ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ TNIE
ದೇಶ

ಹಿಮಾಲಯ ಪ್ರದೇಶದಲ್ಲಿ ಹಿಮಪಾತ ಹೆಚ್ಚು, ಬಯಲು ಸೀಮೆಯಲ್ಲಿ ಮಳೆ ಸಂಭವ, ಗೋಧಿ ಬೆಳೆಗೆ ಆತಂಕ: ಹವಾಮಾನ ಇಲಾಖೆ

Srinivas Rao BV

ನವದೆಹಲಿ: ಪಶ್ಚಿಮದ ಎರಡು ಮಾರುತಗಳ ಪರಿಣಾಮ ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಹಿಮಪಾತವಾಗಲಿದ್ದು, ಕೆಲವು ಬಯಲು ಸೀಮೆ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಳೆಯ ಪರಿಣಾಮ, ಕೆಲವೇ ವಾರಗಳಲ್ಲಿ ಕಟಾವಿಗೆ ಸಿದ್ಧವಿರುವ ಗೋಧಿ ಬೆಳೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಮಾ.10-12 ರ ನಡುವೆ ಜಮ್ಮು-ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್, ಮುಜಾಫರಾಬಾದ್, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ್ ಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದರೆ, ಮಾ.13 ರಂದು ಪಂಜಾಬ್, ಹರ್ಯಾಣ, ದೆಹಲಿ, ಪಶ್ಚಿಮ ಉತ್ತರ ಪ್ರದೇಶ, ಉತ್ತರ ರಾಜಸ್ಥಾನಗಳಲ್ಲಿ ಮಳೆಯಾಗಲಿದೆ. ಮಾ.13 ರಂದು ಮತ್ತೊಂದು ಸಣ್ಣ ಪ್ರಮಾಣದ ಪಶ್ಚಿಮ ಮಾರುತ ಬೀಸಲಿದ್ದು, ವಾಯುವ್ಯ ಭಾರತದಲ್ಲಿ ಜೋರು ಗಾಳಿ ಸಹಿತ ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ.

"ಬಿರುಸಿನ ಗಾಳಿ ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನಗಳಲ್ಲಿ ಗೋಧಿ ಬೆಳೆಗಳ ಮೇಲೆ ಪರಿಣಾಮ ಬೀರುತ್ತವೆ" ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಗೋಧಿ ಮತ್ತು ಬಾರ್ಲಿ ರಿಸರ್ಚ್‌ನ ಪ್ರಧಾನ ವಿಜ್ಞಾನಿ ಭೂದೇವ ಸಿಂಗ್ ತ್ಯಾಗಿ ಹೇಳಿದರು. "ಆಲಿಕಲ್ಲು ಮತ್ತು ಅಕಾಲಿಕ ಮಳೆಯು ಹೆಚ್ಚಾಗಿ ಒಣ ಪ್ರದೇಶದಲ್ಲಿ ಸಾಸಿವೆ ಮತ್ತು ಅವರೆ ಬೆಳೆಗಳು ಮತ್ತು ಗೋಧಿ ಬೆಳೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

ಅಕಾಲಿಕ ಮಳೆ ಗೋಧಿ ಬೆಳೆಗಳ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದು ರಾಜಸ್ಥಾನ ಮೂಲದ ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. “ಕಳೆದ ವಾರದ ಆಲಿಕಲ್ಲು ಮಳೆ ಮತ್ತು ಮಳೆ ಈಗಾಗಲೇ ಬೆಳೆಗಳ ಕೊಯ್ಲು ವಿಳಂಬವಾಗಿದೆ. ಮಳೆ ಬಂದರೆ ಅದು ಗೋಧಿಯ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು ಎಂದು ರಾಜಸ್ಥಾನದ ಚೆಸ್ಟಾ ಎಂಟರ್‌ಪ್ರೈಸ್‌ನ ಸಿಪಿ ಗುಪ್ತಾ ಹೇಳಿದ್ದಾರೆ.

SCROLL FOR NEXT