ಪ್ರಧಾನಿ ಮೋದಿ
ಪ್ರಧಾನಿ ಮೋದಿ 
ದೇಶ

ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ತುಟ್ಟಿ ಭತ್ಯೆ ಶೇ.4ರಷ್ಟು ಹೆಚ್ಚಳ!

Vishwanath S

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಸಿಹಿ ಸುದ್ದಿ ನೀಡಿದೆ. ತುಟ್ಟಿ ಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದ್ದು ಶೇಕಡ 4ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಇದರೊಂದಿಗೆ ಕೇಂದ್ರ ನೌಕರರ ಭತ್ಯೆ ಶೇ.50ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಭತ್ಯೆ ಶೇಕಡ 46ರಷ್ಟಿತ್ತು. ಈ ತುಟ್ಟಿಭತ್ಯೆ 2024ರ ಜನವರಿ 1ರಿಂದ ಅನ್ವಯವಾಗುತ್ತದೆ. ಮಾರ್ಚ್ ಅಂತ್ಯದ ವೇಳೆಗೆ ಸಂಬಳದ ಜೊತೆಗೆ ಜಮಾ ಮಾಡಲಾಗುತ್ತದೆ. ಇದಕ್ಕೆ ಒಟ್ಟು ಎರಡು ತಿಂಗಳ ಬಾಕಿಯೂ ಸೇರಲಿದೆ. ಇದು ಸತತ ನಾಲ್ಕನೇ ಬಾರಿ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆಯಾಗಿದೆ. ತುಟ್ಟಿ ಭತ್ಯೆ ಹೆಚ್ಚಳದಿಂದ ಸರ್ಕಾರದ ಬೊಕ್ಕಸಕ್ಕೆ 12,868.72 ರೂ.ಗಳಷ್ಟು ಹೊರೆಯಾಗಲಿದೆ.

HRA ಕೂಡ ಹೆಚ್ಚಳ

ಈಗ ಹೊಸ ಹೆಚ್ಚಳದ ನಂತರ, ಡಿಎ ಶೇಕಡಾ 50ಕ್ಕೆ ತಲುಪುತ್ತದೆ. 7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ, ಈ ಹೆಚ್ಚಳದೊಂದಿಗೆ, ಕೇಂದ್ರ ಸರ್ಕಾರಿ ನೌಕರರಿಗೆ ಟೇಕ್-ಹೋಮ್ ವೇತನ ಪ್ಯಾಕೇಜ್‌ನಲ್ಲಿ ಹೆಚ್ಚಳವಾಗುವುದು ಖಚಿತ. ಏಳನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ, ಎಚ್‌ಆರ್‌ಎ ಹೆಚ್ಚಳಕ್ಕಾಗಿ ನಗರಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಈ ವರ್ಗಗಳು- X,Y & Z.

X ವರ್ಗದ ಉದ್ಯೋಗಿಗಳು ನಗರ/ಪಟ್ಟಣಗಳಲ್ಲಿ ವಾಸಿಸುತ್ತಿದ್ದರೆ, ಅವರ HRA ಶೇಕಡಾ 30ಕ್ಕೆ ಹೆಚ್ಚಾಗುತ್ತದೆ. ಅದೇ ರೀತಿ, Y ವರ್ಗಕ್ಕೆ HRA ದರವು 20 ಪ್ರತಿಶತ ಮತ್ತು Z ವರ್ಗಕ್ಕೆ ಇದು 10 ಪ್ರತಿಶತ ಇರುತ್ತದೆ. ಪ್ರಸ್ತುತ, ನಗರಗಳು/ಪಟ್ಟಣಗಳಲ್ಲಿ ವಾಸಿಸುವ ಉದ್ಯೋಗಿಗಳು X, Y & Z ಕ್ರಮವಾಗಿ 27, 18 ಮತ್ತು 9 ಪ್ರತಿಶತ HRA ಪಡೆಯುತ್ತಾರೆ.

SCROLL FOR NEXT