ಮನೆ ಧ್ವಂಸ 
ದೇಶ

ಹಿಂದೂ ಮೆರವಣಿಗೆ ಮೇಲೆ ಎಂಜಲು ಉಗುಳಿದ್ದ ಮುಸ್ಲಿಂ ಯುವಕನ ಮನೆ ಕೆಡವಿದ ಸರ್ಕಾರ!

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬುಲ್ಡೋಜರ್ ಓಡಿಸಿ ವ್ಯಕ್ತಿಯೊಬ್ಬರ ಮನೆಯನ್ನು ಕೆಡವಲಾಗಿದೆ. ವಾಸ್ತವವಾಗಿ, ಬಾಬಾ ಮಹಾಕಾಲ್ ಮೆರವಣಿಗೆ ಮೇಲೆ 18 ವರ್ಷದ ಯುವಕ ಅದ್ನಾನ್ ಮನ್ಸೂರಿ ಮನೆಯ ಮೇಲೆ ನಿಂತು ಎಂಜಲು ಉಗುಳಿದ್ದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬುಲ್ಡೋಜರ್ ಓಡಿಸಿ ವ್ಯಕ್ತಿಯೊಬ್ಬರ ಮನೆಯನ್ನು ಕೆಡವಲಾಗಿದೆ. ವಾಸ್ತವವಾಗಿ, ಬಾಬಾ ಮಹಾಕಾಲ್ ಮೆರವಣಿಗೆ ಮೇಲೆ 18 ವರ್ಷದ ಯುವಕ ಅದ್ನಾನ್ ಮನ್ಸೂರಿ ಮನೆಯ ಮೇಲೆ ನಿಂತು ಎಂಜಲು ಉಗುಳಿದ್ದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

ಈ ಪ್ರಕರಣ ಸಂಬಂಧ ಅದ್ನಾನ್ 151 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಬೇಕಾಯಿತು. ಇದೀಗ ಆತನ ಮನೆ ಅತಿಕ್ರಮಣದಿಂದಾಗಿ ನೆಲಸಮವಾಗಿದೆ. 5 ತಿಂಗಳು ಜೈಲಿನಲ್ಲಿದ್ದ ಬಳಿಕ ಯುವಕನಿಗೆ ಜಾಮೀನು ಸಿಕ್ಕಿದೆ. ಪ್ರತ್ಯಕ್ಷದರ್ಶಿ ಆತನನ್ನು ಗುರುತಿಸಲು ನಿರಾಕರಿಸಿದರು.

ಉಜ್ಜಯಿನಿಯಲ್ಲಿ ಜುಲೈ 17ರಂದು ಬಾಬಾ ಮಹಾಕಾಲ್ ಮೆರವಣಿಗೆ ನಡೆದಿತ್ತು. ಈ ಮೆರವಣಿಗೆ ಅದ್ನಾನ್ ಮನೆ ಮುಂದೆ ಹೋಗುತ್ತಿದ್ದಾಗ ಮನೆಯ ಮೇಲಿನಿಂದ ಯಾರೋ ಎಂಜಲು ಉಗುಳುತ್ತಿದ್ದಾರೆ ಎಂದು ಭಕ್ತರು ಆರೋಪಿಸಿದ್ದರು. ಈ ಸಂಬಧ ಮೂವರು ಬಾಲಕರನ್ನು ವಶಕ್ಕೆ ಪಡೆಯಲಾಗಿತ್ತು.

ಮೆರವಣಿಗೆ ಹೋಗುತ್ತಿದ್ದಾಗ ಅಶ್ರಫ್ ಹುಸೇನ್ ಅವರ ಇಬ್ಬರು ಮಕ್ಕಳು ಮತ್ತು ಇತರರು ಭಕ್ತರ ಮೇಲೆ ಛಾವಣಿಯಿಂದ ಉಗುಳಿದ್ದಾರೆ ಎಂದು ಸಾವನ್ ಲೋಟ್ ಎಂಬ ವ್ಯಕ್ತಿ ಆರೋಪಿಸಿದ್ದರು. ವಿಷಯ ಸೂಕ್ಷ್ಮವಾಗಿದ್ದು, ಪೊಲೀಸರು ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರು ಮಕ್ಕಳ ವಿರುದ್ಧ 5 ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.

ಕಳೆದ ಸೋಮವಾರ ಇಂದೋರ್‌ನ ಮಧ್ಯಪ್ರದೇಶ ಹೈಕೋರ್ಟ್‌ನ ಏಕಸದಸ್ಯ ಪೀಠವು ಅದ್ನಾನ್‌ಗೆ ಜಾಮೀನು ನೀಡಿತು. ನ್ಯಾಯಾಧೀಶರು ತಮ್ಮ ಎರಡು ಪುಟಗಳ ಆದೇಶದಲ್ಲಿ, ಪ್ರಾಸಿಕ್ಯೂಷನ್ ಸಾಕ್ಷಿ ನಂ. 1 ಆಗಿರುವ ದೂರುದಾರ ಸಾವನ್ ಲೊಟ್ ಮತ್ತು ಸಾಕ್ಷಿ ನಂ. 2, ಅಜಯ್ ಖತ್ರಾ ಅವರು ವಿಚಾರಣಾ ನ್ಯಾಯಾಲಯದ ಮುಂದೆ ತಮ್ಮ ಪ್ರತಿಕೂಲ ಹೇಳಿಕೆ ನೀಡಿದ್ದಾರೆ. ಅಲ್ಲದೆ ಪ್ರಾಸಿಕ್ಯೂಷನ್ ಸಹ ಪ್ರಕರಣವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದೆ. ಹೀಗಾಗಿ ಆತನಿಗೆ ಜಾಮೀನು ನೀಡಲಾಗಿತ್ತು.

ಅದ್ನಾನ್ ಜಾಮೀನು ಪಡೆದ ನಂತರ, ಉಜ್ಜಯಿನಿಯ ಖಾರಾ ಕುವಾನ್ ಪೊಲೀಸ್ ಠಾಣೆಯ ಪೊಲೀಸರು ಏನನ್ನೂ ಹೇಳದೆ ಸ್ಪಷ್ಟವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ. ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಲಿವನ್ ಕುಜೂರ್ ಅವರು ಜಾಮೀನು ನೀಡಿದ ಕಾರಣ ನ್ಯಾಯಾಲಯದ ವಿಷಯವಾಗಿದೆ ಎಂದು ಹೇಳುತ್ತಾರೆ. ಬಾಬಾ ಮಹಾಕಾಲ್ ಮೆರವಣಿಗೆ ಮೇಲೆ ಉಗುಳಿರುವ ಘಟನೆ ನಡೆದಿದೆ ಎಂಬುದಷ್ಟೇ ನಮಗೆ ಮಾಹಿತಿ. ಸದ್ಯ ಪ್ರಕರಣ ನಡೆಯುತ್ತಿದ್ದು, ಈ ವಿಚಾರದಲ್ಲಿ ಏನನ್ನೂ ಹೇಳಲಾರೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel