ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್  
ದೇಶ

ಕೇಂದ್ರ ಬಜೆಟ್ 2024: ದೇಶದಲ್ಲಿ 4 ಕೋಟಿ ಉದ್ಯೋಗ ಸೃಷ್ಟಿಸುವ ಬದಲು ಕಾರ್ಪೊರೇಟ್ ಜಗತ್ತಿಗೆ ಭೀತಿ ಹುಟ್ಟಿಸುತ್ತಿದೆಯೇ? ಅಂಕಣಕಾರರು ಏನಂತಾರೆ?

ಉದ್ಯೋಗ ಸೃಷ್ಟಿಗೆ ಅವರು ಘೋಷಿಸಿದ ಎರಡು ಪ್ರಮುಖ ಯೋಜನೆಗಳು-- ಉದ್ಯೋಗ-ಸಂಯೋಜಿತ ಪ್ರೋತ್ಸಾಹಕ (ELI) ಯೋಜನೆ ಮತ್ತು ಇಂಟರ್ನ್‌ಶಿಪ್ ಯೋಜನೆ - ಚಕ್ರವರ್ತಿಯವರು ಹೇಳುವಂತೆ ಕಾಂಗ್ರೆಸ್ ಪ್ರಣಾಳಿಕೆಯಿಂದ ಇದನ್ನು ಎರವಲು ಪಡೆಯಲಾಗಿದೆ.

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 23ರಂದು ತಮ್ಮ ಬಜೆಟ್ ಭಾಷಣದಲ್ಲಿ ಭಾರತದ ಉದ್ಯೋಗ ಸಮಸ್ಯೆಯನ್ನು ಸಂಪೂರ್ಣವಾಗಿ ತೆರೆದಿಟ್ಟಂತೆ ಕಂಡುಬರುತ್ತಿದೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಅಂಕಣಕಾರರಲ್ಲಿ ಒಬ್ಬರಾದ ಪ್ರವೀಣ್ ಚಕ್ರವರ್ತಿ ಅವರು ಗಮನಿಸಿರುವಂತೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ 'ಉದ್ಯೋಗ' ಎಂಬ ಪದವನ್ನು 24 ಬಾರಿ ಉಲ್ಲೇಖಿಸಿದ್ದಾರೆ. 4 ಕೋಟಿ ಯುವ ಭಾರತೀಯರಿಗೆ ಸ್ಪಷ್ಟವಾಗಿ ಕೌಶಲ್ಯ ತರಬೇತಿ ಮತ್ತು ಉದ್ಯೋಗಗಳನ್ನು ಒದಗಿಸಲು ಮುಂದಿನ ಐದು ವರ್ಷಗಳಲ್ಲಿ ಉದ್ಯೋಗ ಮತ್ತು ಕೌಶಲ್ಯ ಯೋಜನೆಗಳಿಗಾಗಿ ಕೇಂದ್ರ ಸರ್ಕಾರ 2 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.

ಉದ್ಯೋಗ ಸೃಷ್ಟಿಗೆ ಅವರು ಘೋಷಿಸಿದ ಎರಡು ಪ್ರಮುಖ ಯೋಜನೆಗಳು-- ಉದ್ಯೋಗ-ಸಂಯೋಜಿತ ಪ್ರೋತ್ಸಾಹಕ (ELI) ಯೋಜನೆ ಮತ್ತು ಇಂಟರ್ನ್‌ಶಿಪ್ ಯೋಜನೆ - ಚಕ್ರವರ್ತಿಯವರು ಹೇಳುವಂತೆ ಕಾಂಗ್ರೆಸ್ ಪ್ರಣಾಳಿಕೆಯಿಂದ ಇದನ್ನು ಎರವಲು ಪಡೆಯಲಾಗಿದೆ.

ಈ ಬಗ್ಗೆ ಪ್ರವೀಣ್ ಚಕ್ರವರ್ತಿ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ನಲ್ಲಿ ಬರೆದಿರುವ ತಮ್ಮ ಅಂಕಣದಲ್ಲಿ ಉದ್ಯೋಗದಂತಹ ನಿರ್ಣಾಯಕ ರಾಷ್ಟ್ರೀಯ ವಿಷಯದ ಬಗ್ಗೆ ಉಭಯಪಕ್ಷಗಳ ಒಮ್ಮತವು ಶ್ಲಾಘನೀಯ ಮತ್ತು ಹೆಚ್ಚು ಅಗತ್ಯವಿದೆ ಎಂದು ಹೇಳಿದ್ದಾರೆ.

ಆದರೆ ಅವರ ಪ್ರಕಾರ, ಬಜೆಟ್ ಅನುಬಂಧವು ಈ ಯೋಜನೆಗಳ ಸಂಕೀರ್ಣ ವಿವರಗಳನ್ನು ಹೊಂದಿದೆ, ಇದು ಉದ್ಯೋಗಗಳನ್ನು ಸೃಷ್ಟಿಸುವ ಬದಲು ಕಾರ್ಪೊರೇಟ್ ಜಗತ್ತನ್ನು ಭೀತಿಪಡಿಸುತ್ತಿದೆ ಎಂದಿದ್ದಾರೆ.

ನಮ್ಮ ಅಂಕಣ ತಜ್ಞ ಅನಿಲ್ ಕೆ ಸೂದ್ ಕೂಡ ಈ ಯೋಜನೆ ಮನಮುಟ್ಟಿಲ್ಲ ಎಂದು ತಮ್ಮ ಅಂಕಣದಲ್ಲಿ ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಅವರ ಪ್ರಶ್ನೆಗಳೆಂದರೆ:

ಉದ್ಯೋಗ ಸಂಬಂಧಿತ ಯೋಜನೆಗಳು: ಉದ್ಯೋಗದ ಮಟ್ಟವನ್ನು ಅಥವಾ ಉದ್ಯೋಗದ ಗುಣಮಟ್ಟದ ಸಮಸ್ಯೆಯನ್ನು ಪರಿಹರಿಸುತ್ತಿವೆಯೇ ಅಥವಾ ಇಲ್ಲವೇ?

ಬಜೆಟ್ ದಾಖಲೆಯಲ್ಲಿ ಒದಗಿಸಲಾದ ವಿವರಣೆಯನ್ನು ಆಧರಿಸಿ, ಯೋಜನೆಗಳು ಉದ್ಯೋಗ ಸಮಸ್ಯೆಯನ್ನು ಪರಿಹರಿಸುತ್ತವೆ ಎಂದು ನಂಬುವುದು ಕಷ್ಟ. ಉದಾಹರಣೆಗೆ, 12 ತಿಂಗಳ ಕಾಲ ತನ್ನ ಕೆಲಸವನ್ನು ಉಳಿಸಿಕೊಂಡು ಕಡ್ಡಾಯ ಆನ್‌ಲೈನ್ ಆರ್ಥಿಕ ಸಾಕ್ಷರತಾ ಕೋರ್ಸ್‌ಗೆ ಒಳಪಡುವ ಉದ್ಯೋಗಿಗೆ ಸ್ಕೀಮ್ ಎ ಮೂರು ಕಂತುಗಳಲ್ಲಿ 15,000 ರೂಪಾಯಿಗಳನ್ನು ವಾರ್ಷಿಕವಾಗಿ ನೀಡುತ್ತದೆ.

ಈಗಷ್ಟೇ ಉದ್ಯೋಗ ಪಡೆದಿರುವ ವ್ಯಕ್ತಿಗೆ ನಾವು ಆರ್ಥಿಕ ಬೆಂಬಲವನ್ನು ಏಕೆ ಒದಗಿಸಬೇಕು ಮತ್ತು ಮೂಲಭೂತ ಶಿಕ್ಷಣದ ಮಟ್ಟಕ್ಕಿಂತ ಹೆಚ್ಚಿನದನ್ನು ಹೊಂದಿರದ ಜನರಿಗೆ ನಾವು ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಏಕೆ ಒತ್ತಾಯಿಸುತ್ತೇವೆ ಎಂಬ ಪ್ರಶ್ನೆ ಉದ್ಭವಿಸಿದೆ.

ಇನ್ನೊಂದು ಪ್ರಶ್ನೆ: ವರ್ಷಪೂರ್ತಿ ಆದಾಯ ನೀಡಲು ನೌಕರನು ಒಂದು ವರ್ಷಕ್ಕೆ ಯಾವ ವ್ಯಾಪಾರ ಅಥವಾ ವೃತ್ತಿಯನ್ನು ಹೊಂದುತ್ತಾನೆ, ಒಂದು ವೇಳೆ ಹಾಗಾದರೆ, ನಾವು ಸಾಮರ್ಥ್ಯ ನಿರ್ಮಾಣವನ್ನು ವೇಗಗೊಳಿಸಲು ಹೂಡಿಕೆ ಮಾಡಬಾರದೇ ಮತ್ತು ಆರ್ಥಿಕ ಸಾಕ್ಷರತೆಯನ್ನು ಸುಧಾರಿಸಲು ಹಣ ವ್ಯಯಿಸಬಾರದೇ?

ಅಲ್ಲದೆ, ತಿಂಗಳಿಗೆ ಒಂದು ಲಕ್ಷದ ಗರಿಷ್ಠ ಮಿತಿಯನ್ನು ನಿಗದಿಪಡಿಸುವ ತಾರ್ಕಿಕತೆ ಏನು?

ವರ್ಷಕ್ಕೆ ಒಂದು ಕೋಟಿ ಜನರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ಬಜೆಟ್ ನಲ್ಲಿ ಹೇಳಲಾಗಿದೆ.ಆದರೆ ನಮಗೆ ವರ್ಷಕ್ಕೆ 80 ಲಕ್ಷ ಉದ್ಯೋಗಗಳು ಮಾತ್ರ ಬೇಕು ಎಂದು ಸಮೀಕ್ಷೆಯು ಉಲ್ಲೇಖಿಸಿದಾಗ ಹೆಚ್ಚಿನ ಉದ್ಯೋಗ ಸೃಷ್ಟಿ ಹೇಗೆ ಆಗುತ್ತದೆ?

ಎಲ್ಲಾ ಯೋಜನೆಗಳು ಸಬ್ಸಿಡಿ ಅಥವಾ ಅರ್ಹತೆಗಾಗಿ ಮಿತಿಗಳನ್ನು ಹಿಂತೆಗೆದುಕೊಳ್ಳುವ ನಿಬಂಧನೆಗಳನ್ನು ಹೊಂದಿರುವುದರಿಂದ ನಾವು ಆಡಳಿತಾತ್ಮಕ ಸಮಸ್ಯೆ ಅಥವಾ ಉದ್ಯೋಗ ಕಸಿದುಕೊಂಡಂತೆ ಆಗುತ್ತದೆಯೇ?

ಇಪಿಎಫ್ ದಾಖಲಾತಿಯನ್ನು ಕಡಿಮೆ ಆದಾಯದ ಉದ್ಯೋಗಿಗಳಿಗೆ ಏಕೆ ಮಾಡಬೇಕಾಗಿದೆ? ಈ ಕುಟುಂಬಗಳು ಆರೋಗ್ಯ ರಕ್ಷಣೆಯನ್ನು ಪಡೆಯಲು ಇಎಸ್‌ಐ ದಾಖಲಾತಿ ಮಾತ್ರ ಹೊಂದಿದ್ದರೆ ಸಾಲದೇ?

ಉದ್ಯೋಗದಾತರು ವರ್ಷಕ್ಕೆ 3,000 ದಿಂದ 36,000 ರೂಪಾಯಿವರೆಗಿನ ಸಬ್ಸಿಡಿಗಳಿಗಾಗಿ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸುವ ಸಾಧ್ಯತೆ ಎಷ್ಟು?

ಇವೆಲ್ಲವೂ ತುಂಬಾ ಮೌಲ್ಯವಾದ ಪ್ರಶ್ನೆಗಳಾಗಿದ್ದು ಹಣಕಾಸು ಸಚಿವೆ ಇದಕ್ಕೆ ಉತ್ತರಿಸಬಲ್ಲರೇ? ಎಂದು ಕೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

SCROLL FOR NEXT