ಏಮ್ಸ್. 
ದೇಶ

ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ: ಅರ್ಧ ದಿನ ರಜೆ ನಿರ್ಧಾರ ವಾಪಸ್ ಪಡೆದ ಏಮ್ಸ್

ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ದಿನವಾದ ಜ.22 ರಂದು ತುರ್ತು ಸೇವೆಗಳನ್ನು ಹೊರತುಪಡಿಸಿದ ಸೇವೆಗಳಿಗೆ ಅರ್ಧ ದಿನ (ಮಧ್ಯಾಹ್ನ 2:30) ರ ವರೆಗೆ ರಜೆ ಘೋಷಿಸಿದ್ದ ನಿರ್ಧಾರವನ್ನು ಏಮ್ಸ್ ಹಿಂಪಡೆದಿದೆ. 

ನವದೆಹಲಿ: ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ದಿನವಾದ ಜ.22 ರಂದು ತುರ್ತು ಸೇವೆಗಳನ್ನು ಹೊರತುಪಡಿಸಿದ ಸೇವೆಗಳಿಗೆ ಅರ್ಧ ದಿನ (ಮಧ್ಯಾಹ್ನ 2:30) ರ ವರೆಗೆ ರಜೆ ಘೋಷಿಸಿದ್ದ ನಿರ್ಧಾರವನ್ನು ಏಮ್ಸ್ ಹಿಂಪಡೆದಿದೆ. 

ದೆಹಲಿಯ ಏಮ್ಸ್ ಆಡಳಿತ ಕಚೇರಿಯ ಅಧಿಕಾರಿ ರಾಜೇಶ್ ಕುಮಾರ್ ಪ್ರಕಟಿಸಿದ ಪತ್ರದಲ್ಲಿ ಕೇಂದ್ರ ಸರ್ಕಾರ ಜ.22 ರಂದು ತನ್ನ ನೌಕರರಿಗೆ ಅರ್ಧ ದಿನದ ರಜೆ ಘೋಷಿಸಿದೆ. 22.01.2024 ರಂದು 14.30 ಗಂಟೆಗಳವರೆಗೆ ಸಂಸ್ಥೆಯು ಅರ್ಧ ದಿನ ಮುಚ್ಚಿರುತ್ತದೆ ಎಂದು ಎಲ್ಲಾ ಉದ್ಯೋಗಿಗಳ ಮಾಹಿತಿಗಾಗಿ ತಿಳಿಸಲಾಗಿದೆ, ಆದರೆ ಎಲ್ಲಾ ತುರ್ತು ವೈದ್ಯಕೀಯ ಸೇವೆಗಳು ಕಾರ್ಯನಿರ್ವಹಿಸಲಿವೆ ಎಂದು ಏಮ್ಸ್ ಸ್ಪಷ್ಟಪಡಿಸಿತ್ತು. 

ಈ ಅಧಿಸೂಚನೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ರೋಗಿಗಳು ವಾರಗಟ್ಟಲೆ, ಮತ್ತು ಕೆಲವೊಮ್ಮೆ, ಪ್ರೀಮಿಯರ್ ಹೆಲ್ತ್‌ಕೇರ್ ಸೌಲಭ್ಯದಲ್ಲಿ ಅಪಾಯಿಂಟ್‌ಮೆಂಟ್ ಪಡೆಯಲು ತಿಂಗಳುಗಟ್ಟಲೆ ಕಾಯುತ್ತಾರೆ. ಏಕಾಏಕಿ ಒಪಿಡಿ ಸೇವೆಗಳನ್ನು ಬಂದ್ ಮಾಡಿದರೆ, ಅಂತಹವರಿಗೆ ಕಷ್ಟವಾಗಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದರು.

ಇಂದು ಬೆಳಿಗ್ಗೆ, AIIMS-ದೆಹಲಿ ಹೊಸ ಅಧಿಸೂಚನೆಯನ್ನು ಹೊರಡಿಸಿದ್ದು, OPD  ಬರುವ ರೋಗಿಗಳಿಗೆ ಯಾವುದೇ ಅನಾನುಕೂಲತೆಯಾಗದಂತೆ ಎಚ್ಚರ ವಹಿಸಲು ಮತ್ತು ರೋಗಿಗಳ ಆರೈಕೆಗೆ ಅನುಕೂಲವಾಗುವಂತೆ ಅಪಾಯಿಂಟ್‌ಮೆಂಟ್ ಹೊಂದಿರುವ ರೋಗಿಗಳಿಗೆ ಸೇವೆಗಳು ಲಭ್ಯವಿರಲಿದೆ" ಎಂದು ಹೇಳಿದೆ.

ರಾಷ್ಟ್ರ ರಾಜಧಾನಿಯ ಮತ್ತೊಂದು ಪ್ರಮುಖ ಆರೋಗ್ಯ ಸೌಲಭ್ಯವಾದ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ OPD ನೋಂದಣಿ ಬೆಳಿಗ್ಗೆ 8 ರಿಂದ 10 ರವರೆಗೆ ನಡೆಯುತ್ತದೆ ಮತ್ತು ಎಲ್ಲಾ ನೋಂದಾಯಿತ ರೋಗಿಗಳಿಗೆ ಸೇವೆ ಲಭ್ಯವಿದೆ ಎಂದು ಹೇಳಿದೆ. ಆಸ್ಪತ್ರೆಯು ಔಷಧಾಲಯದ ಸೇವೆಗಳು ಮಧ್ಯಾಹ್ನದವರೆಗೆ ಇರಲಿದೆ. ಆದರೆ ಆಯ್ಕೆ ಮಾಡಿದ ಶಸ್ತ್ರಚಿಕಿತ್ಸೆಗಳು ನಡೆಯುವುದಿಲ್ಲ.

ಇದಕ್ಕೂ ಮೊದಲು, ಅಯೋಧ್ಯೆ ಕಾರ್ಯಕ್ರಮಕ್ಕೆ ಅರ್ಧ ದಿನದ ವಿರಾಮದ AIIMS ಘೋಷಣೆಯನ್ನು ಪ್ರತಿಪಕ್ಷ ನಾಯಕರು ಬಲವಾಗಿ ಟೀಕಿಸಿದ್ದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕ ಅಕ್ರಮದ ಹಾದಿ ಹಿಡಿಯದಿರಲಿ: ಗೃಹ ಸಚಿವ ಪರಮೇಶ್ವರರ "ಧ್ವಂಸ" ಹೇಳಿಕೆಗೆ ಪಿ. ಚಿದಂಬರಂ ಕಿಡಿ!

ತಾಳ್ಮೆ ಕಳೆದುಕೊಂಡು ಪುಟಿನ್-ಎರ್ಡೋಗನ್ ನಡುವಿನ ರಹಸ್ಯ ಸಭೆಗೆ ನುಗ್ಗಿದ ಪಾಕ್ ಪ್ರಧಾನಿ; ಮುಂದೇನಾಯ್ತು?, Video!

'ಸಂಸ್ಕೃತದ ವ್ಯಾಕರಣ ಹುಟ್ಟಿದ್ದು ನಮ್ಮಲ್ಲೇ; ನಾವ್ಯಾಕೆ ಸಂಸ್ಕೃತ ಕಲಿಯಬಾರದು'?: Pak ವಿವಿಯಲ್ಲಿ ಮಹಾಭಾರತ, ಸಂಸ್ಕೃತದ ಕೋರ್ಸ್ ಆರಂಭ!

ರೌಡಿಶೀಟರ್‌ ಮೌಖಿಕವಾಗಿ ಕರೆಸಿಕೊಳ್ಳಲು ಬ್ರೇಕ್‌; SMS ಅಥವಾ WhatsApp ಬಳಸಿ: ಪೊಲೀಸರಿಗೆ ಹೈಕೋರ್ಟ್‌ ಸೂಚನೆ!

ಭಾರತದಲ್ಲಿ 11,718 ಕೋಟಿ ರೂ ವೆಚ್ಚದಲ್ಲಿ 'ಡಿಜಿಟಲ್ ಜನಗಣತಿ': ಕೇಂದ್ರ ಸಂಪುಟ ಅನುಮೋದನೆ!

SCROLL FOR NEXT