ಆಂಧ್ರಪ್ರದೇಶದ ರಾಜಕೀಯ ಪಕ್ಷಗಳು (ಸಂಗ್ರಹ ಚಿತ್ರ) online desk
ದೇಶ

ವಿಧಾನಸಭಾ ಚುನಾವಣೆ Exit polls: ಆಂಧ್ರದಲ್ಲಿ NDA ಗೆ ಬಹುಮತ; ಒಡಿಶಾದಲ್ಲಿ ಬಿಜೆಪಿ-ಬಿಜೆಡಿ ನಡುವೆ ತೀವ್ರ ಜಿದ್ದಾಜಿದ್ದಿ!

ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡ ನಂತರ ಹಲವು ರಾಜ್ಯಗಳಿಗೆ ನಡೆದಿದ್ದ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆಗಳು ಇಂದು ಪ್ರಕಟವಾಗಿವೆ.

ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡ ನಂತರ ಹಲವು ರಾಜ್ಯಗಳಿಗೆ ನಡೆದಿದ್ದ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ.

ಆಂಧ್ರಪ್ರದೇಶ, ಒಡಿಶಾಗಳ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗಗೊಂಡಿದ್ದು, ಆಂಧ್ರಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಅಧಿಕಾರಕ್ಕೆ ಬರಲಿದೆ.

Axis My India ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಆಂಧ್ರದಲ್ಲಿ ಎನ್ ಡಿಎ ಗೆ 98-120 ಸ್ಥಾನಗಳು ಸಿಕ್ಕಿದರೆ, ಆಡಳಿತಾರೂಢ ವೈಎಸ್ ಆರ್ ಸಿಪಿ 55-77 ಸ್ಥಾನಗಳಿಗೆ ಕುಸಿಯಲಿದೆ. 98-120 ಸ್ಥಾನಗಳ ಪೈಕಿ ಟಿಡಿಪಿಗೆ 78-96 ಸ್ಥಾನಗಳು ಸಿಗುವ ಸಾಧ್ಯತೆಗಳಿದ್ದು ಜೆಎಸ್ ಪಿ 16-18 ಸ್ಥಾನಗಳು ಬಿಜೆಪಿ 4-6 ಸ್ಥಾನಗಳನ್ನು ಗೆಲ್ಲಲಿವೆ ಎಂದು ಸಮೀಕ್ಷೆಗಳು ತಿಳಿಸಿವೆ.

ಪೀಪಲ್ಸ್ ಪಲ್ಸ್ ಸಮೀಕ್ಷೆಯ ಪ್ರಕಾರ ಟಿಡಿಪಿ 95-110 ಸ್ಥಾನಗಳಲ್ಲಿ ಗೆಲ್ಲಲಿದ್ದರೆ, ಜನಸೇನಾ 14-20 ಬಿಜೆಪಿ 2-5 ಸ್ಥಾನಗಳಲ್ಲಿ ಗೆಲ್ಲಲಿದೆ ಆಡಳಿತಾರೂಢ ವೈಎಸ್ ಆರ್ ಪಿ 45-60 ಸ್ಥಾನಗಳಲ್ಲಿ ಗೆಲ್ಲಲಿದೆ. ಕೆಲವು ಸಮೀಕ್ಷೆಗಳು ಆಡಳಿತಾರೂಢ ಪಕ್ಷ ವೈಎಸ್ ಆರ್ ಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ. ಸೆಂಟರ್ ಫಾರ್ ಪೊಲಿಟಿಕ್ಸ್- ಪಾಲಿಸಿ ಸ್ಟಡೀಸ್ ಎಂಬ ಸಮೀಕ್ಷೆಯಲ್ಲಿ ವೈಎಸ್‌ಆರ್‌ಸಿಪಿಗೆ 95-105 ಸ್ಥಾನಗಳು ಸಿಗಲಿದ್ದು, ಟಿಡಿಪಿ-ಬಿಜೆಪಿ-ಜನಸೇನಾ ಮೈತ್ರಿಕೂಟಕ್ಕೆ 75-85 ಸ್ಥಾನಗಳು ಸಿಗಲಿದೆ ಎಂದು ತಿಳಿದುಬಂದಿದೆ.

ಆರಾ ಪೋಲ್ ಸ್ಟ್ರಾಟಜೀಸ್ ಪ್ರೈವೇಟ್ ಲಿಮಿಟೆಡ್ ವೈಎಸ್‌ಆರ್‌ಸಿಪಿ 94-104 ಸ್ಥಾನಗಳೊಂದಿಗೆ ಎರಡನೇ ಅವಧಿಗೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದೆ. ವಿರೋಧ ಪಕ್ಷದ ಮೈತ್ರಿಕೂಟಕ್ಕೆ 71-81 ವಿಧಾನಸಭಾ ಸ್ಥಾನಗಳನ್ನು ಈ ಸಮೀಕ್ಷೆ ಅಂದಾಜಿಸಿದೆ.

ಒಡಿಶಾದಲ್ಲಿ ಎನ್ ಡಿಎ ಮ್ಯಾಜಿಕ್!

ಒಡಿಶಾದಲ್ಲಿ Axis My India ಚುನಾವಣೋತ್ತರ ಸಮೀಕ್ಷೆ ಬಿಜೆಪಿಗೆ 62-80 ಸ್ಥಾನಗಳನ್ನು ನೀಡಿದ್ದರೆ, ಬಿಜೆಡಿಯೂ 62-80 ಸ್ಥಾನಗಳಿಗೆ ಕುಸಿಯಲಿದೆ ಎಂದು ಭವಿಷ್ಯ ನುಡಿದಿದೆ. 2019 ರಲ್ಲಿ 113 ಸ್ಥಾನಗಳಲ್ಲಿ ಬಿಜೆಡಿ ಗೆಲುವು ಸಾಧಿಸಿತ್ತು.

Axis My India ಹೊರತುಪಡಿಸಿದರೆ, ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಬಿಜೆಡಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ಲೇಷಿಸಿವೆ.

ಒಡಿಶಾದ ಎಲ್ಲಾ ಪ್ರಾದೇಶಿಕ ಚಾನೆಲ್‌ಗಳಲ್ಲಿ ಬಿಡುಗಡೆಯಾದ ಜನ್ ಕಿ ಬಾತ್ ನಿರ್ಗಮನ ಸಮೀಕ್ಷೆಯ ಪ್ರಕಾರ, ಬಿಜೆಪಿ 58 ಸ್ಥಾನಗಳನ್ನು (± 14), BJD 81 ಸ್ಥಾನಗಳನ್ನು (± 12) ಗಳಿಸುವ ನಿರೀಕ್ಷೆಯಿದೆ ಮತ್ತು INC 8 (± 2). ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.

ಪ್ರಗತಿವಾದಿಯ ಚುನಾವಣೋತ್ತರ ಸಮೀಕ್ಷೆಯ ವಿಶ್ಲೇಷಣೆಯ ಪ್ರಕಾರ, ಬಿಜೆಪಿ 41 ಸ್ಥಾನಗಳನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ, ಆದರೆ ಬಿಜೆಡಿ 94 ಸ್ಥಾನಗಳೊಂದಿಗೆ ಗಮನಾರ್ಹ ಮುನ್ನಡೆ ಸಾಧಿಸುವ ನಿರೀಕ್ಷೆಯಿದೆ. ಏತನ್ಮಧ್ಯೆ, INDIA ಮೈತ್ರಿಕೂಟ 12 ಸ್ಥಾನಗಳನ್ನು ಗೆಲ್ಲುವ ಮುನ್ಸೂಚನೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT