ರಕ್ಷಾ ಖಡ್ಸೆ 
ದೇಶ

ಪಂಚಾಯಿತಿ ಟು ಕೇಂದ್ರ ಸಚಿವ ಸ್ಥಾನದವರೆಗೆ - ‘ಸಿಂಗಲ್ ಮದರ್’ ರಕ್ಷಾ ಖಡ್ಸೆ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ

ಮಹಾರಾಷ್ಟ್ರದ ರೇವರ್ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಬಿಜೆಪಿ ಸಂಸದರಾಗಿ ಆಯ್ಕೆಯಾಗಿರುವ ರಕ್ಷಾ ಖಡ್ಸೆ ಅವರು ನರೇಂದ್ರ ಮೋದಿ ಸರ್ಕಾರದಲ್ಲಿ ರಾಜ್ಯ ಸಚಿವೆ.

ಮುಂಬೈ: ಮಹಾರಾಷ್ಟ್ರದ ರೇವರ್ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಬಿಜೆಪಿ ಸಂಸದರಾಗಿ ಆಯ್ಕೆಯಾಗಿರುವ ರಕ್ಷಾ ಖಡ್ಸೆ ಅವರು ನರೇಂದ್ರ ಮೋದಿ ಸರ್ಕಾರದಲ್ಲಿ ರಾಜ್ಯ ಸಚಿವರಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಕ್ಷಾ ಖಡ್ಸೆಯವರು ರಾಜಕೀಯದಲ್ಲಿ ಹಂತ ಹಂತವಾಗಿ ಮೇಲೆ ಬಂದಿದ್ದು, ಅವರ ವೈಯಕ್ತಿಕ ಶಕ್ತಿ ಮತ್ತು ಸಾಮರ್ಥ್ಯದಿಂದ ಗುರುತಿಸಿಕೊಂಡಿದ್ದಾರೆ. ಅವರ ಸಾಧನೆ ಇತರರಿಗೆ ಸ್ಪೂರ್ತಿದಾಯಕವಾಗಿದೆ.

ಶರದ್ ಪವಾರ್ ಬಣದ ಎನ್‌ಸಿಪಿ ನಾಯಕ ಏಕನಾಥ್ ಖಡ್ಸೆ ಅವರ ಸೊಸೆಯಾಗಿರುವ ರಕ್ಷಾ ಅವರು 2013 ರಲ್ಲಿ ತಮ್ಮ ಪತಿ ನಿಖಿಲ್ ಖಡ್ಸೆಯನ್ನು ಕಳೆದುಕೊಂಡು. ನಂತರ, ಅವರು ಕೊಥಾಡಿ ಗ್ರಾಮದ ಪಂಚಾಯ್ತಿ ಸದಸ್ಯರಾಗುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದರು. ಬಳಿಕ ಜಲಗಾಂವ್ ಜಿಲ್ಲಾ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದರು.

ಸ್ಥಳೀಯ ರಾಜಕೀಯದಲ್ಲಿನ ಅವರ ಆರಂಭಿಕ ಯಶಸ್ಸು 2014 ರಲ್ಲಿ 26ನೇ ವಯಸ್ಸಿನಲ್ಲಿ ರೇವರ್‌ನಿಂದ ಸಂಸದರಾಗಿ ಆಯ್ಕೆಯಾಗಲು ಕಾರಣವಾಯಿತು. ಮೂರು ಬಾರಿ ಸಂಸದೆಯಾಗಿರುವ

ರಕ್ಷಾ ಖಡ್ಸೆ ಅವರು ಇದೀಗ 37ನೇ ವಯಸ್ಸಿನಲ್ಲಿ ಕೇಂದ್ರ ಸಚಿವೆಯಾಗಿದ್ದಾರೆ. ಅವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದು, ಅವರ ಪತಿ ನಿಖಿಲ್ ಖಡ್ಸೆ ಆತ್ಮಹತ್ಯೆಗೆ ಶರಣಾಗಿದ್ದರು.

ತಮ್ಮ ತೋಳುಗಳಲ್ಲಿ ಎರಡು ಮುದ್ದಾದ ಮಕ್ಕಳಿರುವ ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹಿಟ್ ಆಗಿದ್ದು, ಇದು ಅವರ ರಾಜಕೀಯ ಜವಾಬ್ದಾರಿಗಳೊಂದಿಗೆ ತಮ್ಮ ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸುವ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತಿದೆ.

“ನಾನು ನನ್ನ ರಾಜಕೀಯ ಜೀವನ ಆರಂಭಿಸಿದ ಸ್ಥಿತಿಯನ್ನು ಹಿಂತಿರುಗಿ ನೋಡಿದರೆ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸುವುದು ನನಗೆ ಅತ್ಯಂತ ದೊಡ್ಡ ವಿಷಯವಾಗಿದೆ. ನನ್ನ ಮಗನಿಗೆ ಕೇವಲ ಎರಡೂವರೆ ವರ್ಷ ಮತ್ತು ನನ್ನ ಮಗಳು ನಾಲ್ಕು ವರ್ಷದವಳಿದ್ದಾಗ ನನ್ನ ಪತಿ ನಿಧನರಾದರು. ನನ್ನ ವೈಯಕ್ತಿಕ ಜೀವನವು ನೋವಿನಿಂದ ತುಂಬಿತ್ತು. ಆದರೆ ಜನರ ಬೆಂಬಲ ಮತ್ತು ಪ್ರೀತಿ ನನಗೆ ಈ ದುಃಖಗಳನ್ನು ಮರೆಯಲು ಸಹಾಯ ಮಾಡಿತು” ಎಂದು ರಕ್ಷಾ ಹೇಳಿದ್ದಾರೆ.

ಇತ್ತೀಚಿಗೆ ನಡೆದ 2024ರ ಚುನಾವಣೆಯಲ್ಲಿ ರಕ್ಷಾ ಖಡ್ಸೆ ಅವರು ಎನ್‌ಸಿಪಿ-ಶರದ್ ಪವಾರ್ ಬಣದ ಅಭ್ಯರ್ಥಿಯನ್ನು 2,72,183 ಮತಗಳ ಅಂತರದಿಂದ ಸೋಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT