ಶಿವಸೇನಾ ಸಂಸದ ಸಂಜಯ್ ರೌತ್ online desk
ದೇಶ

NITI ಆಯೋಗ ಸಭೆಯಲ್ಲಿ ಬಂಗಾಳ ಸಿಎಂಗೆ ಅವಮಾನ ಪ್ರಜಾಸತ್ತಾತ್ಮಕ ನಿಯಮಕ್ಕೆ ವಿರುದ್ಧ: ಸಂಜಯ್ ರೌತ್

"ಕೇಂದ್ರವು ವಿತರಿಸುವ ಹಣವು ಭಾರತದ ಜನರಿಗೆ ಸೇರಿದೆ. ಅದನ್ನು ವಿವಿಧ ತೆರಿಗೆಗಳಾಗಿ ಸಂಗ್ರಹಿಸಲಾಗುತ್ತದೆ. ಮಹಾರಾಷ್ಟ್ರಕ್ಕೆ ಏನು ಸಿಕ್ಕಿತು.. ನಮ್ಮ ಮುಖ್ಯಮಂತ್ರಿ ಬರಿಗೈಯಲ್ಲಿ ಹಿಂತಿರುಗಿದರು"-ಸಂಜಯ್ ರೌತ್

ನವದೆಹಲಿ: NITI ಆಯೋಗದ ಸಭೆಯಲ್ಲಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಅವಮಾನ ಮಾಡಿರುವುದು ಪ್ರಜಾಸತ್ತಾತ್ಮಕ ನಿಯಮಗಳಿಗೆ ಸರಿಹೊಂದುವುದಿಲ್ಲ ಎಂದು ಶಿವಸೇನೆ ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರೌತ್ ಹೇಳಿದ್ದಾರೆ.

ರಾಜ್ಯಗಳಿಗೆ ಹಲವು ಸಮಸ್ಯೆಗಳಿರುತ್ತವೆ ಅವುಗಳನ್ನು ಬಗೆಹರಿಸಬೇಕಾಗುತ್ತದೆ. ಆದರೆ ಸಭೆಯಲ್ಲಿ ಸಿಎಂ ಒಬ್ಬರ ಮೈಕ್ರೋಫೋನ್ ನ್ನು ಮ್ಯೂಟ್ ಮಾಡುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಒಳಿತಲ್ಲ ಎಂದು ರೌತ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NITI ಆಯೋಗದ ಸಭೆಯಿಂದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೊರ ನಡೆದಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಉಳಿದ ಸಿಎಂ ಗಳಿಗೆ ತಮ್ಮ ರಾಜ್ಯಗಳ ಬಗ್ಗೆ ಮಾತನಾಡುವುದಕ್ಕೆ ಹೆಚ್ಚಿನ ಸಮಯ ಅವಕಾಶ ನೀಡಲಾಗಿತ್ತು. ಆದರೆ ನಾನು ಮಾತನಾಡಲು ಕೇವಲ 5 ನಿಮಿಷ ನೀಡಲಾಯಿತು. 5 ನಿಮಿಷದ ನಂತರ ನನ್ನ ಬಳಿ ಇದ್ದ ಮೈಕ್ರೋಫೋನ್ ನ್ನು ಮ್ಯೂಟ್ ಮಾಡಲಾಯಿತು ಈ ಹಿನ್ನೆಲೆಯಲ್ಲಿ ನಾನು ಸಭೆಯಿಂದ ಹೊರನಡೆದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

"ಕೇಂದ್ರವು ವಿತರಿಸುವ ಹಣವು ಭಾರತದ ಜನರಿಗೆ ಸೇರಿದೆ. ಅದನ್ನು ವಿವಿಧ ತೆರಿಗೆಗಳಾಗಿ ಸಂಗ್ರಹಿಸಲಾಗುತ್ತದೆ. ಮಹಾರಾಷ್ಟ್ರಕ್ಕೆ ಏನು ಸಿಕ್ಕಿತು.. ನಮ್ಮ ಮುಖ್ಯಮಂತ್ರಿ ಬರಿಗೈಯಲ್ಲಿ ಹಿಂತಿರುಗಿದರು" ಎಂದು ಏಕನಾಥ್ ಶಿಂಧೆ ನೇತೃತ್ವದ ಆಡಳಿತಾರೂಢ ಮೈತ್ರಿಕೂಟದ ವಿರುದ್ಧ ರಾವತ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಂದಿಕೊಳ್ಳಲು ಸಾಧ್ಯವಿಲ್ಲ ಎಂದು ಯಾರು ಹೇಳಿದ್ದು?': ಅಮೆರಿಕ ವ್ಯಾಪಾರ ಒಪ್ಪಂದದ ಅನಿಶ್ಚಿತತೆ ನಡುವೆಯೇ ಹೊಸ ಮಾರುಕಟ್ಟೆಗಳತ್ತ ಭಾರತ ಕಣ್ಣು!

ಯುವನಿಧಿಗೆ ನಿರುದ್ಯೋಗಿ ವಿದ್ಯಾರ್ಥಿಗಳ ನೋಂದಣಿ ನೋಡ್ತಿದ್ದರೆ ಆತಂಕಕಾರಿ, ಶಿಕ್ಷಣದಲ್ಲಿ ಬದಲಾವಣೆ ಅಗತ್ಯ: ವಿಟಿಯು ಉಪಕುಲಪತಿ

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ವಿಡಿಯೋ ಹರಿಬಿಟ್ಟ ಆರೋಪಿಗಳು: ಹುಬ್ಬಳ್ಳಿ ಪೊಲೀಸರಿಂದ ಮೂವರ ಬಂಧನ!

ದಾವಣಗೆರೆ: ಮಕ್ಕಳ ಹಾದಿ ಹಿಡಿದ ಬಿಜೆಪಿ ಮುಖಂಡ; ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ: ಬೆಂಗಳೂರು ಮೂಲದ ಮೇಜರ್ Swathi ShanthaKumarಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ!

SCROLL FOR NEXT