ಮೊಹಮ್ಮದ್ ನಲಪಾಡ್
ಮೊಹಮ್ಮದ್ ನಲಪಾಡ್ 
ದೇಶ

ಇಡಿಯಿಂದ ಮೊಹಮ್ಮದ್ ನಲಪಾಡ್ ಆಪ್ತ, ಕೇರಳದ ಚಿನ್ನದ ವ್ಯಾಪಾರಿಯ ಆಸ್ತಿ ಜಪ್ತಿ

Lingaraj Badiger

ನವದೆಹಲಿ: ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಆಪ್ತ, ಕೇರಳ ಮೂಲದ ಚಿನ್ನದ ವ್ಯಾಪಾರಿ ಮೊಹಮ್ಮದ್ ಹಫೀಜ್ ಗೆ ಸಂಬಂಧಿಸಿದ 12.5 ಲಕ್ಷ ರೂಪಾಯಿ ಮೌಲ್ಯದ 1,672.8 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇಡಿ) ಬುಧವಾರ ತಿಳಿಸಿದೆ.

ಮಾರ್ಚ್ 14, 15, ಮತ್ತು 16 ರಂದು ಕೇರಳ, ಕರ್ನಾಟಕ ಮತ್ತು ಗೋವಾ ಸೇರಿದಂತೆ ಒಂಬತ್ತು ಸ್ಥಳಗಳಲ್ಲಿ ದಾಳಿ ಮಾಡಿದ್ದ ಇಡಿ, 1 ಕೆಜಿ 672 ಗ್ರಾಂ ಚಿನ್ನ, 7 ಮೊಬೈಲ್ ವಶ ಪಡಿಸಿಕೊಳ್ಳಲಾಗಿದೆ. ಅದರೊಂದಿಗೆ ಬ್ಯಾಂಕ್‌ ಖಾತೆಗಳಲ್ಲಿದ್ದ 4.4 ಕೋಟಿ ಹಣವನ್ನು ಫ್ರೀಜ್‌ ಮಾಡಲಾಗಿದೆ ಮತ್ತು ವಿವಿಧ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.

ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೇರಳ ಪೊಲೀಸರು, ಗೋವಾ ಪೊಲೀಸರು ಮತ್ತು ಕರ್ನಾಟಕ ಪೊಲೀಸರು ದಾಖಲಿಸಿದ ಪ್ರಥಮ ಮಾಹಿತಿ ವರದಿಯ ಆಧಾರದ ಮೇಲೆ ಇಡಿ ತನಿಖೆಯನ್ನು ಪ್ರಾರಂಭಿಸಿದ್ದು, ಮೊಹಮ್ಮದ್ ಹಫೀಜ್ ಮತ್ತು ಆತನ ಸಹಚರರು ವಂಚನೆಯ ಅಪರಾಧಗಳಲ್ಲಿ ತೊಡಗಿದ್ದು, ದುರ್ಬಳಕೆ, ದಾಖಲೆಗಳ ನಕಲು, ದಾಖಲೆಗಳ ತಯಾರಿ ಸೇರಿದಂತೆ ಹಲವು ಆರೋಪವನ್ನು ಹಫೀಜ್‌ ಮೇಲೆ ಹೊರಿಸಲಾಗಿದೆ.

"ಶೋಧ ಕಾರ್ಯಾಚರಣೆಯಲ್ಲಿ, ಮೊಹಮ್ಮದ್ ಹಫೀಜ್ ಬೆಂಗಳೂರಿನ ಶಾಂತಿ ನಗರ ಕ್ಷೇತ್ರದ ಶಾಸಕ ಎನ್.ಎ.ಹರೀಸ್ ಹೆಸರಿನಲ್ಲಿ ಕರ್ನಾಟಕ ವಿಧಾನಸಭೆ ಹೊರಡಿಸಿದ ಅಧಿಕೃತ ಪ್ರೋಟೋಕಾಲ್ ಸ್ಟಿಕ್ಕರ್ ಅನ್ನು ಪ್ರದರ್ಶಿಸುವ ವಾಹನವನ್ನು ಬಳಸುತ್ತಿದ್ದರು" ಎಂದು ಸಂಸ್ಥೆ ತಿಳಿಸಿದೆ.

‘‘ಈ ವಾಹನವನ್ನು ಎನ್‌ಎ ಹಾರಿಸ್ ಪುತ್ರ ಮಹಮ್ಮದ್ ಹಾರಿಸ್ ನಲಪಾಡ್ ಖರೀದಿಸಿದ್ದು, ಅದನ್ನು ಮೊಹಮ್ಮದ್ ಹಾರಿಸ್ ನಲಪಾಡ್ ಅವರ ನಿಕಟ ಸಂಬಂಧಿ ನಫೀಹ್ ಮೊಹಮ್ಮದ್ ನಾಸರ್ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ತಿಳಿದುಬಂದಿದೆ.

ಮೊಹಮ್ಮದ್ ಹಾರಿಸ್ ನಲಪಾಡ್ ಪ್ರಸ್ತುತ ಕರ್ನಾಟಕ ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್ ಹಫೀಜ್ ಅವರ ಆತ್ಮೀಯ ಸ್ನೇಹಿತರಾಗಿದ್ದಾರೆ ಎಂದು ಇಡಿ ತಿಳಿಸಿದೆ.

SCROLL FOR NEXT