ಮಗನ ಹತ್ಯೆ ಪ್ರಕರಣದ ಆರೋಪಿ ಸುಚನ ಸೇಠ್ 
ದೇಶ

Suchana Seth: ಸಿಇಒ ಮಗನ ಕೊಲೆ ಪ್ರಕರಣ: ಆರೋಪಿ ಸುಚನ ಸೇಠ್ ಕಸ್ಟಡಿ ಅವಧಿ ವಿಸ್ತರಣೆ

ತನ್ನ ನಾಲ್ಕು ವರ್ಷದ ಮಗನನ್ನು ಕೊಂದ ಆರೋಪದ ಮೇಲೆ ಬಂಧನಕ್ಕೀಡಾಗಿರುವ ಆರೋಪಿ ತಾಯಿ ಸುಚನ ಸೇಠ್ ಅವರ ಬಂಧನ ಅವಧಿಯನ್ನು ಗೋವಾ ಕೋರ್ಟ್ ವಿಸ್ತರಿಸಿದೆ.

ಪಣಜಿ: ತನ್ನ ನಾಲ್ಕು ವರ್ಷದ ಮಗನನ್ನು ಕೊಂದ ಆರೋಪದ ಮೇಲೆ ಬಂಧನಕ್ಕೀಡಾಗಿರುವ ಆರೋಪಿ ತಾಯಿ ಸುಚನ ಸೇಠ್ ಅವರ ಬಂಧನ ಅವಧಿಯನ್ನು ಗೋವಾ ಕೋರ್ಟ್ ವಿಸ್ತರಿಸಿದೆ.

ಮಗನನ್ನು ಕೊಂದ ಆರೋಪದ ಮೇಲೆ ಬಂಧನಕ್ಕೀಡಾಗಿರುವ ಸ್ಟಾರ್ಟಪ್ ಸಿಇಒ ಸುಚನಾ ಸೇಠ್ ಅವರ ಪೊಲೀಸ್ ಕಸ್ಟಡಿಯನ್ನು ಗೋವಾ ನ್ಯಾಯಾಲಯವು ಸೋಮವಾರ ಮತ್ತೆ ಐದು ದಿನಗಳವರೆಗೆ ವಿಸ್ತರಿಸಿದೆ. ಆರು ದಿನಗಳ ಆರಂಭಿಕ ಬಂಧನ ಅವಧಿ ಮುಗಿದ ನಂತರ ಸೇಠ್ ಅವರನ್ನು ಇಂದು ಗೋವಾ ಮಕ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಕಲಾಂಗುಟೆ ಪೊಲೀಸರು ಆಕೆಯ ಕಸ್ಟಡಿಯನ್ನು ವಿಸ್ತರಿಸುವಂತೆ ಕೋರಿದ್ದು, ತನಿಖೆ ಇನ್ನೂ ಮುಕ್ತಾಯವಾಗಬೇಕಿದೆ. ಸುಚನಾ ಸೇಠ್ (39 ವರ್ಷ) ಜನವರಿ 8 ರಂದು ತನ್ನ ಮಗನ ಶವವನ್ನು ಬ್ಯಾಗ್‌ನಲ್ಲಿ ತುಂಬಿ ಗೋವಾಕ್ಕೆ ತರುವಾಗ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ಕರ್ನಾಟಕದ ಚಿತ್ರದುರ್ಗದಲ್ಲಿ ಬಂಧಿಸಲಾಗಿತ್ತು.

ಈ ಪ್ರಕರಣದ ವಿಚಾರಣೆ ಇಂದು ಗೋವಾದ ಮಾಪುಸಾ ಪಟ್ಟಣದ ನ್ಯಾಯಾಲಯ ನಡೆದಿದ್ದು, ಆರೋಪಿ ತಾಯಿ ಸುಚನ ಸೇಠ್ ರನ್ನು ಮತ್ತೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

ಗೋವಾದ ಕ್ಯಾಂಡೋಲಿಮ್ ಮೂಲದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಮಗುವನ್ನು ಕೊಂದ ಆರೋಪ ಆಕೆಯ ಮೇಲಿದ್ದು, ಆರೋಪಿ ತಾಯಿಯು ತನಿಖಾಧಿಕಾರಿಗಳಿಗೆ ಸಹಕರಿಸುತ್ತಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. "ನಾವು ಅಕೆಯನ್ನು ವಿಚಾರಣೆ ಮಾಡಲು ಹೆಚ್ಚಿನ ಸಮಯವನ್ನು ಬಯಸಿದ್ದರಿಂದ ನಾವು ಅಕೆಯ ಕಸ್ಟಡಿಯನ್ನು ವಿಸ್ತರಿಸಲು ಕೇಳಿದ್ದೆವು. ನಾವು ಆಕೆಯ ಡಿಎನ್ಎ ಮಾದರಿಯನ್ನು ತೆಗೆದುಕೊಳ್ಳುವಂತಹ ಇತರ ಔಪಚಾರಿಕತೆಗಳನ್ನು ಸಹ ನಡೆಸಬೇಕಾಗಿದೆ" ಎಂದು ಹೇಳಿದರು. 

ಸೇಠ್ ಅವರ ಪತಿ ವೆಂಕಟ್ ರಾಮನ್ ಹೇಳಿಕೆಯನ್ನು ಈಗಾಗಲೇ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಗೋವಾ ಪೊಲೀಸರ ಎದುರೇ ಕಿತ್ತಾಡಿಕೊಂಡಿದ್ದ ಗಂಡ-ಹೆಂಡತಿ
ಈ ಹಿಂದೆ ವಿಚಾರಣೆಗೆ ಕರೆದಿದ್ದ ಪೊಲೀಸರ ಎದುರೇ ಗಂಡ-ಹೆಂಡತಿ ಪರಸ್ಪರ ಕಿತ್ತಾಡಿಕೊಂಡಿದ್ದರು. ಗೋವಾ ಪೊಲೀಸ್ ಠಾಣೆಗೆ ಆಗಮಿಸಿದ ಪತಿ ವೆಂಕಟ ರಮಣ್ ಮತ್ತು ಸುಚನಾ ಸೇಠ್ 15 ನಿಮಿಷಗಳ ಕಾಲ ಮುಖಾಮುಖಿಯಾದರು. ಆದರೆ ಇಡಿ ಸನ್ನಿವೇಶವು ಪರಸ್ಪರ ದೋಷಾರೋಪಣೆ ಹಾಗೂ ವಾಗ್ವಾದದ ಹೊರತಾಗಿ ಬೇರೇನೂ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಗೋವಾದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಮಗನ ಹತ್ಯೆ ನಡೆದಾಗ ಸುಚನಾ ಅವರ ಪತಿ ವೆಂಕಟ್ ರಮಣ್ ವಿದೇಶದಲ್ಲಿದ್ದರು. ಅಪ್ಪನನ್ನು ನೋಡಬೇಕು ಎಂದು ಮಗ ಬಯಕೆ ವ್ಯಕ್ತಪಡಿಸಿರಬಹುದು. ಇದನ್ನು ಸಹಿಸದ ಸುಚನಾ ಕೋಪದಿಂದ ಅವನನ್ನು ಕೊಂದಿರಬಹುದು ಎಂದು ವೆಂಕಟ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT