ವಾರಣಾಸಿ: ಸತತ ಮೂರನೇ ಬಾರಿ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿ ತಮ್ಮ ಸ್ವಕ್ಷೇತ್ರ ವಾರಣಾಸಿಗೆ ಮಂಗಳವಾರ ಭೇಟಿ ನೀಡಿದ ನರೇಂದ್ರ ಮೋದಿ, ತಾವು ಗಂಗಾಮಾತೆಯ ದತ್ತು ಪುತ್ರ ಎಂದು ಹೇಳಿದ್ದಾರೆ.
ಇಂದು ವಾರಣಾಸಿಯಲ್ಲಿ ನಡೆದ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಅವರು ದೇಶಾದ್ಯಂತ ಒಟ್ಟು 9.26 ಕೋಟಿ ರೈತರಿಗೆ ಒಟ್ಟು 20 ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಮೋದಿ, ವಾರಾಣಸಿಯ ಜನರು ನನ್ನನ್ನು ಮೂರನೇ ಬಾರಿಗೆ ಸಂಸದರಾಗಿ ಮಾತ್ರವಲ್ಲದೆ ದೇಶದ ಪ್ರಧಾನಿಯಾಗಿಯೂ ಆಯ್ಕೆ ಮಾಡಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನರು ನೀಡಿದ ಜನಾದೇಶವು ನಿಜವಾಗಿಯೂ ಅಭೂತಪೂರ್ವ ಮತ್ತು ಇತಿಹಾಸವನ್ನು ಸೃಷ್ಟಿಸಿದೆ ಎಂದರು.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 17ನೇ ಕಂತನ್ನು ಬಿಡುಗಡೆ ಮಾಡಲಾಗಿದ್ದು, ಇದು ರೈತರು ಮತ್ತು ಬಡವರಿಗೆ ಸಂಬಂಧಿಸಿದ ಹೊಸ ಸರ್ಕಾರದ ಮೊದಲ ನಿರ್ಧಾರ ಎಂದು ಪ್ರಧಾನಿ ಹೇಳಿದರು.
"ನಾನು ರೈತರು, ಮಹಿಳೆಯರು, ಯುವಕರು ಮತ್ತು ಬಡವರನ್ನು 'ವೀಕ್ಷಿತ್ ಭಾರತ್'ನ ಬಲವಾದ ಸ್ತಂಭಗಳಾಗಿ ಪರಿಗಣಿಸುತ್ತೇನೆ. ಬಾಬಾ ವಿಶ್ವನಾಥ್ ಮತ್ತು ಮಾ ಗಂಗಾ ಅವರ ಆಶೀರ್ವಾದ ಮತ್ತು ಕಾಶಿಯ ಜನರ ಅಪಾರ ಪ್ರೀತಿಯಿಂದ ನಾನು ದೇಶದ 'ಪ್ರಧಾನ ಸೇವಕ' ಆಗುವ ಭಾಗ್ಯವನ್ನು ಪಡೆದಿದ್ದೇನೆ. ಮೂರನೇ ಬಾರಿ."
ಕಾಶಿಯ ಜನರು ತಮ್ಮ ಪ್ರತಿನಿಧಿಯಾಗಿ ನನ್ನನ್ನು ಆಯ್ಕೆ ಮಾಡುವ ಮೂಲಕ ಆಶೀರ್ವದಿಸಿದ್ದಾರೆ ಎಂದು ಹೇಳಿದರು
ಗಂಗಾ ಮಾತೆಯೂ ನನ್ನನ್ನು ದತ್ತು ತೆಗೆದುಕೊಂಡಂತೆ ಭಾಸವಾಗುತ್ತಿದೆ. ಗಂಗಾ ಮಾತೆಯು ನನ್ನನ್ನು ಆಕೆಯ ಮಡಿಲಲ್ಲಿ ಇರಿಸಿಕೊಂಡಿದ್ದಾಳೆ. ನಾನು ವಾರಣಾಸಿಯ ಭಾಗವೇ ಆಗಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು.