ದೇಶ

ಹೈದರಾಬಾದ್: 'ರಾಮ್ ಕೆ ನಾಮ್' ಸಾಕ್ಷ್ಯಚಿತ್ರದ ಪ್ರದರ್ಶನ ಸ್ಥಗಿತಗೊಳಿಸಿದ ಪೊಲೀಸರು, ಮೂವಿ ಕ್ಲಬ್‌ನ ಮೂವರ ಬಂಧನ

Lingaraj Badiger

ಹೈದರಾಬಾದ್: ಬಾಬರಿ ಮಸೀದಿ ಧ್ವಂಸ ಕುರಿತಾದ ಆನಂದ್ ಪಟವರ್ಧನ್ ಅವರ ರಾಮ್ ಕೆ ನಾಮ್ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಿದ ಹೈದರಾಬಾದ್ ಪೊಲೀಸರು, ಮೂವಿ ಕ್ಲಬ್‌ನ ಮೂವರನ್ನು ಶನಿವಾರ ಬಂಧಿಸಿದ್ದಾರೆ.

ಚಲನಚಿತ್ರ ಉತ್ಸಾಹಿಗಳ ಗುಂಪು - ಹೈದರಾಬಾದ್ ಸಿನಿಫೈಲ್ಸ್ ನಗರದ ಕೆಫೆಯಲ್ಲಿ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಆಯೋಜಿಸಿತ್ತು.

ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ) ಸದಸ್ಯರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ.

ನೆರೆಡ್‌ಮೆಟ್ ಪೊಲೀಸರು ಈ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಿದರು ಮತ್ತು ಗುಂಪಿನ ಇಬ್ಬರು ಸದಸ್ಯರಾದ ಆನಂದ್ ಸಿಂಗ್ ಮತ್ತು ಪರಾಗ್ ವರ್ಮಾ ಹಾಗೂ ಕೆಫೆ ಮಾಲೀಕ ಸೃಜನ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರು ಆನಂದ್, ಪರಾಗ್ ಮತ್ತು ಇತರರ ವಿರುದ್ಧ ಭಾರತೀಯ ದಂಡ ಸಂಹಿತೆ(IPC)ಯ ಸೆಕ್ಷನ್ 290(ಸಾರ್ವಜನಿಕ ಉಪದ್ರವ), 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು) ಸೆಕ್ಷನ್ 34 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹೈದರಾಬಾದ್ ಸಿನಿಫೈಲ್ಸ್, ತನ್ನ ಸದಸ್ಯರ ವಿರುದ್ಧ ಪೊಲೀಸರ ಕ್ರಮವನ್ನು ಖಂಡಿಸಿದೆ.

SCROLL FOR NEXT