ನಯಾಬ್ ಸಿಂಗ್ ಸೈನಿ
ನಯಾಬ್ ಸಿಂಗ್ ಸೈನಿ 
ದೇಶ

ಹರಿಯಾಣ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ ನೂತನ ಸಿಎಂ ಸೈನಿ

Lingaraj Badiger

ಚಂಡೀಗಢ: ಹರಿಯಾಣ ನೂತನ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೇತೃತ್ವದ ಸರ್ಕಾರ ಬುಧವಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದೆ. ಮೊನ್ನೆ ಮೊನ್ನೆಯಷ್ಟೇ ಸಭಾಧ್ಯಕ್ಷರು ಎರಡು ಗಂಟೆಗಳ ಕಾಲಾವಕಾಶವನ್ನು ಮಂಡಿಸಿ ಚರ್ಚೆ ನಡೆಸಿದ್ದರು.

ನಿನ್ನೆಯಷ್ಟೇ ಹರಿಯಾಣ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಸೈನಿ ಅವರು ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಕೋರಿ ಪ್ರಸ್ತಾವನೆ ಮಂಡಿಸಿದರು.

ಜನನಾಯಕ ಜನತಾ ಪಕ್ಷದ(ಜೆಜೆಪಿ) ಶಾಸಕರಾದ ದೇವೆಂದರ್ ಸಿಂಗ್ ಬಬ್ಲಿ, ರಾಮ್ ಕುಮಾರ್ ಗೌತಮ್, ಈಶ್ವರ್ ಸಿಂಗ್, ರಾಮ್ ನಿವಾಸ್ ಮತ್ತು ಜೋಗಿ ರಾಮ್ ಸಿಹಾಗ್ ಅವರು ವಿಶ್ವಾಸಮತ ಪ್ರಸ್ತಾವನೆ ಮಂಡಿಸಿದ ನಂತರ ಸದನದಿಂದ ನಿರ್ಗಮಿಸಿದರು. ಜೆಜೆಪಿ ತನ್ನ 10 ಶಾಸಕರಿಗೆ ವಿಶ್ವಾಸಮತ ಯಾಚನೆಯ ವೇಳೆ ವಿಧಾನಸಭೆಗೆ ಗೈರುಹಾಜರಾಗುವಂತೆ ವಿಪ್ ಜಾರಿ ಮಾಡಿತ್ತು. ಸದನದಲ್ಲಿ ರಾಜ್ಯದ ಮಾಜಿ ಗೃಹ ಸಚಿವ ಅನಿಲ್ ವಿಜ್ ಸಹ ಉಪಸ್ಥಿತರಿದ್ದರು.

ಪ್ರಸ್ತಾವನೆ ಕುರಿತ ಚರ್ಚೆ ವೇಳೆ ಕಾಂಗ್ರೆಸ್ ಶಾಸಕರು, ತುರ್ತು ವಿಧಾನಸಭಾ ಅಧಿವೇಶನ ಕರೆಯುವ ಅಗತ್ಯ ಏನಿತ್ತು ಎಂದು ಸ್ಪೀಕರ್ ಜಿಯಾನ್ ಚಂದ್ ಗುಪ್ತಾ ಅವರನ್ನು ಕೇಳಿದರು.

"ಯಾವುದೇ ತುರ್ತು ಪರಿಸ್ಥಿತಿ ಇರಲಿಲ್ಲ". ಆದರೂ ತರ್ತು ಅಧಿವೇಶನ ಕರೆಯಲಾಗಿದೆ ಮತ್ತು ಶಾಸಕರಿಗೆ ಸರಿಯಾದ ಸಮಯ ನೀಡಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಹೇಳಿದರು.

ನಿನ್ನೆ ಸಂಜೆ ಪ್ರಮಾಣ ವಚನ ಸ್ವೀಕರಿಸಿದ ನಂತರ ವರದಿಗಾರರೊಂದಿಗೆ ಮಾತನಾಡಿದ್ದ ಸೈನಿ, 48 ಶಾಸಕರ ಬೆಂಬಲದ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದೇವೆ ಮತ್ತು ಬಿಜೆಪಿ ಸರ್ಕಾರ ಸದನದಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಲು ಬುಧವಾರ ವಿಧಾನಸಭೆ ಅಧಿವೇಶನ ಕರೆಯುವಂತೆ ಕೇಳಿಕೊಂಡಿದ್ದೇವೆ ಎಂದು ಹೇಳಿದ್ದರು.

SCROLL FOR NEXT