ಕನ್ವರ್ ಯಾತ್ರೆ 
ದೇಶ

ಕನ್ವರ್ ಮಾರ್ಗದಲ್ಲಿ ಮಸೀದಿ ಮತ್ತು ಮಝಾರ್ ಕಾಣದಂತೆ ಪರದೆ ಅವಳವಡಿಕೆ: ಭುಗಿಲೆದ್ದ ಆಕ್ರೋಶ!

ಉತ್ತರಾಖಂಡದ ಹರಿದ್ವಾರ ನಗರದ ಕನ್ವರ್ ಯಾತ್ರಾ ಮಾರ್ಗದಲ್ಲಿರುವ ಎರಡು ಮಸೀದಿಗಳು ಮತ್ತು ಮಝಾರ್ ಕಾಣದಂತೆ ಮಾಡಲು ಬಿಳಿ ಬಟ್ಟೆಯ ದೊಡ್ಡ ಪರದೆಯಿಂದ ಮುಚ್ಚಲಾಗಿತ್ತು. ಆದರೆ ವಿವಿಧ ಪಕ್ಷಗಳ ಆಕ್ಷೇಪಣೆಯ ನಂತರ ಅವುಗಳನ್ನು ಸಂಜೆ ತೆಗೆದುಹಾಕಲಾಯಿತು.

ಉತ್ತರಾಖಂಡದ ಹರಿದ್ವಾರ ನಗರದ ಕನ್ವರ್ ಯಾತ್ರಾ ಮಾರ್ಗದಲ್ಲಿರುವ ಎರಡು ಮಸೀದಿಗಳು ಮತ್ತು ಮಝಾರ್ ಕಾಣದಂತೆ ಮಾಡಲು ಬಿಳಿ ಬಟ್ಟೆಯ ದೊಡ್ಡ ಪರದೆಯಿಂದ ಮುಚ್ಚಲಾಗಿತ್ತು. ಆದರೆ ವಿವಿಧ ಪಕ್ಷಗಳ ಆಕ್ಷೇಪಣೆಯ ನಂತರ ಅವುಗಳನ್ನು ಸಂಜೆ ತೆಗೆದುಹಾಕಲಾಯಿತು.

ಜ್ವಾಲಾಪುರ ಪ್ರದೇಶದಲ್ಲಿರುವ ಎರಡು ಮಸೀದಿಗಳು ಮತ್ತು ಮಝಾರ್ ಮುಂದೆ ಬಿದಿರಿನ ಸ್ಕ್ಯಾಫೋಲ್ಡಿಂಗ್‌ನಲ್ಲಿ ಪರದೆಗಳನ್ನು ನೇತುಹಾಕಲಾಗಿದೆ. ಈ ಬಗ್ಗೆ ಮಸೀದಿಯ ಮೌಲಾನಾ ಈ ಬಗ್ಗೆ ಯಾವುದೇ ಆಡಳಿತಾತ್ಮಕ ಆದೇಶದ ಬಗ್ಗೆ ನಮಗೆ ತಿಳಿದಿಲ್ಲ ಎಂದು ಹೇಳಿದರು ಮತ್ತು ಯಾತ್ರೆಯ ಸಮಯದಲ್ಲಿ ಇದನ್ನು ಮೊದಲ ಬಾರಿಗೆ ಮಾಡಲಾಗಿದೆ ಎಂದು ಹೇಳಿದರು.

ಹರಿದ್ವಾರದ ಹಿರಿಯ ಪೊಲೀಸ್ ಅಧೀಕ್ಷಕರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರತಿಕ್ರಿಯೆಗೆ ಲಭ್ಯವಿಲ್ಲದಿದ್ದರೂ, ಕ್ಯಾಬಿನೆಟ್ ಸಚಿವ ಸತ್ಪಾಲ್ ಮಹಾರಾಜ್ ಅವರು ಶಾಂತಿಯನ್ನು ಕಾಪಾಡಲು ಇದನ್ನು ಮಾಡಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಇದು ಅಂತಹ ದೊಡ್ಡ ವಿಷಯವಲ್ಲ. ನಾವು ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಸಹ ಮುಚ್ಚಿದ್ದೇವೆ ಎಂದರು.

ಸ್ಥಳೀಯರು ಮತ್ತು ರಾಜಕಾರಣಿಗಳ ಆಕ್ಷೇಪದ ಮೇರೆಗೆ ಜಿಲ್ಲಾಡಳಿತ ಸಂಜೆ ವೇಳೆಗೆ ಪರದೆಗಳನ್ನು ತೆಗೆದುಹಾಕಿತು. ಯಾತ್ರೆಯ ನಿರ್ವಹಣೆಗಾಗಿ ಆಡಳಿತದಿಂದ ವಿಶೇಷ ಪೊಲೀಸ್ ಅಧಿಕಾರಿ (ಎಸ್‌ಪಿಒ) ನೇಮಕಗೊಂಡ ಡ್ಯಾನಿಶ್ ಅಲಿ, "ನಮಗೆ ರೈಲ್ವೆ ಪೊಲೀಸ್ ಪೋಸ್ಟ್‌ನಿಂದ ಪರದೆಗಳನ್ನು ತೆಗೆದುಹಾಕಲು ಆದೇಶ ಬಂದಿತ್ತು. ಆದ್ದರಿಂದ ನಾವು ಅವುಗಳನ್ನು ತೆಗೆದುಹಾಕಲು ಬಂದಿದ್ದೇವೆ ಎಂದು ಹೇಳಿದರು. ನಾನು ನನ್ನ ಜೀವನದಲ್ಲಿ ಇಂತಹದ್ದನ್ನು ನೋಡಿಲ್ಲ ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ನಯೀಮ್ ಖುರೇಷಿ ಹೇಳಿದ್ದಾರೆ.

ನಾವು ಮುಸ್ಲಿಮರು ಯಾವಾಗಲೂ ಕನ್ವರ್ ಮೇಳಕ್ಕೆ ಶಿವಭಕ್ತರನ್ನು ಸ್ವಾಗತಿಸುತ್ತೇವೆ ಮತ್ತು ಅವರಿಗೆ ವಿವಿಧ ಸ್ಥಳಗಳಲ್ಲಿ ಉಪಹಾರಗಳನ್ನು ಏರ್ಪಡಿಸುತ್ತೇವೆ ಮತ್ತು ಇದು ಹರಿದ್ವಾರದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಸಾಮರಸ್ಯದ ಉದಾಹರಣೆಯಾಗಿದೆ. ಇಲ್ಲಿ ಪರದೆಗಳನ್ನು ಹಾಕುವ ಸಂಪ್ರದಾಯ ಇರಲಿಲ್ಲ. ಕನ್ವರ್ ಮೇಳ ಆರಂಭಕ್ಕೂ ಮುನ್ನ ಆಡಳಿತ ಸಭೆ ನಡೆಸಿ ಹಿಂದೂ ಮತ್ತು ಮುಸ್ಲಿಂ ಸಮುದಾಯದವರನ್ನು ಎಸ್‌ಪಿಒಗಳನ್ನಾಗಿ ಮಾಡಲಾಗಿದೆ ಎಂದು ಖುರೇಷಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮರಳು ಮಾಫಿಯಾ ವಿರುದ್ಧ ಸಿಡಿದೆದ್ದ ಸಿಎಂ ಸಲಹೆಗಾರ: ದಂಧೆಕೋರರಿಗೆ ಅಧಿಕಾರಿಗಳೇ ಸಾಥ್, ಕ್ರಮಕ್ಕೆ ಬಸವರಾಜ ರಾಯರೆಡ್ಡಿ ಆಗ್ರಹ

ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ 10ಕ್ಕೂ ಹೆಚ್ಚು ಮಹಿಳೆಯರು ಅಸ್ವಸ್ಥ; ಪುತ್ತೂರಿನಲ್ಲಿ ಆಗಿದ್ದೇನು?

'ಶೋಲೆ' ಖ್ಯಾತಿಯ ಬಾಲಿವುಡ್ ನಟ ಗೋವರ್ಧನ್ ಅಸ್ರಾನಿ ವಿಧಿವಶ

Israel ಸೈನಿಕರ ಹತ್ಯೆಯ ನಂತರ ಮುರಿದುಬಿದ್ದ ಕದನ ವಿರಾಮ: ಗಾಜಾದ ಮೇಲೆ ಇಸ್ರೇಲ್ ವಾಯುದಾಳಿಯಲ್ಲಿ 45 ಮಂದಿ ಸಾವು!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಗೆಲುವಿನ ಸಂಭ್ರಮದ ಬಳಿಕ ಹೃದಯಾಘಾತವಾಗಿ ಮಾಜಿ ಅಧ್ಯಕ್ಷ ಸಾವು

SCROLL FOR NEXT