ಸಂಗ್ರಹ ಚಿತ್ರ 
ದೇಶ

Union Budget 2024: ಈ ಬಾರಿ ಯಾವುದು ಅಗ್ಗ, ಯಾವುದು ದುಬಾರಿ?

ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಕೆಲವು ವಸ್ತುಗಳ ಸುಂಕದಲ್ಲಿ ಏರಿಳಿತ ಮಾಡುವ ಹೊತ್ತಲ್ಲಿ ಪರಿಸರ ಸ್ನೇಹಿ ನಿಲುವನ್ನು ಅನುಸರಿಸಿದೆ.

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮೋದಿ ಸರ್ಕಾರ 3.0 ಅವಧಿಯ ಮೊದಲ ಬಜೆಟ್ ಮಂಡನೆ ಮಾಡಿದ್ದು, ಬಜೆಟ್‌ನಲ್ಲಿ ಹಲವು ಸರಕು ಹಾಗೂ ಸೇವೆಗಳ ಮೇಲಿನ ತೆರಿಗೆ ಏರಿಳಿತ ಮಾಡಲಾಗಿದೆ, ಈ ಹಿನ್ನೆಲೆಯಲ್ಲಿ ಬಜೆಟ್‌ ಬಳಿಕ ಏರಿಳಿತ ಕಾಣುವ ಸರಕು ಹಾಗೂ ಸೇವೆಗಳ ವಿವರ ಇಲ್ಲಿದೆ...

ಯಾವುದು ಅಗ್ಗ?

  • ಚಿನ್ನ, ಬೆಳ್ಳಿ, ಪ್ಲಾಟಿನಂ ಮೇಲಿನ ಆಮದು ಸುಂಕ ಕಡಿತ, ಬೆಲೆ ಇಳಿಕೆ

  • ತಾಮ್ರದ ಮೇಲೂ ತೆರಿಗೆ ಕಡಿತ

  • ಮೊಬೈಲ್ ಫೋನ್ ಬಿಡಿ ಭಾಗಗಳ ಮೇಲಿನ ತೆರಿಗೆ ಇಳಿಕೆ

  • ಮೊಬೈಲ್ ಫೋನ್ ಬೆಲೆ ಇಳಿಕೆ

  • ಮೊಬೈಲ್ ಫೋನ್ ಚಾರ್ಜರ್ ಬೆಲೆ ಇಳಿಕೆ

  • ಕ್ಯಾನ್ಸರ್ ಔಷಧದ ಬೆಲೆ ಇಳಿಕೆ

  • ಸೋಲಾರ್ ಪ್ಯಾನಲ್‌ಗಳ ಬೆಲೆ ಇಳಿಕೆ

  • ವಿದ್ಯುತ್ ತಂತಿ & ಎಕ್ಸ್‌ ರೇ ಉಪಕರಣಗಳ ಬೆಲೆ ಇಳಿಕೆ

  • ಆದಾಯ ತೆರಿಗೆ ಪದ್ಧತಿ ಮತ್ತಷ್ಟು ಸರಳೀಕರಣ

  • ವಿದೇಶಿ ಬಟ್ಟೆ, ಚರ್ಮೋತ್ಪನ್ನಗಳು, ಟಿವಿ ಅಗ್ಗವಾಗಲಿದೆ

  • 20 ಖನಿಜಗಳ ಮೇಲೆ ಅಬಕಾರಿ ಸುಂಕ ಇಳಿಕೆ

  • ಇಕಾಮರ್ಸ್‌ ಮೇಲಿನ ಟಿಡಿಎಸ್‌ ಶೇ 1ರಿಂದ ಶೇ 0,1ಕ್ಕೆ ಇಳಿಕೆ

  • ಸ್ಟಾರ್ಟ್‌ಅಪ್‌ ವ್ಯವಸ್ಥೆ: ಏಂಜೆಲ್ ಟ್ಯಾಕ್ಸ್‌ ರದ್ದು

ಯಾವುದು ತುಟ್ಟಿ?

  • ಮರು ಬಳಕೆ ಆಗದ ಎಲ್ಲಾ ರೀತಿಯ ಪ್ಲಾಸ್ಟಿಕ್ ವಸ್ತುಗಳ ಬೆಲೆ ಏರಿಕೆ

  • ವಿವಿಧ ರೀತಿಯ ಬಟ್ಟೆ, ವಸ್ತ್ರಗಳ ಬೆಲೆ ಏರಿಕೆ

  • ಎಲ್ಲಾ ರೀತಿಯ ವಿದ್ಯುತ್ ಉಪಕರಣಗಳ ಬೆಲೆ ಏರಿಕೆ

  • ಮೊಬೈಲ್ ಟವರ್ ಬಿಡಿ ಭಾಗಗಳ ಬೆಲೆ ಏರಿಕೆ

  • ಸ್ಟೇಟ್ ಸ್ಟ್ಯಾಂಪ್ ಡ್ಯೂಟಿ ಹೆಚ್ಚಳಕ್ಕೆ ರಾಜ್ಯ ಸರ್ಕಾರಗಳಿಗೆ ಅವಕಾಶ

ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಕೆಲವು ವಸ್ತುಗಳ ಸುಂಕದಲ್ಲಿ ಏರಿಳಿತ ಮಾಡುವ ಹೊತ್ತಲ್ಲಿ ಪರಿಸರ ಸ್ನೇಹಿ ನಿಲುವನ್ನು ಅನುಸರಿಸಿದೆ. ಅದರಲ್ಲೂ ಪರಿಸರಕ್ಕೆ ಮಾರಕವಾದ, ಮರು ಬಳಕೆ ಮಾಡಲು ಸಾಧ್ಯವೇ ಆಗದ ಪ್ಲಾಸ್ಟಿಕ್ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಸರ್ಕಾರ ಪರಿಸರ ಸ್ನೇಹಿ ನಿಲುವು ಅನುಸರಿಸಿದೆ. ಜೊತೆಯಲ್ಲೇ ಸೌರ ವಿದ್ಯುತ್ ಬಳಕೆ ಪ್ರೋತ್ಸಾಹಿಸುವ ಸಲುವಾಗಿ ಅವುಗಳ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ.

ಇನ್ನು ವಿದ್ಯುತ್ ತಂತಿ, ಎಕ್ಸರೇ ಮಿಷನ್, ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಇಳಿಕೆ ಮಾಡುವ ಮೂಲಕ ದೇಶದ ಜನತೆಯ ಅರೋಗ್ಯ ಸ್ನೇಹಿ ನಿಲುವನ್ನ ಸರ್ಕಾರ ಅನುಸರಿಸಿದೆ. ಇದೇ ವೇಳೆ ದೇಶದ ಬಹುಸಂಖ್ಯಾತ ಜನರು ಮೊಬೈಲ್ ಪ್ರಿಯರು ಹಾಗೂ ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನಂ ಆಭರಣಗಳ ಪ್ರೇಮಿಗಳು. ಇವರಿಗೆ ಗುಡ್ ನ್ಯೂಸ್ ಕೊಟ್ಟಿರುವ ಸರ್ಕಾರ, ಈ ಎಲ್ಲಾ ವಸ್ತುಗಳ ಬೆಲೆ ಇಳಿಕೆ ಆಗುವ ರೀತಿಯಲ್ಲಿ ಆಮದು ಸುಂಕವನ್ನ ಕಡಿತ ಮಾಡಿದೆ.ಆದರೆ, ಬಟ್ಟೆ ಹಾಗೂ ಎಲ್ಲಾ ವಿದ್ಯುತ್ ಉಪಕರಣಗಳ ಬೆಲೆ ಏರಿಕೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT