ಯೂಟ್ಯೂಬರ್ ಎಲ್ವಿಶ್ ಯಾದವ್ ಬಂಧನ
ಯೂಟ್ಯೂಬರ್ ಎಲ್ವಿಶ್ ಯಾದವ್ ಬಂಧನ 
ದೇಶ

ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಕೆ ಕೇಸ್: ಯೂಟ್ಯೂಬರ್ ಎಲ್ವಿಶ್ ಯಾದವ್ ಗೆ 14 ದಿನಗಳ ನ್ಯಾಯಾಂಗ ಬಂಧನ

Nagaraja AB

ನೋಯ್ಡಾ: ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಕೆ ಪ್ರಕರಣದಲ್ಲಿ ಬಿಗ್ ಬಾಸ್ ಒಟಿಟಿ ವಿಜೇತ, ಯೂಟ್ಯೂಬರ್ ಎಲ್ವಿಶ್ ಯಾದವ್ ಬಂಧನದ ನಂತರ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಕಳೆದ ವರ್ಷ ರೇವ್ ಪಾರ್ಟಿಗಳಲ್ಲಿ ಹಾವಿನ ವಿಷ ಬಳಕೆ ಮಾಡಿದ್ದಕ್ಕಾಗಿ ಯಾದವ್ ಮತ್ತಿತರ ಐವರ ವಿರುದ್ಧ ನೋಯ್ಡಾದಲ್ಲಿ ವನ್ಯಜೀವಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಕಳೆದ ವರ್ಷ ನವೆಂಬರ್ 3 ರಂದು ನೋಯ್ಡಾದ ಸೆಕ್ಟರ್ 51 ರ ಬ್ಯಾಂಕ್ವೆಟ್ ಹಾಲ್ ಮೇಲೆ ದಾಳಿ ನಡೆಸಿದ್ದ ಪೊಲೀಸರು ನಾಲ್ವರು ಹಾವಾಡಿಗರು ಸೇರಿದಂತೆ ಐವರನ್ನು ಬಂಧಿಸಿದ್ದರು ಮತ್ತು ಒಂಬತ್ತು ಹಾವುಗಳು ಮತ್ತು ವಿಷವನ್ನು ವಶಪಡಿಸಿಕೊಂಡರು. ರೇವ್ ಪಾರ್ಟಿಗಳಲ್ಲಿ ಎಲ್ವಿಶ್ ಯಾದವ್ ಹಾವುಗಳನ್ನು ಬಳಸಿ ವಿಡಿಯೋ ಶೂಟ್ ಕೂಡ ಮಾಡಿದ್ದರೆನ್ನಲಾಗಿದೆ. ಎಲ್ಲಾ ಒಂಬತ್ತು ಹಾವುಗಳಲ್ಲಿ ವಿಷ ಗ್ರಂಥಿಗಳು ಕಾಣೆಯಾಗಿವೆ ಎಂದು ತನಿಖೆಯಿಂದ ತಿಳಿದುಬಂದಿದೆ. ಇವರಿಂದ 20 ಎಂಎಲ್ ಹಾವಿನ ವಿಷವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆದರೆ ಎಲ್ವಿಶ್ ಆರೋಪಗಳನ್ನು ತಳ್ಳಿಹಾಕಿದ್ದು, ಆಧಾರರಹಿತ, ನಕಲಿ ಮತ್ತು ಶೇಕಡಾ 1 ರಷ್ಟು ಸತ್ಯವಲ್ಲ ಎಂದು ಹೇಳಿದ್ದರು. ಎಲ್ವಿಶ್ ಯಾದವ್ ಮತ್ತು ಇತರ ಆರು ಮಂದಿ ವಿರುದ್ಧ ವನ್ಯಜೀವಿ (ರಕ್ಷಣೆ) ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 120 ಎ (ಅಪರಾಧ ಪಿತೂರಿ) ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು. ಈ ಹಿಂದೆ ಎಲ್ವಿಶ್‌ನನ್ನು ವಿಚಾರಣೆಗೊಳಪಡಿಸಲಾಗಿದ್ದರೂ, ಪೊಲೀಸರು ಮಾಜಿ ಬಿಗ್ ಬಾಸ್ ಸ್ಪರ್ಧಿಯನ್ನು ಬಂಧಿಸಿರಲಿಲ್ಲ.

SCROLL FOR NEXT