ಸಾಂಕೇತಿಕ ಚಿತ್ರ online desk
ದೇಶ

ಪಂಜಾಬ್: ಮಾರಕಾಸ್ತ್ರಗಳಿಂದ ಶಿವಸೇನೆ ನಾಯಕನ ಮೇಲೆ ಹಲ್ಲೆ!

ವೀಡಿಯೊದಲ್ಲಿ, ದಾಳಿಕೋರರು ನಿಹಾಂಗ್ಸ್ ವೇಷ ಧರಿಸಿದ್ದು ಸ್ಪಷ್ಟವಾಗಿ ಕಾಣುತ್ತಿದೆ. ಥಾಪರ್ ಅವರು ದಾಳಿಕೋರರೊಂದಿಗೆ ಕೈ ಜೋಡಿಸಿ ಮಾತನಾಡುತ್ತಿದ್ದಾಗ ಅವರಲ್ಲಿ ಒಬ್ಬ ಏಕಾಏಕಿ ಕತ್ತಿಯಿಂದ ದಾಳಿ ಮಾಡಿದ್ದಾನೆ.

ಪಂಜಾಬ್: ಪಂಜಾಬ್ ನಲ್ಲಿ ಶಿವಸೇನೆ ನಾಯಕನ ಮೇಲೆ ಖಡ್ಗದಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ನಾಲ್ವರು ಅಪರಿಚಿತ ದುಷ್ಕರ್ಮಿಗಳು ಈ ದಾಳಿ ನಡೆಸಿದ್ದು, ಖಡ್ಗಗಳಿಂದ ಹಾಡ ಹಗಲೇ ಈ ಕೃತ್ಯ ಎಸಗಿದ್ದಾರೆ.

ಸಿವಿಲ್ ಆಸ್ಪತ್ರೆಯಿಂದ ಬಳಿ ಇರುವ ಸಂವೇದನಾ ಟ್ರಸ್ಟ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೊರಬರುತ್ತಿದ್ದ ಸಂದೀಪ್ ಥಾಪರ್ (58) ಮೇಲೆ ಈ ದಾಳಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಸಂವೇದನಾ ಟ್ರಸ್ಟ್ ರೋಗಿಗಳಿಗೆ ಮತ್ತು ಶವ ವಾಹನಗಳಿಗೆ ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸುತ್ತದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ವೀಡಿಯೊದಲ್ಲಿ, ದಾಳಿಕೋರರು ನಿಹಾಂಗ್ಸ್ ವೇಷ ಧರಿಸಿದ್ದು ಸ್ಪಷ್ಟವಾಗಿ ಕಾಣುತ್ತಿದೆ. ಥಾಪರ್ ಅವರು ದಾಳಿಕೋರರೊಂದಿಗೆ ಕೈ ಜೋಡಿಸಿ ಮಾತನಾಡುತ್ತಿದ್ದಾಗ ಅವರಲ್ಲಿ ಒಬ್ಬ ಏಕಾಏಕಿ ಕತ್ತಿಯಿಂದ ದಾಳಿ ಮಾಡಿದ್ದಾನೆ. ಇನ್ನೊಬ್ಬ ಆಕ್ರಮಣಕಾರ ಥಾರ್ಪರ್‌ನ ಭದ್ರತಾ ಸಿಬ್ಬಂದಿಯನ್ನು ದೂರ ತಳ್ಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ನಂತರ ಇಬ್ಬರು ಆರೋಪಿಗಳು ಥಾಪರ್ ಅವರ ಸ್ಕೂಟರ್ ನಲ್ಲಿ ಪರಾರಿಯಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT