ಸಾಂದರ್ಭಿಕ ಚಿತ್ರ 
ದೇಶ

ಹೈದರಾಬಾದ್: ರೈಲಿನಲ್ಲಿ ಮಧ್ಯದ ಬರ್ತ್ ಕೊಂಡಿ ಕಳಚಿ ಬಿದ್ದು ಕೆಳಗಿನ ಬರ್ತ್ ನಲ್ಲಿ ಮಲಗಿದ್ದ ಕೇರಳ ಮೂಲದ ವೃದ್ಧ ಸಾವು!

ಕೇರಳದ 60 ವರ್ಷದ ಅಲಿ ಖಾನ್ ಟಿಕೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಜೂನ್ 16 ರಂದು ಮಿಲೇನಿಯಂ ಎಕ್ಸ್‌ಪ್ರೆಸ್‌ನಲ್ಲಿ ತ್ರಿಶೂರ್‌ನಿಂದ ಆಗ್ರಾ ಕಂಟೋನ್ಮೆಂಟ್‌ಗೆ ಪ್ರಯಾಣಿಸುತ್ತಿದ್ದರು.

ಹೈದರಾಬಾದ್: ಸ್ಲೀಪರ್ ಕೋರ್ ರೈಲಿನ ಕೆಳಗಿನ ಬರ್ತ್ ನಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಮಧ್ಯದ ಬರ್ತ್ ನ ಕೊಕ್ಕೆ ಬೇರ್ಪಟ್ಟು ಯುವಕ ಬಿದ್ದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಮೃತ ಪಟ್ಟಿರುವ ಘಟನೆ ಹೈದಾರಾಬಾದ್ ನಲ್ಲಿ ನಡೆದಿದೆ.

ಕೇರಳದ 60 ವರ್ಷದ ಅಲಿ ಖಾನ್ ಟಿಕೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಜೂನ್ 16 ರಂದು ಮಿಲೇನಿಯಂ ಎಕ್ಸ್‌ಪ್ರೆಸ್‌ನಲ್ಲಿ ತ್ರಿಶೂರ್‌ನಿಂದ ಆಗ್ರಾ ಕಂಟೋನ್ಮೆಂಟ್‌ಗೆ ಪ್ರಯಾಣಿಸುತ್ತಿದ್ದರು. ಅವರು ಸ್ಲೀಪರ್ ಕೋಚ್‌ನ ಕೆಳಗಿನ ಬರ್ತ್‌ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯದ ಬರ್ತ್ ನ ಚೈನ್ ಸರಿಯಾಗಿ ಲಾಕ್ ಮಾಡಲಾಗಿತ್ತು ಎಂದು ವರದಿಯಾಗಿದೆ. ಆದರೆ ಪ್ರಯಾಣದ ಸಮಯದಲ್ಲಿ, ಕೊಕ್ಕೆ ಬೇರ್ಪಟ್ಟಿದೆ. ಮಧ್ಯದ ಬರ್ತ್ ಅವರ ಮೇಲೆ ಬಿದ್ದು ಕುತ್ತಿಗೆಗೆ ಗಾಯವಾಗಿತ್ತು. ಪರಿಣಾಮ ಆತ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ರೈಲ್ವೆ ಸಿಬ್ಬಂದಿ ಸಂಜೆ 6.30 ರ ಸುಮಾರಿಗೆ ಘಟನೆಯ ಬಗ್ಗೆ ಮಾಹಿತಿ ಪಡೆದು, ರಾಮಗುಂಡಂನಲ್ಲಿ ರೈಲು ನಿಲ್ಲಿಸಿ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಲಿ ಅವರನ್ನು ವಾರಂಗಲ್‌ನ ಖಾಸಗಿ ಆಸ್ಪತ್ರೆಗೆ ಮತ್ತು ಹೈದರಾಬಾದ್‌ನ ಬೇಗಂಪೇಟೆಯಲ್ಲಿರುವ ಮತ್ತೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂನ್ 24ರಂದು ಮೃತಪಟ್ಟಿದ್ದು, ಮಂಚೇರಿಯಲ್ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಏತನ್ಮಧ್ಯೆ, ರೈಲ್ವೇ ಸಚಿವಾಲಯದ ಅಧಿಕೃತ ವಕ್ತಾರರು ಎಕ್ಸ್‌ನಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ, “ಆಸನವು ಹಾನಿಗೊಳಗಾದ ಸ್ಥಿತಿಯಲ್ಲಿಲ್ಲ, ಅದು ಕೆಳಗೆ ಬಿದ್ದಿಲ್ಲ ಅಥವಾ ಕುಸಿದಿಲ್ಲ ಅಥವಾ ಬಿದ್ದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ನಿಜಾಮುದ್ದೀನ್ ನಿಲ್ದಾಣದಲ್ಲಿ ಆಸನವನ್ನು ಪರಿಶೀಲಿಸಲಾಯಿತು, ಅದರಲ್ಲಿ ಯಾವುದೇ ತೊಂದರೆ ಕಂಡು ಬಂದಿಲ್ಲ. ಮೇಲಿನ ಬರ್ತ್‌ನಲ್ಲಿರುವವರು ಸರಿಯಾಗಿ ಸರಪಳಿಯನ್ನು ಹಾಕದೇ ಇದ್ದ ಕಾರಣ ಮೇಲಿನ ಸೀಟು ಕೆಳಗೆ ಬಿದ್ದಿದೆ. ಇದರಿಂದ ಈ ಅವಘಡ ಉಂಟಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!