಧಾರ ಸ್ತಂಭಗಳು ಎಂದು ಹೇಳಿದರು.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಸೇನಾ ದಿನದಂದು, ನಮ್ಮ ಸೈನಿಕರ ಅಸಾಧಾರಣ ಧೈರ್ಯ, ಅಚಲ ಬದ್ಧತೆ ಮತ್ತು ತ್ಯಾಗವನ್ನು ನಾವು ಗೌರವಿಸುತ್ತೇವೆ. ನಮ್ಮ ರಾಷ್ಟ್ರವನ್ನು ರಕ್ಷಿಸುವಲ್ಲಿ ಮತ್ತು ನಮ್ಮ ಸಾರ್ವಭೌಮತ್ವವನ್ನು ಎತ್ತಿಹಿಡಿಯುವಲ್ಲಿ ಅವರ ಅವಿರತ ಸಮರ್ಪಣೆಯು ಅವರ ಶೌರ್ಯಕ್ಕೆ ಸಾಕ್ಷಿಯಾಗಿದೆ. ಅವರು ಶಕ್ತಿ ಮತ್ತು ಸ್ಥಿರತೆಯ ಆಧಾರಸ್ತಂಭಗಳು' ಎಂದಿದ್ದಾರೆ.

ಪ್ರತಿ ವರ್ಷ ಭಾರತೀಯ ಸೇನಾ ದಿನಾಚರಣೆಯನ್ನು ಜನವರಿ 15ರಂದು ಆಚರಿಸಲಾಗುತ್ತದೆ. ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಅವರು ಭಾರತೀಯ ಸೇನೆಯ ಪ್ರಥಮ ಕಮಾಂಡರ್-ಇನ್-ಚೀಫ್ ಆಗಿ ಕೊನೆಯ ಬ್ರಿಟಿಷ್ ಮಹಾದಂಡನಾಯಕ ಜನರಲ್ ಫ್ರಾನ್ಸಿಸ್ ಬುಚರ್ ಅವರಿಂದ ಜನವರಿ 15, 1949ರಂದು ಅಧಿಕಾರ ಸ್ವೀಕರಿಸಿದರು. ಆ ಸ್ಮರಣೆಗಾಗಿ ಪ್ರತಿ ವರ್ಷವೂ ಈ ದಿನವನ್ನು ಆಚರಿಸಲಾಗುತ್ತದೆ.

SCROLL FOR NEXT