ಸಾಂದರ್ಭಿಕ ಚಿತ್ರ 
ದೇಶ

ಜಮ್ಮು-ಕಾಶ್ಮೀರ: ಒಳನುಸುಳುವಿಕೆ ತಡೆಯಲು 960 ಯುವ ನೇಮಕಾತಿಗಳ ಹೊಸ ಪಡೆ ನಿಯೋಜನೆ

ಹೊಸದಾಗಿ ನೇಮಕಗೊಂಡ 960 ಪೊಲೀಸರಲ್ಲಿ 560 ಮಂದಿಯನ್ನು ಜಮ್ಮುವಿನ ಗಡಿ ಪ್ರದೇಶಗಳಲ್ಲಿ ಮತ್ತು ಉಳಿದವರನ್ನು ಕಣಿವೆಯ ಗಡಿ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.

ಶ್ರೀನಗರ: ಜಮ್ಮು ಪ್ರದೇಶದಲ್ಲಿ ಇತ್ತೀಚಿಗೆ ಉಗ್ರ ದಾಳಿಗಳು ಮತ್ತು ಒಳನುಸುಳುವಿಕೆ ಹೆಚ್ಚುತ್ತಿದ್ದು, ಇದನ್ನು ತಡೆಯಲು ಜಮ್ಮ ಮತ್ತು ಕಾಶ್ಮೀರ ಪೊಲೀಸರು ಕೇಂದ್ರಾಡಳಿತ ಪ್ರದೇಶದ ಗಡಿ ಗ್ರಾಮಗಳಿಂದ 960 ಯುವ ನೇಮಕಾತಿಗಳ ಹೊಸ ಪಡೆಯನ್ನು ರಚಿಸಿದ್ದಾರೆ ಮತ್ತು ಅಂತಹ ಘಟನೆಗಳನ್ನು ಪರಿಶೀಲಿಸಲು ಅವರನ್ನು ಗಡಿಗಳಲ್ಲಿ ನಿಯೋಜಿಸಿದ್ದಾರೆ.

ಹೊಸದಾಗಿ ನೇಮಕಗೊಂಡ 960 ಪೊಲೀಸರಲ್ಲಿ 560 ಮಂದಿಯನ್ನು ಜಮ್ಮುವಿನ ಗಡಿ ಪ್ರದೇಶಗಳಲ್ಲಿ ಮತ್ತು ಉಳಿದವರನ್ನು ಕಣಿವೆಯ ಗಡಿ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.

“ಈ ಯುವಕರು ಇತ್ತೀಚೆಗೆ ಪೊಲೀಸ್ ತರಬೇತಿ ಕೇಂದ್ರಗಳಿಂದ ಉತ್ತೀರ್ಣರಾಗಿದ್ದಾರೆ. ಅವರು ಗಡಿ ಗ್ರಾಮಗಳ ನಿವಾಸಿಗಳಾಗಿದ್ದು, ನಿರ್ದಿಷ್ಟ ಸ್ಥಳಕ್ಕೆ ಅನುಗುಣವಾಗಿ ಅವರ ನೇಮಕಾತಿಯನ್ನು ಮಾಡಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಆರ್ ಆರ್ ಸ್ವೈನ್ ಅವರು ತಿಳಿಸಿದ್ದಾರೆ.

"ಅವರನ್ನು ಉಗ್ರ ವಿರೋಧಿ ಮತ್ತು ಒಳನುಸುಳುವಿಕೆ ವಿರೋಧಿ ಕರ್ತವ್ಯಗಳಿಗಾಗಿ ಮಾತ್ರ ನಿಯೋಜಿಸಲಾಗುವುದು" ಎಂದು ಅವರು ಹೇಳಿದ್ದಾರೆ.

ಈಗ ನೇಮಕಗೊಂಡವರು ಗಡಿ ನಿವಾಸಿಗಳಾಗಿರುವುದರಿಂದ ಅವರಿಗೆ ಸ್ಥಳೀಯವಾಗಿ ಎಲ್ಲಾ ಮಾಹಿತಿ ಇರುತ್ತದೆ. ಶೂನ್ಯ ಒಳನುಸುಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಗ್ರಾಮಸ್ಥರನ್ನು ಕರೆದೊಯ್ಯಲು ಅವರು ಸಹಾಯ ಮಾಡಬಹುದು ಎಂದು ಡಿಜಿಪಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ: ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ, Video!

ಫ್ಲೈದುಬೈ ದಾಳಿ 'ಭಯೋತ್ಪಾದಕ ಕೃತ್ಯ': ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ 'ನಿಜವಾದ ಹೀರೋ' UAE ಶ್ಲಾಘನೆ!

'ಒಂದೇ ಒಂದು ಪೋಸ್ಟ್ ಕೂಡ ಮಾಡಿಲ್ಲ: ಸ್ಮಿತ್ ಮಚ್ಚರ್ ವಿಚಾರದಲ್ಲಿ ರಾಹುಲ್ ಗಾಂಧಿಯ ಮೌನವನ್ನು ಪ್ರಶ್ನಿಸಿದ ಕಿಶನ್ ರೆಡ್ಡಿ!

ಭೂಕಬಳಿಕೆ ಆರೋಪದ ನಡುವೆ ಡಿಕೆಶಿ ಕುಟುಂಬಕ್ಕೆ ಸೇರಿದ 200 ಎಕರೆಗೂ ಹೆಚ್ಚಿನ ಭೂಮಿ ವೀಕ್ಷಿಸಿದ ಕುಮಾರಸ್ವಾಮಿ! ಹೇಳಿದ್ದೇನು?