ದೇಶ

ಅಯೋಧ್ಯೆಯ ರಾಮ ಮಂದಿರಕ್ಕೆ ಪಿಒಕೆಯಿಂದ ನೀರು ಕಳುಹಿಸಿದ ಮುಸ್ಲಿಂ ವ್ಯಕ್ತಿ!

Lingaraj Badiger

ನವದೆಹಲಿ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಸಮಾರಂಭದಲ್ಲಿ ಬಳಸಲು ಮುಸ್ಲಿಂ ವ್ಯಕ್ತಿಯೊಬ್ಬರು ಪಾಕ್ ಆಕ್ರಮಿತ ಕಾಶ್ಮೀರದ ಶಾರದಾ ಪೀಠದ ಕುಂಡದಿಂದ ಪವಿತ್ರ ನೀರನ್ನು ಸಂಗ್ರಹಿಸಿ ಬ್ರಿಟನ್ ಮೂಲಕ ಭಾರತಕ್ಕೆ ಕಳುಹಿಸಿದ್ದಾರೆ.
  
2019ರ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಬಾಲಾಕೋಟ್ ವೈಮಾನಿಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಅಂಚೆ ಸೇವೆಗಳನ್ನು ಸ್ಥಗಿತಗೊಳಿಸಿದ್ದರಿಂದ ಈ ಪವಿತ್ರ ನೀರನ್ನು ಬ್ರಿಟನ್ ಮೂಲಕ ಭಾರತಕ್ಕೆ ಕಳುಹಿಸಲಾಗಿದೆ ಎಂದು ಸೇವ್ ಶಾರದಾ ಸಮಿತಿ ಕಾಶ್ಮೀರ(SSCK) ಸಂಸ್ಥಾಪಕ ರವೀಂದರ್ ಪಂಡಿತ ಹೇಳಿದ್ದಾರೆ.

"ಶಾರದಾ ಪೀಠದ ಪಿಒಕೆಯಲ್ಲಿರುವ ಶಾರದಾ ಕುಂಡದ ಪವಿತ್ರ ನೀರನ್ನು ತನ್ವೀರ್ ಅಹ್ಮದ್ ಮತ್ತು ಅವರ ತಂಡ ಸಂಗ್ರಹಿಸಿದ್ದು, ಅದನ್ನು ಎಲ್ಒಸಿ(ಗಡಿ ನಿಯಂತ್ರಣ ರೇಖೆ)ಯಿಂದ ಆಚೆ ನಮ್ಮ ನಾಗರಿಕ ಸಮಾಜದ ಸದಸ್ಯರು ಇಸ್ಲಾಮಾಬಾದ್‌ಗೆ ಕೊಂಡೊಯ್ದರು. ಅಲ್ಲಿಂದ ಬ್ರಿಟನ್ ನಲ್ಲಿರುವ ಅವರ ಮಗಳು ಮಗ್ರಿಬಿಗೆ ಕಳುಹಿಸಲಾಯಿತು. ಮಗ್ರಿಬಿ 2023ರ ಆಗಸ್ಟ್‌ನಲ್ಲಿ ಬ್ರಿಟನ್ ನಿಂದ ಅಹಮದ್‌ಬಾದ್‌ಗೆ ಆಗಮಿಸಿದ ಕಾಶ್ಮೀರಿ ಪಂಡಿತ್ ಕಾರ್ಯಕರ್ತೆ ಸೋನಾಲ್ ಶೇರ್‌ಗೆ ಅದನ್ನು ಹಸ್ತಾಂತರಿಸಿದ್ದರು. ಅವರು ದೆಹಲಿಯಲ್ಲಿ ನನಗೆ ನೀರನ್ನು ತಲುಪಿಸಿದರು" ಎಂದು ರವೀಂದರ್ ಪಂಡಿತ್ ಹೇಳಿದ್ದಾರೆ.

SCROLL FOR NEXT