ದೇಶ

ರಾಮಲಲ್ಲಾ ಪ್ರತಿಷ್ಠಾಪನೆ ದಿನ ಹುಟ್ಟಿದ್ದ ಹಲವು ಮಕ್ಕಳಿಗೆ 'ರಾಮ, ಸೀತಾ' ​​ಹೆಸರು ನಾಮಕರಣ!

Nagaraja AB

ಕೇಂದ್ರಪಾರ: ಅಯೋಧ್ಯೆಯ ರಾಮಮಂದಿರದ ಐತಿಹಾಸಿಕ ರಾಮಲಲ್ಲಾ ಪ್ರಾಣ  ಪ್ರತಿಷ್ಠಾಪನೆ ಸಮಾರಂಭದ ಅಂಗವಾಗಿ ಸೋಮವಾರ  ಒಡಿಶಾದ ಕೇಂದ್ರಪಾರದಲ್ಲಿ ಜನಿಸಿದ ಹಲವಾರು ಶಿಶುಗಳಿಗೆ ಅವರ ಪೋಷಕರು ‘ರಾಮ’ ಮತ್ತು ‘ಸೀತಾ’ ಎಂದು ನಾಮಕರಣ ಮಾಡಿದ್ದಾರೆ. ರಾಜಕಾಣಿಕಾ ನಗರದ ಪ್ರಿಯಾಂಕಾ ಮಲ್ಲಿಕ್, ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಿದ ಕೆಲವೇ ನಿಮಿಷಗಳಲ್ಲಿ  ಮಧ್ಯಾಹ್ನ 1 ಗಂಟೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆಕೆಯ ಪೋಷಕರು ಆ ಮಗುವಿಗೆ ಸೀತಾ ಎಂದು ನಾಮಕರಣ ಮಾಡಿದ್ದಾರೆ.

ನಮ್ಮ ಇತಿಹಾಸದಲ್ಲಿ ಮಂಗಳಕರ ಮತ್ತು ಮಹತ್ವದ ದಿನದಂದು ಜನಿಸಿದ ಬಾಲಕಿಗೆ ಸೀತಾ ಎಂದು ಹೆಸರಿಸಲು ನಾವು ನಿರ್ಧರಿಸಿದ್ದೇವೆ" ಎಂದು ಪ್ರಿಯಾಂಕಾ ಅವರ ಪತಿ ನಾರಾಯಣ್  ಹೇಳಿದರು. ಅದೇ ರೀತಿ, ಮಹಾಕಲಪದ ಅಡೋಯಿ ಗ್ರಾಮದ ರೇಣುಬಾಲಾ ರೌತ್ (24) ಕೇಂದ್ರಪಾರ ಪಟ್ಟಣದ ಖಾಸಗಿ ನರ್ಸಿಂಗ್ ಹೋಂನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ನಂತರ ರಾಮ ಎಂದು ಹೆಸರಿಡಲು ನಿರ್ಧರಿಸಿರುವುದಾಗಿ ತಿಳಿಸಿದರು.

ಅಲ್ಲದೆ, ಶೀಘ್ರದಲ್ಲೇ ಅಯೋಧ್ಯೆಗೆ ಭೇಟಿ ನೀಡಲು ಯೋಜಿಸುತ್ತಿದ್ದೇವೆ ಎಂದು ರೇಣುಬಾಲಾ ಅವರ ಪತಿ ಅಜಯ್ ಹೇಳಿದ್ದಾರೆ. ಅದೇ ರೀತಿ ಬಡಪಳ ಗ್ರಾಮದ ಭಾರತಿ ಸಾಹೂ (25)  ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಅವರು ಕೂಡಾ "ತಮ್ಮ ಮಗನಿಗೆ ರಾಮ ಎಂದು ಹೆಸರಿಡಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು. ಭಗಬತ್‌ಪುರ ಗ್ರಾಮದ ಬಂದನಾ ಜೆನಾ (28) ಕೇಂದ್ರಪಾರ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗಳಿಗೆ ಸೀತಾ ಎಂದು ಹೆಸರಿಟ್ಟಿದ್ದಾಳೆ.

SCROLL FOR NEXT