ಚಂಡೀಗಢ: ಪಾಕಿಸ್ತಾನದ ಕಡೆಯಿಂದ ಬರುತ್ತಿದ್ದ ಡ್ರೋನ್ ಅನ್ನು ಪಂಜಾಬ್‌ನ ಫಜಿಲ್ಕಾ ಜಿಲ್ಲೆಯ ಅಂತರಾಷ್ಟ್ರೀಯ ಗಡಿಯ ಬಳಿ ಬಿಎಸ್‌ಎಫ್ ಹೊಡೆದುರುಳಿಸಿದ್ದು, ಅದು ಸಾಗಿಸುತ್ತಿದ್ದ ಮೂರು ಪಿಸ್ತೂಲ್‌ಗಳ ಪ್ಯಾಕೆಟ್ ಅನ್ನು ಶನಿವಾರ ವಶಪಡಿಸಿಕೊಂಡಿದೆ ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಪಾಕಿಸ್ತಾನದ ಕಡೆಯಿಂದ ಬರುತ್ತಿದ್ದ ಡ್ರೋನ್ ಅನ್ನು ಗಮನಿಸಿದ ನಂತರ, ಗಡಿ ಭದ್ರತಾ ಪಡೆ ಸಿಬ್ಬಂದಿ ಅದರ ಮೇಲೆ ಗುಂಡು ಹಾರಿಸಿದರು. ನಂತರ ನಡೆದ ವ್ಯಾಪಕ ಶೋಧ ಕಾರ್ಯಾಚರಣೆಯಲ್ಲಿ, ಪಿಸ್ತೂಲ್ ಗಳು ಇದ್ದ ಪ್ಯಾಕೆಟ್ ಜೊತೆಗೆ ಚೀನಾ ನಿರ್ಮಿತ ಡ್ರೋನ್ ಅನ್ನು ವಶಪಡಿಸಿಕೊಂಡಿದೆ" ಎಂದು ಅಧಿಕಾರಿ ಹೇಳಿದ್ದಾರೆ.
ಪಾರ್ಸೆಲ್‌ನಲ್ಲಿ ಮೂರು ಪಿಸ್ತೂಲ್‌ಗಳು ಮತ್ತು ಏಳು ಮ್ಯಾಗಜೀನ್‌ಗಳು ಪತ್ತೆಯಾಗಿವೆ ಎಂದು ಬಿಎಸ್‌ಎಫ್ ಅಧಿಕಾರಿ ತಿಳಿಸಿದ್ದಾರೆ.
ಫಾಜಿಲ್ಕಾ ಜಿಲ್ಲೆಯ ಮಹರ್ಸೋನಾ ಗ್ರಾಮದ ಪಕ್ಕದ ಕೃಷಿ ಹೊಲದಲ್ಲಿ ಡ್ರೋನ್ ಹೊಡೆದುರುಳಿಸಲಾಗಿದೆ.
ಮತ್ತೊಂದು ಘಟನೆಯಲ್ಲಿ, ಗುರುದಾಸ್‌ಪುರ ಜಿಲ್ಲೆಯ ರಟ್ಟಾರ್ ಚತ್ತರ್ ಗ್ರಾಮದ ಬಳಿಯ ಹೊಲವೊಂದರಲ್ಲಿ 2. 3 ಕೆಜಿ ಹೆರಾಯಿನ್ ಹೊಂದಿರುವ ಪ್ಯಾಕೆಟ್ ಅನ್ನು ಬಿಎಸ್‌ಎಫ್ ವಶಪಡಿಸಿಕೊಂಡಿದೆ.
ಬಿಎಸ್ಎಫ್ ಪಡೆಗಳು ನಿರ್ದಿಷ್ಟ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ನಂತರ ಹೆರಾಯಿನ್ ಅನ್ನು ವಶಪಡಿಸಿಕೊಂಡಿವೆ ಎಂದು ಬಿಎಸ್‌ಎಫ್ ಅಧಿಕಾರಿ ತಿಳಿಸಿದ್ದಾರೆ.