ಡಿಎಂಕೆ ಮುಖಂಡರ ಜೊತೆ ಕಮಲ್ ಹಾಸನ್
ಡಿಎಂಕೆ ಮುಖಂಡರ ಜೊತೆ ಕಮಲ್ ಹಾಸನ್ PTI
ದೇಶ

ಲೋಕಸಭೆ ಚುನಾವಣೆ 2024: ಡಿಎಂಕೆ ಮೈತ್ರಿಕೂಟ ಸೇರಿದ MNM ಪಕ್ಷ, ಸ್ಪರ್ಧೆಯಿಂದ ಹಿಂದೆ ಸರಿದ ಕಮಲ್ ಹಾಸನ್!

Vishwanath S

ಚೆನ್ನೈ: ನಟ ಕಮಲ್ ಹಾಸನ್ ನೇತೃತ್ವದ ಪಕ್ಷ ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಇಂದು ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನೇತೃತ್ವದ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡಿದ್ದು ಮುಂಬರುವ ಲೋಕಸಭೆ ಚುನಾವಣೆಗೆ ತನ್ನ ಬೆಂಬಲವನ್ನು ನೀಡಿದೆ.

ಡಿಎಂಕೆ ಜೊತೆಗಿನ ಸಭೆಯ ನಂತರ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣಾಚಲಂ ಅವರು, ಮಕ್ಕಳ್ ನೀಧಿ ಮೈಯಂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ಡಿಎಂಕೆ ಪರ ಪ್ರಚಾರ ನಡೆಸಲಿದ್ದಾರೆ. ಆದಾಗ್ಯೂ, ಈ ಮೈತ್ರಿಯ ಅಡಿಯಲ್ಲಿ, ಮಕ್ಕಳ್ ನೀಧಿ ಮಯಂ 2025ರಲ್ಲಿ ಒಂದು ರಾಜ್ಯಸಭಾ ಸ್ಥಾನವನ್ನು ಪಡೆದುಕೊಂಡಿದೆ.

ಎರಡು ವಾರಗಳ ಹಿಂದೆ ಪಕ್ಷದ ಏಳನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಈಗ ಪಕ್ಷ ರಾಜಕಾರಣ ಬಿಟ್ಟು ದೇಶದ ಬಗ್ಗೆ ಯೋಚಿಸುವ ಅಗತ್ಯವಿದೆ ಎಂದು ಹೇಳಿದ್ದರು. ದೇಶದ ಬಗ್ಗೆ ಯಾವ ಪಕ್ಷ ಅಥವಾ ಮೈತ್ರಿಕೂಟ ನಿಸ್ವಾರ್ಥವಾಗಿ ಯೋಚಿಸುತ್ತದೆಯೋ, ಅದರ ಭಾಗವಾಗಿ ನಮ್ಮ ಪಕ್ಷ ಮಕ್ಕಳ್ ನೀದಿ ಮಯ್ಯಂ ಇರಲಿದೆ. ನಾವು ಊಳಿಗಮಾನ್ಯ ರಾಜಕಾರಣದ ಭಾಗವಾಗುವುದಿಲ್ಲ ಎಂದು ಹೇಳಿದ್ದರು.

ನಾನು ಮತ್ತು ನನ್ನ ಪಕ್ಷ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ. ಆದರೆ ಈ ಮೈತ್ರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಬರೀ ಹುದ್ದೆಗಾಗಿ ಅಲ್ಲ, ದೇಶಕ್ಕಾಗಿ ಎಂಬ ಕಾರಣಕ್ಕೆ ಕೈ ಜೋಡಿಸಿದ್ದೇವೆ ಎಂದರು.

ಉಭಯ ನಾಯಕರು ಮಾಡಿಕೊಂಡಿರುವ ಮೈತ್ರಿ ಪ್ರಕಾರ, ಪುದುಚೇರಿಯ ಏಕೈಕ ಪ್ರದೇಶ ಹಾಗೂ ತಮಿಳುನಾಡಿನ 39 ಲೋಕಸಭಾ ಸ್ಥಾನಗಳ ಪ್ರಚಾರ ಕಾರ್ಯಕರ್ತರನ್ನು ಎಂಎನ್‌ಎಂ ಪಕ್ಷ ನೋಡಿಕೊಳ್ಳುತ್ತದೆ.

SCROLL FOR NEXT