ಮೊಹಮ್ಮದ್ ರಿಯಾಸ್ 
ದೇಶ

ಶಿರೂರು ಭೂ ಕುಸಿತ: ಕಾಣೆಯಾದವರ ಪತ್ತೆಗೆ ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಹುಡುಕಿ- ಕೇರಳ ಸಚಿವ ಒತ್ತಾಯ

'ಯಾರನ್ನೂ ದೂಷಿಸಲು ಅಥವಾ ಅನಗತ್ಯ ವಿವಾದದಲ್ಲಿ ತೊಡಗಲು ಬಯಸುವುದಿಲ್ಲ. ನಮ್ಮನ್ನು ಸಂಪರ್ಕಿಸದೆ ಶೋಧ ಕಾರ್ಯ ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಕೇರಳ ಸರ್ಕಾರ ಸಾಂವಿಧಾನಿಕವಾಗಿ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದೆ'

ಕೋಝಿಕೋಡ್: ಉತ್ತರ ಕನ್ನಡದ ಶಿರೂರು ಭೂಕುಸಿತದಿಂದ ನಾಪತ್ತೆಯಾಗಿರುವ ಲಾರಿ ಚಾಲಕ ಅರ್ಜುನ್ ಅವರ ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಕೇರಳ ಪ್ರವಾಸೋದ್ಯಮ ಸಚಿವ ಪಿ ಎ ಮೊಹಮ್ಮದ್ ರಿಯಾಸ್ ನಿರಾಶೆ ವ್ಯಕ್ತಪಡಿಸಿದ್ದಾರೆ ಮತ್ತು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಶೋಧ ಕಾರ್ಯಾಚರಣೆಗೆ ಅಡ್ಡಿಯಾಗುವ ಮಿತಿಗಳನ್ನು ಮರು ಪರಿಶೀಲಿಸುವಂತೆ ಅವರು ಒತ್ತಾಯಿಸಿದ್ದಾರೆ.

ಕರ್ನಾಟಕ ಸರ್ಕಾರ ತನ್ನ ನಿಲುವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ ರಿಯಾಸ್, ನೌಕಾ ನೆಲೆಯಿಂದ ಅತ್ಯುತ್ತಮ ಮುಳುಗು ತಜ್ಞರನ್ನು ನಿಯೋಜಿಸುವ ಅಗತ್ಯವನ್ನು ಒತ್ತಿ ಹೇಳಿದರು. ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ಇನ್ನೂ ಹಲವು ಸಾಧ್ಯತೆಗಳಿವೆ. ಎಲ್ಲರೂ ಚರ್ಚಿಸಿದ ನಿರ್ಣಯವನ್ನು ಜಾರಿಗೊಳಿಸಬೇಕು' ಎಂದು ಅವರು ಆಗ್ರಹಿಸಿದರು.

ಯಾರನ್ನೂ ದೂಷಿಸಲು ಅಥವಾ ಅನಗತ್ಯ ವಿವಾದದಲ್ಲಿ ತೊಡಗಲು ಬಯಸುವುದಿಲ್ಲ. ನಮ್ಮನ್ನು ಸಂಪರ್ಕಿಸದೆ ಶೋಧ ಕಾರ್ಯ ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಕೇರಳ ಸರ್ಕಾರ ಸಾಂವಿಧಾನಿಕವಾಗಿ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದೆ. ಬೇರೆ ರಾಜ್ಯವಾದ್ದರಿಂದ ನಮ್ಮ ಮಂತ್ರಿಗಳು ಅಲ್ಲಿ ಬೀಡು ಬಿಡುವಂತಿಲ್ಲ, ಆದರೆ ನಾವು ಅಲ್ಲಿಗೆ ಹೋಗಿದ್ದೆವು. ಒಬ್ಬ ನಾಗರಿಕನಾಗಿ ಪ್ರತಿಕ್ರಿಯಿಸುತ್ತಿದ್ದೇನೆ, ಸಚಿವನಾಗಿ ಅಲ್ಲ ಎಂದು ಅವರು ಹೇಳಿದರು.

ಮಂಜೇಶ್ವರಂ ಶಾಸಕ ಎಂ ಕೆ ಎಂ ಅಶ್ರಫ್ ಮಾತನಾಡಿ, ಪ್ಲಾನ್ ಬಿ ಪರಿಗಣಿಸಲು ಉಭಯ ಮುಖ್ಯಮಂತ್ರಿಗಳ ನಡುವೆ ಚರ್ಚೆಗೆ ಕರೆ ನೀಡಿದರು. "ಇಲ್ಲಿಯವರೆಗೆ ಗಂಗಾವಳಿ ನದಿಯಲ್ಲಿ ಹುಡುಕಾಟದಿಂದ ಪ್ರಯೋಜನವಾಗಿಲ್ಲ ಎಂದರು.

ಈ ಮಧ್ಯೆ ಅರ್ಜುನ್ ಅವರ ತಾಯಿ ಶೀಲಾ ಅವರು ರಕ್ಷಣಾ ಕಾರ್ಯವನ್ನು ಮುಂದುವರೆಸುವಂತೆ ಮನವಿ ಮಾಡಿದರು.

ದಯವಿಟ್ಟು ರಕ್ಷಣಾ ಚಟುವಟಿಕೆಯನ್ನು ನಿಲ್ಲಿಸಬೇಡಿ, ಇನ್ನೂ ನಮ್ಮ ಮಗನನ್ನು ಹುಡುಕುವ ಭರವಸೆ ಇದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಶಿರೂರಿನಲ್ಲಿರುವ ತಂಡದಿಂದ ನಮಗೆ ತೃಪ್ತಿ ಇದೆ. ಆದರೆ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಸುದ್ದಿ ನಮ್ಮ ಉತ್ಸಾಹವನ್ನು ಕುಗ್ಗಿಸಿದೆ. ಎರಡೂ ಸರ್ಕಾರಗಳು ಮತ್ತು ಎಲ್ಲಾರ ಪ್ರಯತ್ನಗಳು ಅರ್ಜುನ್‌ನ ಚೇತರಿಕೆಗೆ ಕಾರಣವಾಗುತ್ತವೆ ಎಂದು ಕುಟುಂಬ ಆಶಾದಾಯಕವಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT