ಅರವಿಂದ್ ಕೇಜ್ರಿವಾಲ್ 
ದೇಶ

ಕೇಜ್ರಿವಾಲ್ ತೂಕ ಇಳಿಕೆ: ಎಎಪಿ ಹೇಳಿಕೆ ತಳ್ಳಿಹಾಕಿದ ತಿಹಾರ್ ಜೈಲು ಅಧಿಕಾರಿಗಳು!

ಕಡಿಮೆ ಪ್ರಮಾಣದ ಆಹಾರ ಸೇವನೆ ಅಥವಾ ಕಡಿಮೆ ಕ್ಯಾಲೋರಿ ಸೇವನೆಯಿಂದಾಗಿ ಸುಮಾರು 3.5 ಕೆ.ಜಿ.ಯಷ್ಟು ತೂಕ ಕಡಿಮೆಯಾಗಿರಬಹುದೆಂದು ಕೇಂದ್ರ ಕಾರಾಗೃಹ ಸಂಖ್ಯೆ 2ರ ಹಿರಿಯ ವೈದ್ಯಾಧಿಕಾರಿಗಳ ವರದಿಯಲ್ಲಿ ಹೇಳಲಾಗಿದೆ.

ನವದೆಹಲಿ: ಜೈಲಿನಲ್ಲಿರುವ ಅರವಿಂದ್ ಕೇಜ್ರಿವಾಲ್ ತೂಕ ಕಳೆದುಕೊಂಡಿದ್ದಾರೆ ಎಂಬ AAP ನಾಯಕರ ಆರೋಪಗಳನ್ನು ಜೈಲಿನ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಏಷ್ಯಾದಲ್ಲಿ ಅತ್ಯಂತ ಹೆಚ್ಚಿನ ಭದ್ರತೆ ಹೊಂದಿರುವ ತಿಹಾರ್ ಜೈಲಿನಲ್ಲಿ 8.5 ಕೆಜಿ ತೂಕ ಕಳೆದುಕೊಂಡಿಲ್ಲ, ಬದಲಿಗೆ ಸುಮಾರು 3.5 ಕೆಜಿ ತೂಕ ಕಳೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಜೈಲು ಅಧಿಕಾರಿಗಳ ಪ್ರಕಾರ, ಕೇಜ್ರಿವಾಲ್ ತಿಹಾರ್ ಸೆಂಟ್ರಲ್ ಜೈಲು ಸೇರಿದ ಏಪ್ರಿಲ್ 1 ರಂದು ಅವರ ತೂಕ 65 ಕೆಜಿ ಇತ್ತು. ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಮೇ 10 ರ ನಂತರ ಅವರ ತೂಕ 64 ಕೆಜಿ ಆಗಿತ್ತು. ಮತ್ತೆ ಅವರು ಜೈಲು ಸೇರಿದಾಗ ಜೂನ್ 2 ರಂದು ಅವರ ತೂಕ 63. 5 ಕೆಜಿ, ಸದ್ಯ ಅವರು 61.5 ಕೆಜಿ ತೂಕ ಹೊಂದಿರುವುದಾಗಿ ಅರು ತಿಳಿಸಿದ್ದಾರೆ. ಕಡಿಮೆ ಪ್ರಮಾಣದ ಆಹಾರ ಸೇವನೆ ಅಥವಾ ಕಡಿಮೆ ಕ್ಯಾಲೋರಿ ಸೇವನೆಯಿಂದಾಗಿ ಸುಮಾರು 3.5 ಕೆ.ಜಿ.ಯಷ್ಟು ತೂಕ ಕಡಿಮೆಯಾಗಿರಬಹುದೆಂದು ಕೇಂದ್ರ ಕಾರಾಗೃಹ ಸಂಖ್ಯೆ 2ರ ಹಿರಿಯ ವೈದ್ಯಾಧಿಕಾರಿಗಳ ವರದಿಯಲ್ಲಿ ಹೇಳಲಾಗಿದೆ.

ತಿಹಾರ್ ಜೈಲಿನಲ್ಲಿ ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ ತೀವ್ರವಾಗಿ ಕುಸಿದಿದ್ದು, ಕೋಮಾ ಅಥವಾ ಬ್ರೈನ್ ಸ್ಟ್ರೋಕ್‌ಗೆ ಒಳಗಾಗುವ ಅಪಾಯವಿದೆ ಎಂದು AAP ಆರೋಪಿಸಿತ್ತು. ಸಿಬಿಐ ಮೂಲಕ ಕೇಜ್ರಿವಾಲ್ ಅವರನ್ನು ಬಂಧಿಸುವ ಮೂಲಕ ಬಿಜೆಪಿಯು ಅವರ ಆರೋಗ್ಯದೊಂದಿಗೆ ಆಟವಾಡುತ್ತಿದೆ ಎಂದು ದೆಹಲಿ ಸಚಿವೆ ಅತಿಶಿ ಸಿಂಗ್ ನಿನ್ನೆ ಆರೋಪಿಸಿದ್ದರು.

ಎಎಪಿ ನಾಯಕರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ತಿಹಾರ್ ಜೈಲು ಆಡಳಿತವು ಗೃಹ ಇಲಾಖೆ ಉಪ ಕಾರ್ಯದರ್ಶಿಗೆ ಪತ್ರವನ್ನು ಕಳುಹಿಸಿದ್ದು, ಅದರಲ್ಲಿ ಮುಖ್ಯಮಂತ್ರಿಯ ಆರೋಗ್ಯ ಸ್ಥಿತಿಯ ಬಗ್ಗೆ ವಿವರ ನೀಡಲಾಗಿದೆ.

ಕೇಜ್ರಿವಾಲ್ ಹಿರಿಯ ವೈದ್ಯಾಧಿಕಾರಿಗಳ ಮೇಲ್ವಿಚಾರಣೆಯಲ್ಲಿದ್ದಾರೆ. ಅವರ ಆರೋಗ್ಯದ ಮೇಲೆ ನಿರಂತರವಾಗಿ ನಿಗಾ ವಹಿಸಲಾಗಿದ್ದು, ಪ್ರತಿದಿನ ಪರಿಶೀಲಿಸಲಾಗುತ್ತಿದೆ ಎಂದು ಹೇಳಲಾಗಿದೆ.

ವೈದ್ಯಕೀಯ ಮಂಡಳಿಯ ಸಲಹೆಯಂತೆ ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ವೈದ್ಯಕೀಯ ಮಂಡಳಿಯ ಸಲಹೆಯಂತೆ ಅವರಿಗೆ ಚಿಕಿತ್ಸೆ ಮತ್ತು ಆಹಾರವನ್ನು ನೀಡಲಾಗುತ್ತಿದೆ ಎಂದು ಅದು ದೆಹಲಿ ಸರ್ಕಾರದ ಕೆಲವು ಸಚಿವರು, ಓರ್ವ ಸಂಸದರು ಮತ್ತು ಇತರ ಶಾಸಕರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದು ತಿಹಾರ್ ಆಡಳಿತ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT