ಸೇತುವೆಯನ್ನು ಪರಿಶೀಲಿಸಿದ ನಾನಾ ಪಟೋಳೆ 
ದೇಶ

ಅಟಲ್ ಸೇತು ಉದ್ಘಾಟನೆಯಾದ ಕೆಲವೇ ತಿಂಗಳಲ್ಲಿ ಬಿರುಕು, ಭ್ರಷ್ಟಾಚಾರದ ವಾಸನೆ: ಕಾಂಗ್ರೆಸ್

ದಕ್ಷಿಣ ಮುಂಬೈನಿಂದ ನವಿ ಮುಂಬೈಗೆ ಸಂಪರ್ಕ ಕಲ್ಪಿಸುವ ಸಮುದ್ರ ಸೇತುವೆ ಅಟಲ್ ಸೇತು ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ.

ಮುಂಬೈ: ದಕ್ಷಿಣ ಮುಂಬೈನಿಂದ ನವಿ ಮುಂಬೈಗೆ ಸಂಪರ್ಕ ಕಲ್ಪಿಸುವ ಸಮುದ್ರ ಸೇತುವೆ ಅಟಲ್ ಸೇತು ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಳೆ ಶುಕ್ರವಾರ ಆರೋಪಿಸಿದ್ದಾರೆ.

ಸೇತುವೆ ಉದ್ಘಾಟನೆಗೊಂಡ ಕೆಲವೇ ತಿಂಗಳೊಳಗೆ ಅದರಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಜನರ ಜೀವಕ್ಕೆ ಅಪಾಯವನ್ನುಂಟುಮಾಡಿದೆ ಎಂದು ಪಟೋಳೆ ಹೇಳಿದ್ದಾರೆ.

ಇಂದು ಹಗಲಿನಲ್ಲಿ ಸೇತುವೆಯನ್ನು ಪರಿಶೀಲಿಸಿದ ಪಟೋಳೆ, ಸೇತುವೆಯ ನಿರ್ಮಾಣ ಗುಣಮಟ್ಟ ಕಳಪೆಯಾಗಿದೆ ಮತ್ತು ರಸ್ತೆಯ ಒಂದು ಭಾಗವು ಒಂದು ಅಡಿಯಷ್ಟು ಕುಸಿದಿದೆ ಎಂದು ಪ್ರತಿಪಾದಿಸಿದರು.

ಸೇತುವೆಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಟೋಳೆ, ರಾಜ್ಯ ಸರ್ಕಾರ ಭ್ರಷ್ಟಾಚಾರದ ಎಲ್ಲ ಮಿತಿಗಳನ್ನು ದಾಟಿ ಜನರ ಜೀವವನ್ನು ಅಪಾಯಕ್ಕೆ ಸಿಲುಕಿಸಿದೆ. ಅಟಲ್ ಸೇತು ಸೇತುವೆಯ ಒಂದು ಭಾಗದಲ್ಲಿ ಉದ್ಘಾಟನೆಯಾದ ಮೂರು ತಿಂಗಳೊಳಗೆ ಬಿರುಕು ಕಾಣಿಸಿಕೊಂಡಿದೆ ಮತ್ತು ನವಿ ಮುಂಬೈ ಬಳಿಯ ಅರ್ಧ ಕಿಲೋಮೀಟರ್ ಉದ್ದದ ರಸ್ತೆಯು ಒಂದು ಅಡಿಯಷ್ಟು ಕುಸಿದಿದೆ ಎಂದು ಆರೋಪಿಸಿದರು.

ಆದರೆ, ಆಡಳಿತಾರೂಢ ಭಾರತೀಯ ಜನತಾ ಪಕ್ಷ ಹಾಗೂ ಯೋಜನೆಯ ನೋಡಲ್ ಏಜೆನ್ಸಿಯಾಗಿರುವ ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬಿರುಕು ಬಿಟ್ಟಿರುವುದು ಸೇತುವೆಯ ಮೇಲೆ ಅಲ್ಲ, ನವಿ ಮುಂಬೈನ ಉಲ್ವೆಯಿಂದ ಬರುವ ರಸ್ತೆಯಲ್ಲಿ ಎಂದು ಹೇಳಿದೆ.

ಮುಂಬೈ ಟ್ರಾನ್ಸ್-ಹಾರ್ಬರ್ ಲಿಂಕ್ ಎಂದೂ ಕರೆಯಲ್ಪಡುವ 'ಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತು' ಅನ್ನು ಈ ವರ್ಷದ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು.

17,840 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಆರು ಪಥಗಳ ಸೇತುವೆಯು 21.8 ಕಿಮೀ ಉದ್ದವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶ್ವೇತಭವನದಲ್ಲಿ ಚೀನಾ ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತ: ಕ್ಸಿ ಜಿನ್‌ಪಿಂಗ್‌ ಜೊತೆಗಿನ ಹಳೆಯ ನಂಟು ಸ್ಮರಿಸಿ, ‘ನಮ್ಮದು ನಿಜಕ್ಕೂ ಅದ್ಭುತ ಸ್ನೇಹ’ ಎಂದ ಟ್ರಂಪ್‌..!

'ಮೋದಿ, ಶಾ, ಜ್ಞಾನೇಶ್ ಕುಮಾರ್ ದೇಶದ್ರೋಹಿಗಳು'; ನೂರಕ್ಕೆ ನೂರರಷ್ಟು ಎಲ್ಲಾ ಚುನಾವಣೆಗಳಲ್ಲೂ ಅಕ್ರಮ; ಸಂಚುಕೋರರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ

'ಎನ್‌ಕೌಂಟರ್'ನಲ್ಲಿ ನನ್ನನ್ನು ಕೊಲ್ಲಬಹುದು: ಜೀವ ಭಯದಲ್ಲಿ ಸೋನಂ ವಾಂಗ್‌ಚುಕ್!

'ಹಿಂದುತ್ವ ಯಾರ ವಿರುದ್ಧವೂ ಅಲ್ಲ; ಅದು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತದೆ': ಉಪರಾಷ್ಟ್ರಪತಿ ರಾಧಾಕೃಷ್ಣನ್

ಲೀವರ್ ಕ್ಯಾನ್ಸರ್ ಗೆ 'ವೆಲ್ ಕಮ್' ಖ್ಯಾತಿಯ ಹಿರಿಯ ಬಾಲಿವುಡ್ ನಟ ಮುಷ್ತಾಕ್ ಖಾನ್ ಬಲಿ!