ದೇಶ

ಅಧಿಕಾರ ಕಳೆದುಕೊಳ್ಳುತ್ತಿರುವ ಆರ್ ಜೆಡಿ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಹೇಳಿದ್ದೇನು?

Sumana Upadhyaya

ಪಾಟ್ನಾ: ಬಿಹಾರದಲ್ಲಿ ಅಧಿಕಾರ ಕಳೆದುಕೊಳ್ಳುತ್ತಿರುವ ರಾಷ್ಟ್ರೀಯ ಜನತಾ ದಳವು(RJD) ಭಾನುವಾರ ತನ್ನ ಯುವ ನಾಯಕ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿ ನೀಡಿದ ಕೊಡುಗೆಗಳಿಗಾಗಿ "ಧನ್ಯವಾದ" ಎಂದು ಪತ್ರಿಕೆಗಳಲ್ಲಿ ಪೂರ್ಣ ಪುಟದ ಜಾಹೀರಾತುಗಳನ್ನು ನೀಡಿದೆ.

ಧನ್ಯವಾದ್ (ಧನ್ಯವಾದಗಳು) ತೇಜಶ್ವಿ, ಎಂದು ಹೇಳುವಂತೆ ಹಿಂದಿಯಲ್ಲಿ ರಾಷ್ಟ್ರೀಯ ಜನತಾ ದಳ, ಮಹಾಘಟಬಂಧನ್ ಪರಿವಾರದ ರಾಜ್ಯ ಘಟಕದಿಂದ ಜಾಹೀರಾತುಗಳನ್ನು ಪ್ರಕಟಿಸಲಾಗಿದೆ, ಲಾಲು ಪ್ರಸಾದ್ ಯಾದವ್ ಅವರ ಪುತ್ರ 34 ವರ್ಷದ ನಾಯಕ ತೇಜಸ್ವಿ ಯಾದವ್ ರ ಇಮೇಜ್ ಹೆಚ್ಚಿಸುವ ರೀತಿಯ ಪ್ರಯತ್ನ ಪಕ್ಷ ಮಾಡಿದೆ. 

2020ರ ವಿಧಾನಸಭಾ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಆರ್ ಜೆಡಿ, ಕಾಂಗ್ರೆಸ್ ಮತ್ತು ಮೂರು ಎಡ ಪಕ್ಷಗಳನ್ನು ಒಳಗೊಂಡು ಮಹಾಘಟಬಂಧನ್ ಮೈತ್ರಿ ಸರ್ಕಾರ ರಚಿಸಿತ್ತು. ಮೈತ್ರಿಯಿಂದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಹೊರಬಂದ ನಂತರ ಬಹುಮತದ ಕೊರತೆಯಿಂದ ವಿರೋಧ ಪಕ್ಷ ಸ್ಥಾನದಲ್ಲಿ ಕೂರಬೇಕಾಗಿದೆ. 

SCROLL FOR NEXT