ಜಾರ್ಖಂಡ್: ಜಾರ್ಖಂಡ್ ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಸಹೋದ್ಯೋಗಿಯಿಂದಲೇ ಹತ್ಯೆಗೀಡಾಗಿದ್ದಾರೆ.
ಲೋಹರ್ಡಗಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸಹಾಯಕ ಸಬ್ ಇನ್ಸ್‌ಪೆಕ್ಟರ್ ಧರ್ಮೇಂದ್ರ ಸಿಂಗ್ ಎಂಬುವವರನ್ನು ಕಾನ್ಸ್ಟೆಬಲ್ ಅನಂತ್ ಸಿಂಗ್ ಮುಂಡಾ ಐಎನ್ಎಸ್ಎಎಸ್ ರೈಫಲ್ ನಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಸಣ್ಣ ವಿಷಯವೊಂದರಲ್ಲಿ ವಾಗ್ವಾದ ನಡೆದು ಕೊಲೆಯಲ್ಲಿ ಅದು ಅಂತ್ಯವಾಗಿದೆ. ಘಟನೆಯ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹಾರಿಸ್ ಬಿನ್ ಜಮಾನ್ ತಿಳಿಸಿದ್ದಾರೆ.
ಸಂತ್ರಸ್ತ ಮತ್ತು ಆರೋಪಿ ಇಬ್ಬರೂ ಇನ್ನಿಬ್ಬರು ವ್ಯಕ್ತಿಗಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.