ದೇಶ

ರಾಮೇಶ್ವರಂ: ಪವಿತ್ರ ಗಂಗಾ ಸ್ನಾನದೊಂದಿಗೆ ರಾಮನಾಥಸ್ವಾಮಿ ದರ್ಶನ ಪಡೆದ ಪ್ರಧಾನಿ ಮೋದಿ! ವಿಡಿಯೋ

Nagaraja AB

ರಾಮೇಶ್ವರಂ: ಜನವರಿ 22 ರಂದು ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾನ ಇರುವುದರಿಂದ ಯೋಗಿಯಂತೆ ಕೆಲವು ಆಚರಣೆಯಲ್ಲಿ ನಿರತರಾಗಿರುವ ಪ್ರಧಾನಿ ನರೇಂದ್ರ ಮೋದಿ ಇಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಸಮುದ್ರದಲ್ಲಿ ಮಿಂದೆಳುವ ಮೂಲಕ ಮತ್ತೊಮ್ಮೆ ದೇಶದ ಗಮನ ಸೆಳೆದಿದ್ದಾರೆ. 

ಅಗ್ನಿತೀರ್ಥ ಕಡಲತೀರದಲ್ಲಿ ತಣ್ಣೀರಿನಲ್ಲಿ ಪವಿತ್ರ ಸ್ನಾನ ಮಾಡಿದ ನಂತರ ರುದ್ರಾಕ್ಷಿ ಮಾಲೆಯೊಂದಿಗೆ ಮಂತ್ರ ಜಪಿಸುತ್ತಾ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಪುರಾತನ ರಾಮನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅವರಿಗೆ ಆರ್ಚಕರಿಂದ ಸಾಂಪ್ರದಾಯಿಕ ಗೌರವ ನೀಡಲಾಯಿತು. ಇದಾದ ನಂತರ ದೇಗುಲದಲ್ಲಿ ನಡೆಯುವ ‘ಭಜನೆ’ಯಲ್ಲಿಯೂ ಮೋದಿ ಭಾಗವಹಿಸಿದ್ದರು.

ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ ದ್ವೀಪದಲ್ಲಿರುವ ಶಿವ ದೇವಾಲಯವು ರಾಮಾಯಣದೊಂದಿಗೆ ಸಂಪರ್ಕ ಹೊಂದಿದೆ, ಏಕೆಂದರೆ ಇಲ್ಲಿರುವ ಶಿವಲಿಂಗವನ್ನು ಶ್ರೀರಾಮ ಸ್ಥಾಪಿಸಿದನೆಂಬ ಪ್ರತೀತಿ ಇದೆ. ಶ್ರೀರಾಮ ಮತ್ತು ಸೀತಾದೇವಿ ಇಲ್ಲಿ ಈ ಶಿವಲಿಂಗವನ್ನು ಪೂಜಿಸಿ, ಪ್ರಾರ್ಥನೆ ಸಲ್ಲಿಸಿದ್ದರು ಎಂದು ಹೇಳಲಾಗಿದೆ.
 

SCROLL FOR NEXT