ಲಖನೌ: 2024 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಸೋಲು ರಾಜ್ಯದ ಕೆಲವು ಹಿರಿಯ ನಾಯಕರನ್ನು ಪಕ್ಷದ ಭವಿಷ್ಯದ ಬಗ್ಗೆ ಚಿಂತಿಸುವಂತೆ ಮಾಡಿದೆ. ಇದು 2027 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಕಿಡಿಕಾರಿರುವ ಬದ್ಲಾಪುರ ಬಿಜೆಪಿ ಶಾಸಕ ರಮೇಶ್ ಚಂದ್ರ ಮಿಶ್ರಾ ಅವರ ಮಾತುಗಳಲ್ಲಿ ಪ್ರತಿಧ್ವನಿಸಿದೆ.
ಉತ್ತರ ಪ್ರದೇಶದಲ್ಲಿಸದ್ಯ ಪಕ್ಷದ ಸ್ಥಿತಿ ಅತಂತ್ರವಾಗಿದೆ. 2027ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದಿಂದ ಕೆಳಗಿಳಿಯುವ ಭೀತಿ ಎದುರಿಸುತ್ತಿದೆ ಎಂದು ಎರಡು ಬಾರಿಯ ಬಿಜೆಪಿ ಶಾಸಕ ಮಿಶ್ರಾ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಜ್ಯದಲ್ಲಿ ಪಕ್ಷ ಬಲಪಡಿಸಲು ರಾಷ್ಟ್ರೀಯ ನಾಯಕತ್ವ ದೊಡ್ಡ ನಿರ್ಧಾರ ತೆಗೆದುಕೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ರಾಜಕೀಯ ಭಾಷಣಗಳ ಜನಪ್ರಿಯತೆ ಹೆಚ್ಚುತ್ತಿರುವ ಸವಾಲಿನ ಕುರಿತು ಮಾತನಾಡಿರುವ ಮಿಶ್ರಾ, ಹಿಂದುಳಿದ ವರ್ಗಗಳು ಅಥವಾ ಒಬಿಸಿ, ದಲಿತರು ಮತ್ತು ಅಲ್ಪಸಂಖ್ಯಾತರು ರಾಜಕೀಯವಾಗಿ ಪ್ರಬಲವಾಗಿದ್ದು, ಸಮಾಜವಾದಿ ಪಕ್ಷ ದಾರಿ ತಪ್ಪಿಸುವ ವಾತವಾರಣ ಸೃಷ್ಟಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಪಕ್ಷ ರಾಜ್ಯದಲ್ಲಿ ಪ್ರಬಲವಾದಂತೆ ಕಂಡುಬರುತ್ತಿಲ್ಲ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷ ಸಂಘಟಿಸಲು ಶ್ರಮಿಸಬೇಕು. ಆಗ ಮಾತ್ರ ಮತ್ತೆ ಬಿಜೆಪಿ ಸರ್ಕಾರ ರಚನೆ ಸಾಧ್ಯ, ಇಲ್ಲವಾದರೆ ನಮ್ಮ ಸರ್ಕಾರದ ಪರಿಸ್ಥಿತಿ ಕೆಟ್ಟದಾಗಿರುತ್ತದೆ ಎಂದಿದ್ದಾರೆ.
ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲಿನ ನಂತರ ಪಕ್ಷದ ಕಾರ್ಯಕರ್ತರಲ್ಲಿ ಆತಂಕ ಹೆಚ್ಚಿರುವುದನ್ನು ಮಿಶ್ರಾ ಹೇಳಿಕೆಯಲ್ಲಿ ಪ್ರತಿಧ್ವನಿಸಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಮತ್ತೊಂದೆಡೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕಳೆದುಕೊಳ್ಳುವ ಭಯದಿಂದ ರಾಷ್ಟ್ರೀಯ ನಾಯಕರ ಮಧ್ಯಸ್ಥಿಕೆಗೆ ಮಿಶ್ರಾ ಈ ರೀತಿಯ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.
ರಾಷ್ಟ್ರೀಯ ನಾಯಕತ್ವದ ಮಧ್ಯಸ್ಥಿಕೆಗೆ ಕರೆ ನೀಡಲು ಮಿಶ್ರಾ ಅವರನ್ನು ತಳ್ಳಿದೆ ಎಂದು ನಂಬಲಾದ ಮತ್ತೊಂದು ಅಂಶವೆಂದರೆ ಮುಂದಿನ ಹಂತದಲ್ಲಿ ಟಿಕೆಟ್ ಕಳೆದುಕೊಳ್ಳುವ ಭಯ. ಮಿಶ್ರಾ ಅವರು 2017 ರಲ್ಲಿ ಬದ್ಲಾಪುರ್ ಕ್ಷೇತ್ರವನ್ನು 2,300 ಮತಗಳ ಅಂತರದಿಂದ ಗೆದ್ದಿದ್ದರು, ಅದು 2022 ರ ವಿಧಾನಸಭಾ ಚುನಾವಣೆಯಲ್ಲಿ 1,300 ಕ್ಕೆ ಇಳಿದಿತ್ತು. 2027ರ ಚುನಾವಣೆಯಲ್ಲಿ ಮಿಶ್ರಾ ಟಿಕೆಟ್ ಪಡೆಯುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ಮೂಲಗಳು ಹೇಳಿವೆ.