ಗಡಿಯಲ್ಲಿರುವ ಭಾರತೀಯ ಸೇನೆ (ಸಂಗ್ರಹ ಚಿತ್ರ) Online Desk
ದೇಶ

ಜಮ್ಮು-ಕಾಶ್ಮೀರ ಗಡಿಯಾದ್ಯಂತ ಪಾಕಿಸ್ತಾನಿ ಪಡೆಗಳ ಭಯೋತ್ಪಾದಕ ಚಟುವಟಿಕೆ ಕ್ಷೀಣ

ಪಶ್ಚಿಮದ ಗಡಿಗಳಲ್ಲಿ ಹಾಗೂ ಜಮ್ಮು-ಕಾಶ್ಮೀರದಲ್ಲಿ ಹೆಚ್ಚಿನ ಅಲರ್ಟ್ ಕೈಗೊಂಡಿರುವ ಪರಿಣಾಮ ಗಡಿಯಾದ್ಯಂತ ಪಾಕ್ ಸೇನೆಯ ಭಯೋತ್ಪಾದಕ ಚಟುವಟಿಕೆಗಳು ಕ್ಷೀಣಿಸಿವೆ.

ನವದೆಹಲಿ: ಪಶ್ಚಿಮದ ಗಡಿಗಳಲ್ಲಿ ಹಾಗೂ ಜಮ್ಮು-ಕಾಶ್ಮೀರದಲ್ಲಿ ಹೆಚ್ಚಿನ ಅಲರ್ಟ್ ಕೈಗೊಂಡಿರುವ ಪರಿಣಾಮ ಗಡಿಯಾದ್ಯಂತ ಪಾಕ್ ಸೇನೆಯ ಭಯೋತ್ಪಾದಕ ಚಟುವಟಿಕೆಗಳು ಕ್ಷೀಣಿಸಿವೆ. ಈ ಮಾಹಿತಿಯನ್ನು ಗುಪ್ತಚರ ಏಜೆನ್ಸಿಗಳು ತನ್ನ ವರದಿಯ ಮೂಲಕ ಕೇಂದ್ರ ಗೃಹ ಸಚಿವಾಲಯ (ಎಂಹೆಚ್ಎ)ಗೆ ನೀಡಿದೆ.

ಗಡಿಯಲ್ಲಿ ಅಳವಡಿಸಿರುವ ಬೇಲಿಯ ಇನ್ನೊಂದು ಬದಿಯಿಂದ ಭಯೋತ್ಪಾದಕರ ಒಳನುಸುಳುವಿಕೆಗೆ ಸಹಾಯ ಮತ್ತು ಪ್ರೋತ್ಸಾಹ ಮತ್ತು ಸುರಂಗ ನಿರ್ಮಾಣದಲ್ಲಿ ಅವರಿಗೆ ಸಹಾಯ ಮಾಡುವ ಚಟುವಟಿಕೆಯಲ್ಲಿ ಪಾಕಿಸ್ತಾನದ ಅಧಿಕಾರಿಗಳ ಕಡೆಯಿಂದ ಗಮನಾರ್ಹವಾದ ಇಳಿತ ದಾಖಲಾಗಿದೆ ಗುಪ್ತಚರ ಸಂಸ್ಥೆಗಳು ಭಾನುವಾರ ತಿಳಿಸಿವೆ.

ಗುಪ್ತಚರ ಸಂಸ್ಥೆಗಳ ವರದಿಯ ಪ್ರಕಾರ, ಪಾಕಿಸ್ತಾನದ ಸೇನೆ, ರೇಂಜರ್‌ಗಳು ಮತ್ತು ಐಎಸ್‌ಐಗಳ ತಂತ್ರಗಳಲ್ಲಿನ ಬದಲಾವಣೆಯು ಈ ಹಂತದಲ್ಲಿ ಯಾವುದೇ ಹಿನ್ನಡೆ ಅಥವಾ ಪ್ರತಿದಾಳಿಯನ್ನು ತಪ್ಪಿಸುವ ಉದ್ದೇಶ ಹೊಂದಿರುವುದನ್ನು ಸೂಚಿಸುತ್ತದೆ, ಏಕೆಂದರೆ ಇದು ಅವರ ನಿಯಂತ್ರಣವನ್ನು ಮೀರಿ ಅಂತರರಾಷ್ಟ್ರೀಯ ಮತ್ತು ದೇಶೀಯ ಪರಿಣಾಮಗಳನ್ನು ಬೀರುತ್ತದೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಪಾಕಿಸ್ತಾನಿ ಪಡೆಗಳು ಭಯೋತ್ಪಾದಕರಿಗೆ ಒಳನುಸುಳುವ ಪ್ರಯತ್ನದಲ್ಲಿ ಮತ್ತು ಜಮ್ಮು ಮತ್ತು ಪಂಜಾಬ್ ವಲಯಗಳಲ್ಲಿ ವಿಶೇಷವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಗಡಿಯುದ್ದಕ್ಕೂ ಸುರಂಗಗಳನ್ನು ನಿರ್ಮಿಸಲು ಸಹಾಯ ಮಾಡುತ್ತಿವೆ.

ಪಾಕಿಸ್ತಾನದ ಭಾಗದಲ್ಲಿರುವ ರೇಂಜರ್‌ಗಳ ಗಡಿ ಹೊರ ಠಾಣೆಗಳಿಂದ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಕಳೆದ 6 ತಿಂಗಳಿನಿಂದ ಈ ನಡವಳಿಕೆಯಲ್ಲಿನ ಬದಲಾವಣೆಯನ್ನು ಭಾರತೀಯ ಗುಪ್ತಚರ ಸಂಸ್ಥೆಗಳು ಗಮನಿಸಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಳೆದ ವರ್ಷ ಆಗಸ್ಟ್-ಸೆಪ್ಟೆಂಬರ್ ವರೆಗೆ ಭಯೋತ್ಪಾದಕರ ಒಳನುಸುಳುವಿಕೆ ಯೋಜನೆಗಳು, ಸುರಂಗ ಅಗೆಯುವಿಕೆ ಮತ್ತು ಇತರ ಚಟುವಟಿಕೆಗಳಲ್ಲಿ ಭಯೋತ್ಪಾದಕರಿಗೆ ಸಹಾಯ ಮಾಡುವಲ್ಲಿ ಪಾಕಿಸ್ತಾನದ ಅಧಿಕಾರಿ ವರ್ಗ ತೊಡಗಿಸಿಕೊಂಡಿತ್ತು ಎಂದು ತಿಳಿದುಬಂದಿದೆ.

ಪಾಕಿಸ್ತಾನಿ ಪಡೆಗಳ ಸಕ್ರಿಯ ಬೆಂಬಲದೊಂದಿಗೆ ಭಯೋತ್ಪಾದಕರು ಜಮ್ಮು ಮತ್ತು ಪಂಜಾಬ್ ವಲಯಗಳಲ್ಲಿ ಸುರಂಗಗಳನ್ನು ನಿರ್ಮಿಸುತ್ತಿದ್ದಾರೆ ಎಂದು 2022 ರಲ್ಲಿ ಗುಪ್ತಚರ ವರದಿಗಳು ಸೂಚಿಸಿವೆ. 2021 ರಲ್ಲಿ BSF ಅವುಗಳಲ್ಲಿ ಕೆಲವನ್ನು ಪತ್ತೆಹಚ್ಚಿದ ನಂತರ ಸುರಂಗಗಳ ಮೇಲಿನ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT