ಬೋಟ್ ನಲ್ಲಿ ಬಂಧಿತ ಆರೋಪಿಗಳು
ಬೋಟ್ ನಲ್ಲಿ ಬಂಧಿತ ಆರೋಪಿಗಳು 
ದೇಶ

ಗುಜರಾತ್‌: ಡ್ರಗ್ಸ್ ಸಾಗಿಸುತ್ತಿದ್ದ ಬೋಟ್, ಅದರಲ್ಲಿದ್ದ ಪಾಕ್ ಸಿಬ್ಬಂದಿಯ ಬಂಧನ

Lingaraj Badiger

ಅಹಮದಾಬಾದ್: ಗುಜರಾತ್ ಕರಾವಳಿಯಲ್ಲಿ 60 ಪ್ಯಾಕೆಟ್ ಡ್ರಗ್ಸ್ ಸಾಗಿಸುತ್ತಿದ್ದ ದೋಣಿಯನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಹಡಗಿನಲ್ಲಿದ್ದ ಆರು ಪಾಕಿಸ್ತಾನಿ ಸಿಬ್ಬಂದಿಯನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖಚಿತ ಮಾಹಿತಿ ಆಧಾರದ ಮೇಲೆ ಭಾರತೀಯ ಕೋಸ್ಟ್ ಗಾರ್ಡ್, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‌ಸಿಬಿ) ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಅರಬ್ಬಿ ಸಮುದ್ರದಲ್ಲಿ ಅಂತರರಾಷ್ಟ್ರೀಯ ಕಡಲ ಗಡಿ ರೇಖೆ(ಐಎಂಬಿಎಲ್) ಬಳಿ ಜಂಟಿ ಕಾರ್ಯಾಚರಣೆ ನಡೆಸಿ, ಡ್ರಗ್ಸ್ ಸಾಗಿಸುತ್ತಿದ್ದ ದೋಣಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಎಟಿಎಸ್ ಎಸ್ ಪಿ ಸುನಿಲ್ ಜೋಶಿ ಹೇಳಿದ್ದಾರೆ.

"ಪೋರಬಂದರ್ ಕರಾವಳಿಯಿಂದ ಸುಮಾರು 180 ನಾಟಿಕಲ್ ಮೈಲು ದೂರದಲ್ಲಿ ಸುಮಾರು 60 ಪ್ಯಾಕೆಟ್ ಡ್ರಗ್ಸ್ ಸಾಗಿಸುತ್ತಿದ್ದ ಹಡಗನ್ನು ವಶಪಡಿಸಿಕೊಳ್ಳಲಾಗಿದೆ. ಆರು ಪಾಕಿಸ್ತಾನಿ ಸಿಬ್ಬಂದಿಗಳೊಂದಿಗೆ ದೋಣಿಯನ್ನು ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆಯಲಾಗಿದೆ" ಎಂದು ಅವರು ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಲ್ಲಿ ಅರಬ್ಬಿ ಸಮುದ್ರದಲ್ಲಿ ತನಿಖಾ ಸಂಸ್ಥೆಗಳು ನಡೆಸಿದ ಎರಡನೇ ಪ್ರಮುಖ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆ ಇದಾಗಿದೆ.

SCROLL FOR NEXT