ರಾಮ ಮಂದಿರ ಸ್ಥಳ (ಸಂಗ್ರಹ ಚಿತ್ರ) 
ದೇಶ

ದಯವಿಟ್ಟು ಬ್ಲಾಂಕೆಟ್ ಗಳನ್ನು ವಾಪಸ್ ನೀಡಿ: ರಾಮಮಂದಿರ ಯಾತ್ರಾರ್ಥಿಗಳಿಗೆ ಟ್ರಸ್ಟ್ ಮನವಿ!

ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡ ಭಗವಾನ್ ರಾಮನ ದರ್ಶನಕ್ಕಾಗಿ ಲಕ್ಷೋಪಲಕ್ಷ  ಮಂದಿ ಮಂದಿರಕ್ಕೆ ಆಗಮಿಸುತ್ತಿದ್ದಾರೆ. ಈ ನಡುವೆ ಮಂದಿರ ದರ್ಶನಕ್ಕಾಗಿ ಆಗಮಿಸಿದ್ದ ಭಕ್ತಾದಿಗಳು 300 ಬ್ಲ್ಯಾಂಕೆಟ್ ಗಳನ್ನು ಹೊತ್ತೊಯ್ದಿದ್ದಾರೆ ಎಂದು ತಿಳಿದುಬಂದಿದೆ. 

ಅಯೋಧ್ಯೆ: ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡ ಭಗವಾನ್ ರಾಮನ ದರ್ಶನಕ್ಕಾಗಿ ಲಕ್ಷೋಪಲಕ್ಷ  ಮಂದಿ ಮಂದಿರಕ್ಕೆ ಆಗಮಿಸುತ್ತಿದ್ದಾರೆ. ಈ ನಡುವೆ ಮಂದಿರ ದರ್ಶನಕ್ಕಾಗಿ ಆಗಮಿಸಿದ್ದ ಭಕ್ತಾದಿಗಳು 300 ಬ್ಲ್ಯಾಂಕೆಟ್ ಗಳನ್ನು ಹೊತ್ತೊಯ್ದಿದ್ದಾರೆ ಎಂದು ತಿಳಿದುಬಂದಿದೆ.

ರಾಮಪಥದಲ್ಲಿ ನಡೆಯುತ್ತಿದ್ದ ಘೋಷಣೆಯ ಮೂಲಕ ಈ ಮಾಹಿತಿ ಲಭ್ಯವಾಗಿದೆ. ಅಯೋಧ್ಯೆಯಲ್ಲೇ ತಂಗಿದ್ದು ಮಂದಿರಕ್ಕೆ ಆಗಮಿಸಿದ ಭಕ್ತಾದಿಗಳಿಗಾಗಿ (ವಿವಿಐಪಿಯೇತರ) ತಾತ್ಕಾಲಿತ ಟೆಂಟ್ ಗಳನ್ನು ನಿರ್ಮಿಸಲಾಗಿತ್ತು. ಟೆಂಟ್ ಗಳಲ್ಲಿ ವಾಸ್ತವ್ಯ ಹೂಡಿದ್ದ ಭಕ್ತಾದಿಗಳು 300 ಬ್ಲ್ಯಾಂಕೆಟ್ ಗಳನ್ನು ಹೊತ್ತೊಯ್ದಿದ್ದಾರೆ. 

ಈ ತಾತ್ಕಾಲಿಕ ಟೆಂಟ್ ಗಳಿಂದ ಭಕ್ತಾದಿಗಳು ಬ್ಲ್ಯಾಂಕೆಟ್ ಹೊತ್ತೊಯ್ದಿರುವ ಮಾಹಿತಿಯನ್ನು ಪ್ರಕಟಿಸಿರುವ ಟ್ರಸ್ಟ್, ಅವುಗಳನ್ನು ವಾಪಸ್ ನೀಡುವಂತೆ ಹೇಳಿದೆ. ಈ ಬ್ಲಾಂಕೆಟ್ ಗಳನ್ನು ದಯವಿಟ್ಟು ವಾಪಸ್ ನೀಡಿ ಎಂದು ಟ್ರಸ್ಟ್ ಮನವಿ ಮಾಡಿದೆ. ಈ ದಿನವೂ ರಾಮಲಲ್ಲಾ ದರ್ಶನ ಪಡೆಯುವುದಕ್ಕೆ ಭಕ್ತ ಸಾಗರ ನೆರೆದಿದ್ದು ಕಿ.ಮೀ ಗಟ್ಟಲೆ ಭಕ್ತಾದಿಗಳು ಸರತಿಸಾಲಿನಲ್ಲಿ ನಿಂತು ದರ್ಶನಕ್ಕಾಗಿ ಕಾಯುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನರನ್ನು ಮೂರ್ಖರನ್ನಾಗಿಸುವವನೇ ಶ್ರೇಷ್ಠ ನಾಯಕ: ಕೇಂದ್ರ ಸಚಿವ ನಿತಿನ್ ಗಡ್ಕರಿ

Rain Alert: ರಾಜ್ಯಾದ್ಯಂತ ಮುಂದಿನ 5 ದಿನ ಭಾರಿ ಮಳೆ, ಬೆಂಗಳೂರು, ಕರಾವಳಿ ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!

ಕಾಂಗ್ರೆಸ್, ಚಾಮುಂಡಿ ಬೆಟ್ಟವನ್ನು 'ಟೂಲ್‌ಕಿಟ್' ಆಗಿ ಬಳಸುತ್ತಿದೆ: ಆರ್ ಅಶೋಕ್

ಉಡುಪಿ: ನಾಪತ್ತೆಯಾಗಿದ್ದ ಬೆಂಗಳೂರು ಮಹಿಳೆಯ ಶವ ಸೌಪರ್ಣಿಕಾ ನದಿಯಲ್ಲಿ ಪತ್ತೆ!

'HAL ನಿರ್ಮಿತ ತೇಜಸ್ ಮಾರ್ಕ್-1ಎ ಫೈಟರ್ ಜೆಟ್‌ ಗಳು ಹಸ್ತಾಂತರಕ್ಕೆ ಸಿದ್ಧ': ರಕ್ಷಣಾ ಕಾರ್ಯದರ್ಶಿ

SCROLL FOR NEXT