ಬಿಹಾರ ಸಿಎಂ ನಿತೀಶ್ ಕುಮಾರ್  
ದೇಶ

ಕಾಲಿಗೆ ಬೀಳ್ತೀನಿ ಯೋಜನೆ ಬೇಗ ಪೂರ್ಣಗೊಳಿಸಿ: ಖಾಸಗಿ ಕಂಪನಿ ಅಧಿಕಾರಿಗೆ ನಿತೀಶ್ ಕುಮರ್ ಮನವಿ!

ನಿತೀಶ್ ಕುಮಾರ್ ಈ ರೀತಿ ಮಾಡುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ, ಭೂವಿವಾದಗಳನ್ನು ವ್ಯಾಪಕವಾದ ಸಮೀಕ್ಷೆಗಳನ್ನು ನಡೆಸುವ ಮೂಲಕ ತ್ವರಿತವಾಗಿ ಇತ್ಯರ್ಥಪಡಿಸುವಂತೆ ಒತ್ತಾಯಿಸಿದ್ದ ನಿತೀಶ್ ಕುಮಾರ್ ಉನ್ನತ ಶ್ರೇಣಿಯ ಐಎಎಸ್ ಅಧಿಕಾರಿಯ ಕಾಲಿಗೆ ಬೀಳಲು ಮುಂದಾಗಿದ್ದರು.

ಪಾಟ್ನ: ರಸ್ತೆ ಯೋಜನೆ ಪೂರ್ಣಗೊಳ್ಳದ್ದಕ್ಕೆ ತೀವ್ರ ಅಸಮಾಧಾನಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್, "ಕಾಲಿಗೆ ಬೀಳ್ತೀನಿ ಯೋಜನೆಯನ್ನು ಬೇಗ ಪೂರ್ಣಗೊಳಿಸಿ" ಎಂದು ಖಾಸಗಿ ಸಂಸ್ಥೆಯ ಅಧಿಕಾರಿಯೊಬ್ಬರಿಗೆ ಹೇಳಿರುವ ಪ್ರಸಂಗ ಇಂದು ನಡೆದಿದೆ.

ಜೆಪಿ ಗಂಜ್ ಪಥ್ ನ ಎಕ್ಸ್ ಪ್ರೆಸ್ ವೇ ವ್ಯಾಪ್ತಿಯಲ್ಲಿ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಉದ್ದೇಶಿಸಿರುವ ಯೋಜನೆ ಇದಾಗಿದ್ದು, ಈ ಪ್ರದೇಶದಲ್ಲಿ ನಡೆದ ಕಾರ್ಯಕ್ರಮಕ್ಕೆ ತೆರಳಿದಾಗ ನಿತೀಶ್ ಕುಮಾರ್ ಅಸಮಾಧಾನಗೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಮತ್ತು ಸ್ಥಳೀಯ ಸಂಸದ ರವಿಶಂಕರ್ ಪ್ರಸಾದ್ ಮುಂತಾದ ಗಣ್ಯರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಯೋಜನೆಯ ಪ್ರಗತಿಯ ಕುರಿತು ಪ್ರಸ್ತುತಿ ಮಾಡಲಾಯಿತು.

ಸುಧೀರ್ಘ ಅವಧಿಯ ಸಿಎಂ, ಸುಡುವ ವಾತಾವರಣದಲ್ಲಿ ಕುಳಿತು ಬೆವರುತ್ತಿದ್ದದ್ದು ಕಂಡುಬಂದಿತು. ತೀವ್ರ ಅಸಮಾಧಾನಗೊಂಡ ನಿತೀಶ್ ಕುಮಾರ್, ವರ್ಷಾಂತ್ಯದೊಳಗೆ ಸಂಪೂರ್ಣ ಕೆಲಸವನ್ನು ಪೂರ್ಣಗೊಳಿಸುವಂತೆ ಕಂಪನಿಯ ಅಧಿಕಾರಿಯನ್ನು ಕೇಳಿದರು.

ನಿಮಗೆ ಬೇಕಿದ್ದರೆ, ಕಾಲಿಗೆ ಬೀಳ್ತೀನಿ ಬೇಗ ಯೋಜನೆಯನ್ನು ಪೂರ್ಣಗೊಳಿಸಿ ಎಂದು ನಿತೀಶ್ ಕುಮಾರ್ ಕಾಲಿಗೆ ಬೀಳಲು ಮುಂದಾದಾಗ ಹಿಂದೆಸರಿದು, ಸರ್ ದಯವಿಟ್ಟು ಈ ರೀತಿ ಮಾಡಬೇಡಿ ಎಂದು ಮನವಿ ಮಾಡಿದರು ತಕ್ಷಣವೇ ಅಲ್ಲಿದ್ದ ಅಧಿಕಾರಿಗಳು ಮತ್ತು ಸಚಿವರು ನಿತೀಶ್ ಕುಮಾರ್ ಅವರನ್ನು ಸಮಾಧಾನಪಡಿಸಿದರು.

ನಿತೀಶ್ ಕುಮಾರ್ ಈ ರೀತಿ ಮಾಡುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ, ಭೂವಿವಾದಗಳನ್ನು ವ್ಯಾಪಕವಾದ ಸಮೀಕ್ಷೆಗಳನ್ನು ನಡೆಸುವ ಮೂಲಕ ತ್ವರಿತವಾಗಿ ಇತ್ಯರ್ಥಪಡಿಸುವಂತೆ ಒತ್ತಾಯಿಸಿದ್ದ ನಿತೀಶ್ ಕುಮಾರ್ ಉನ್ನತ ಶ್ರೇಣಿಯ ಐಎಎಸ್ ಅಧಿಕಾರಿಯ ಕಾಲಿಗೆ ಬೀಳಲು ಮುಂದಾಗಿದ್ದರು.

ರಾಜ್ಯದಲ್ಲಿ ಹಿಂಸಾತ್ಮಕ ಅಪರಾಧಗಳಿಗೆ ಹಿಡುವಳಿ ವಿಚಾರದಲ್ಲಿ ಜಗಳಗಳು ಪ್ರಮುಖ ಕಾರಣವಾಗುತ್ತಿರುವುದನ್ನು ನಿತೀಶ್ ಕುಮಾರ್ ಮನಗಂಡಿದ್ದಾರೆ.

ಈ ಘಟನೆಗಳನ್ನು ಉಲ್ಲೇಖಿಸಿ ಬಿಹಾರದ ವಿಪಕ್ಷ ನಾಯಕ ತೇಜಸ್ವಿ ಯಾದವ್ ಹೇಳಿಕೆ ನೀಡಿದ್ದು, ಮುಖ್ಯಮಂತ್ರಿ "ಲಾಚಾರ್" ಅಂದರೆ ಅಶಕ್ತರಾಗಿದ್ದು, ಅವರು "ಸರ್ಕಾರಿ ಅಧಿಕಾರಿಗಳಾಗಲಿ ಅಥವಾ ಖಾಸಗಿ ವಲಯದವರಾಗಲಿ ಎಲ್ಲರ ಪಾದಗಳಿಗೆ ಬೀಳಲು ಯಾವಾಗಲೂ ಸಿದ್ಧರಾಗಿರುತ್ತಾರೆ" ಎಂದು ಟೀಕಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT